ದಕ್ಷಿಣ ಭಾರತದ ಸುಪ್ರಸಿದ್ದ ನಟಿಯ ತಂಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ, ಇತ್ತೀಚೆಗೆ ಸ್ಟಾರ್ ನಟನಟಿಯರ ಕುಟುಂಬದಿಂದ ಹೊಸ ಹೊಸ ಕಲಾವಿದರು ಬಣ್ಣದ ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅಂತೆಯೇ ಇದೀಗ ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ನಲ್ಲಿ ಅಪಾರ ಮಿಂಚುತ್ತಿರುವ ಜನಪ್ರಿಯ ನಟಿ ಸಾಯಿ ಪಲ್ಲವಿ ಅವರ ತಂಗಿ ಪೂಜಾ ಕಣ್ಣನ್ ಕೂಡ ನಟನೆಯತ್ತ ವಾಲಿದ್ದಾರೆ. ಈ ಮುಂಚೆ ಪೂಜಾ ಕಣ್ಣನ್ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಅವರ ಬಳಿ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ಇದೀಗ ಮೊಟ್ಟ ಮೊದಲ ಬಾರಿಗೆ ಎ.ಎಲ್.ವಿಜಯ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ತಿರೈ ಸೆವ್ವನಂ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಸಮುದ್ರ ಖಣಿ ಅವರ ಮಗಳ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಅವರ ತಂಗಿ ಪೂಜಾ ಕಣ್ಣನ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ತಿರೈ ಸೆವ್ವನಂ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ನಟ, ನಿರ್ದೇಶಕ ಸಮುದ್ರಖಣಿ ಅವರು ಪೂಜಾ ಕಣ್ಣನ್ ಅವರನ್ನು ಸೈಕಲ್ ಅಲ್ಲಿ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದಾರೆ. ಈ ಪೋಸ್ಟರ್ ನೋಡಿದ ತಕ್ಷಣ ಪೂಜಾ ಕಣ್ಣನ್ ಅವರು ನಟಿ ಸಾಯಿ ಪಲ್ಲವಿ ಅವರ ರೀತಿಯಾಗಿ ಕಾಣಿಸಿದ್ದಾರೆ. ಇನ್ನು ಪುಜಾ ಕಣ್ಣನ್ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮೊದಲು ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡುವುದರ ಜೊತೆಗೆ ಖಾರಾ ಎಂಬ ಕಿರು ಚಿತ್ರದಲ್ಲಿಯೂ ಕೂಡ ನಟಿಸಿದ್ದರು. ಇನ್ನು ಈ ಚಿತ್ತಿರೈ ಸೆವ್ವನಂ ಸಿನಿಮಾ ತಂದೆ ಮಗಳ ಭಾಂದವ್ಯವನ್ನು ಸಾರುವ ಕಥಾಹಂದರ ಹೊಂದಿದ್ದು, ಇದೇ ಡಿಸೆಂಬರ್ ಮೂರರಂದು ಪ್ರಸಿದ್ದ ಓಟಿಟಿ ಪ್ಲಾಟ್ ಫಾರ್ಮ್ ಆದಂತಹ ಜೀ಼5ನಲ್ಲಿ ತೆರೆ ಕಾಣಲಿದ್ದು, ಪೂಜಾ ಕಣ್ಣನ್ ಅವರಿಗೆ ಸಿನಿ ಪ್ರೇಕ್ಷಕರು ಯಾವ ರೀತಿಯಾಗಿ ಪ್ರೋತ್ಸಾಹ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಅಮಿರ್ತಾ ಸ್ಟುಡಿಯೋ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ತರೈ ಸೆವ್ವನಂ ಚಿತ್ರಕ್ಕೆ ಎ.ಎಲ್.ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಸ್ಯಾಮ್ ಸಿ.ಎಸ್.ರಾಗ ಸಂಯೋಜನೆ ಮಾಡಿದ್ದಾರೆ.