ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಸ್ಟಾರ್ ನಟನ ಮಗಳು

ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಅವರ ಪುತ್ರಿ ಬಾಲಿವುಡ್ ಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದುವಲ್ಲಿ ಸಫಲರಾಗಿದ್ದಾರೆ. ಹೌದು ಬಾಲಿವುಡ್ ಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಸುಹಾನಾ ಖಾನ್ ಇನ್ಸ್ಟಾಗ್ರಾಂ ನಲ್ಲಿ ಎರಡು ಮಿಲಿಯನ್ ಗೂ ಅಧಿಕ ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಬಂದಿರುವ ಸುಹಾನಾ ಖಾನ್ ಅವರಿಗೆ ನಟನೆಯಲ್ಲಿ ಆಸಕ್ತಿ ಇದೆ ಎಂದು ಈ ಹಿಂದೆ ಶಾರುಖಾನ್ ಹೇಳಿದ್ದರು. ಹಾಗಿದ್ದರೆ ಸುಹಾನ ಅವರು ಕೂಡ ತಂದೆಯಂತೆ ಬಾಲಿವುಡ್ ನಲ್ಲಿ ಮಿಂಚಲಿದ್ದಾರಾ ಎಂದು ಹಲವರು ಪ್ರಶ್ನೆ ಕೇಳುತ್ತಿದ್ದರು. ಇದೀಗ ಸುಹಾನಾ ಖಾನ್ ಅವರು ಬಾಲಿವುಡ್ ಗೆ ಎಂಟ್ರಿ ಕೊಡುವುದು ಪಕ್ಕ ಎನ್ನುವಂತೆ ತೋರುತ್ತಿದೆ.

ಏಕೆಂದರೆ ಈಗಾಗಲೇ ಹಲವು ಸಣ್ಣ ಸಣ್ಣ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಸುಹಾನಾ ಖಾನ್ ಅವರು ಪ್ರತಿಷ್ಠಿತ ಮ್ಯಾಗಜಿನ್ ಗಳಿಗೂ ಪೋಸ್ ನೀಡುತ್ತಿದ್ದಾರೆ. ಸುಹಾನಾ ಖಾನ್ ಅವರ ನಟನಾ ಭವಿಷ್ಯಕ್ಕೆ ಈಗಾಗಲೇ ಅವರ ತಾಯಿ ಗೌರಿ ಖಾನ್ ಪ್ಲಾನ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಸುಹಾನ ಅವರು ಕೂಡ ತಮ್ಮ ನಟನಾ ಭವಿಷ್ಯಕ್ಕಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೌದು ಸುಹಾನ ಅವರು ಉತ್ತಮ ತರಬೇತುದಾರೊಂದಿಗೆ ಅಭಿನಯದ ತರಬೇತಿಯನ್ನು ಮುಗಿಸಿದ್ದು, ಈಗಾಗಲೇ ಇವರ ನಟನೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಉಡುಪುಗಳನ್ನು ಧರಿಸಿ ಸುಹಾನಾ ಖಾನ್ ಫೋಟೋಗೆ ಪೋಸ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳನ್ನು ಹರಿಬಿಡುತ್ತಾರೆ. ಅವರ ಇತ್ತೀಚಿನ ಫೋಟೋಗಳು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನೀವು ಬೇಗ ಬಾಲಿವುಡ್ ಗೆ ಬನ್ನಿ ಪ್ಲೀಸ್. ನಿಮ್ಮನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸುಹಾನಾ ಖಾನ್ ಅವರ ಅಭಿಮಾನಿ ಬಳಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸುಹಾನ ಅವರು ಇನ್ಸ್ಟಾಗ್ರಾಂ ನಲ್ಲಿ ಹಾಕುವ ಪೋಸ್ಟ್ ಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಬಾಲಿವುಡ್ ಪ್ರವೇಶ ಯಾವಾಗ ಎಂದು ಕೇಳುತ್ತಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ಇವರು ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ.

ಸ್ವತಹ ಶಾರುಖ್ ಖಾನ್ ಅವರು ಸುಹಾನ ಅವರಿಗೆ ನಟನೆಯಲ್ಲಿ ಆಸಕ್ತಿ ಇದೆ ಎಂದು ಹೇಳಿರುವುದರಿಂದ ಸುಹಾನ ಅವರು ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಸುಹಾನ ಅವರು ಹಲವು ಬಾರಿ ಅವರ ತಂದೆಯೊಂದಿಗೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಶಾರುಖಾನ್ ಪುತ್ರಿ ಭಾಗಿಯಾಗಿದ್ದರು. ಮೆಗಾ ಹರಾಜಿನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದ ಇವರನ್ನು ನೋಡಿ ಇವರ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಸುಹಾನ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ತಿಳಿದುಬಂದಿಲ್ಲ. ಸದ್ಯದಲ್ಲೇ ಸಿನಿಮಾ ಅನೌನ್ಸ್ ಆಗಲಿದೆ ಎಂದು ಬಾಲಿವುಡ್ ನಗರಿಯಲ್ಲಿ ಸುದ್ದಿಗಳು ಹರಿದಾಡುತ್ತಿವೆ.

%d bloggers like this: