ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಸ್ಟಾರ್ ನಟಿಯ ಎರಡನೇ ಮಗಳು

ಚಿತ್ರರಂಗದಲ್ಲಿ ಅತ್ಯುತ್ತಮ ನಟಿ ಯಾರು ಎಂದು ಕೇಳಿದರೆ ಎಲ್ಲರ ಬಾಯಲ್ಲಿ ಕೇಳಿಬರುವ ಮೊದಲ ಹೆಸರು ಬಾಲಿವುಡ್ ನಟಿ ಶ್ರೀದೇವಿ. ಚಿತ್ರರಂಗದಲ್ಲಿ ಇವರ ನಟನೆಗೆ ಸರಿಸಾಟಿ ಇಲ್ಲ. ಹಲವು ದಶಕಗಳ ಕಾಲ ಸ್ಟಾರ್ ನಟಿಯಾಗಿ ಮೆರೆದ ಇವರು, ನಟನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಟಿ ಶ್ರೀದೇವಿಯವರ ಅಕಾಲಿಕ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಚಿತ್ರರಂಗ ಸದಾ ಇವರನ್ನು ಹಾಗೂ ಅವರ ನಟನೆಯನ್ನು ಮಿಸ್ ಮಾಡಿಕೊಳ್ಳುತ್ತದೆ. ನಟಿ ಶ್ರೀದೇವಿ ಅವರ ನಿಧನದ ನಂತರ ಶ್ರೀದೇವಿ ಹಾಗೂ ಬೋನಿಕಪೂರ್ ಮಗಳಾದ ಜಾನವಿ ಕಪೂರ್ ಅವರು ಕೂಡ ಚಿತ್ರರಂಗಕ್ಕೆ ಕಾಲಿಟ್ಟರು. ಜಾನವಿ ಕಪೂರ್ ಕೂಡ ಒಂದಾದಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.

ಸದ್ಯಕ್ಕೆ ಹಲವಾರು ಪ್ರಾಜೆಕ್ಟ್ ಗಳಲ್ಲಿ ಸಕ್ರಿಯರಾಗಿರುವ ಇವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಯಶಸ್ವಿ ನಿರ್ಮಾಪಕರಾಗಿರುವ ಬೋನಿಕಪೂರ್ ಅವರು ತಮ್ಮ ಮಕ್ಕಳ ಸಿನಿಮಾಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಈಗಾಗಲೇ ಅವರ ಹಿರಿಯ ಮಗ ಅರ್ಜುನ್ ಕಪೂರ್, ಪುತ್ರಿ ಜಾನ್ವಿ ಕಪೂರ್ ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಇದೀಗ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಕಿರಿಯ ಮಗಳು ಕೂಡ ಬಾಲಿವುಡ್ ನಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಹೌದು ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕೂಡ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಮಕ್ಕಳ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ಬೋನಿ ಕಪೂರ್ ಅವರು, ನಿರ್ಮಾಪಕನಾಗಿ ನಾನು ನನ್ನ ಅನುಭವಗಳ ಆಧಾರದಲ್ಲಿ ನನ್ನ ಮಕ್ಕಳಿಗೆ ಸಲಹೆ ನೀಡುತ್ತೇನೆ.

ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಅವರೇ. ನಾನು ಕಮರ್ಷಿಯಲ್ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್ ನಟ ನಟಿಯರ ಮಕ್ಕಳು ಸಿನಿಮಾಗೆ ಎಂಟ್ರಿ ಕೊಡುವುದು ಸಹಜ. ಅಂತೆಯೇ ಇವರ ಸುತ್ತ ಗಾಸಿಪ್ ಗಳು ಹರಡುವುದು ಕೂಡ ಸಹಜ. ಆದರೆ ಖುಷಿ ಕಪೂರ್ ಅವರ ಬಾಲಿವುಡ್ ಎಂಟ್ರಿ ವಿಚಾರದಲ್ಲಿ ಯಾವುದೇ ಗಾಸಿಪ್ ಗಳು ಕೇಳಿ ಬಂದಿಲ್ಲ. ಇವರ ತಂದೆ ಬೋನಿಕಪೂರ್ ಖಚಿತ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಜಿಂದಗಿ ನಾ ಮಿಲೆಗಿ ದೋಬಾರ, ಗಲ್ಲಿ ಬಾಯ್ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜೋಯಾ ಅಖ್ತರ್ ಅವರ ಗರಡಿಯಲ್ಲಿ ಶ್ರೀದೇವಿ ಮಗಳಾದ ಖುಷಿ ಕಪೂರ್.

ಶಾರುಖಾನ್ ಮಗಳು ಸುಹಾನಾ ಖಾನ್ ಹಾಗೂ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಪಳಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಹೌದು ಈ ಮೂವರು ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಈ ಬಗ್ಗೆ ಶಾರುಖಾನ್ ಅಥವಾ ಅಮಿತಾಬ್ ಬಚ್ಚನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಖುಷಿ ಕಪೂರ್ ನಟಿಸುವುದಂತೂ ಪಕ್ಕ ಎಂದು ಬೋನಿಕಪೂರ್ ಹೇಳಿದ್ದಾರೆ. ಜೋಯಾ ಅಖ್ತರ್ ಅವರ ಕಚೇರಿಯಲ್ಲಿ ಅಗಸ್ತ್ಯ ನಂದಾ, ಸುಹಾನಾ ಖಾನ್ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರಿಂದ ಅವರು ಖುಷಿ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಸುದ್ದಿ ಹರಡಿದೆ. ಆದರೆ ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಕಾದುನೋಡಬೇಕು.

ಇನ್ನು ಶಾರುಖಾನ್ ಮಗಳು ಸುಹಾನಾ ಖಾನ್ ಅವರಿಗೂ ಕೂಡ ನಟನೆಯಲ್ಲಿ ಆಸಕ್ತಿ ಇದೆಯಂತೆ. ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ತೆರಳಿರುವ ಅವರು, ಕೆಲವು ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿನಯದ ಹಾದಿಯನ್ನು ಹಿಡಿದಿದ್ದಾರೆ. ಪ್ರತಿಷ್ಠಿತ ಮ್ಯಾಗಸಿನ್ ಕವರ್ ಗಳಿಗೆ ಪೋಸ್ ನೀಡುವ ಮೂಲಕ ಅವರು ಗಮನಸೆಳೆದಿದ್ದಾರೆ. ಸುಹಾನಾ ಖಾನ್ ಅವರ ನಟನಾ ಭವಿಷ್ಯಕ್ಕೆ ತಾಯಿ ಗೌರಿ ಖಾನ್ ಪ್ಲಾನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಇನ್ನು ಏಪ್ರಿಲ್ ನಿಂದ ಶೂಟಿಂಗ್ ಆರಂಭವಾಗಲಿದ್ದು, ಖುಷಿ ಅವರು ಭಾಗಿಯಾಗಲಿದ್ದಾರೆ. ಈ ಚಿತ್ರ ನೇರವಾಗಿ ನೆಟ್ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

%d bloggers like this: