ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಈ ಹೆಸರಾಂತ ನಟಿ

ನಾನು ಒಂದು ದಿನ ತಂದೆ ಆಗಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದೆ. ಆ ಸುದಿನ ಇದೀಗ ಬಂದೇ ಬಿಟ್ಟಿದೆ ಎಂದು ತಾನು ತಂದೆ ಆಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಪತ್ನಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಬಾಲಿವುಡ್ ಖ್ಯಾತ ನಿರೂಪಕ ಕಮ್ ಗಾಯಕ. ಹೌದು ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಪದ್ದತಿ ಭಾರತ ದೇಶದಲ್ಲಿ ಆರಂಭವಾಗಿದೆ. ಅದರ ಹೆಸರು ಬೇಬಿ ಬಂಪ್ ಫೋಟೋಶೂಟ್ . ಹಿಂದೆ ನಮ್ಮ ಹಿರಿಯರು ಗರ್ಭಿಣಿ ಮಹಿಳೆಯರನ್ನ ಮನೆಯಿಂದ ಹೊರಗೆ ಕಳಿಸುತ್ತಿರಲಿಲ್ಲ.

ಏಕೆಂದರೆ ಗರ್ಭಿಣಿ ಮಹಿಳೆಗೆ ಹುಟ್ಟುವ ಕಂದನಿಗೆ ದೃಷ್ಟಿ ತಗಲುಬಾರದು ಎಂದು. ಆದರೆ ಇದೀಗ ಸಂಪೂರ್ಣ ಬದಲಾಗಿದೆ. ತಾವು ಗರ್ಭಿಣಿ ಆಗಿದ್ದೇವೆ ಎಂದು ಮುಕ್ತವಾಗಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿಕೊಳ್ಳುವ ಮಟ್ಟಿಗೆ ಬಂದಿದೆ. ಇನ್ನು ಇದೇ ರೀತಿಯಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡು ಇತ್ತೀಚೆಗೆ ಸುದ್ದಿ ಆಗಿರುವುದು ಬಾಲಿವುಡ್ ಖ್ಯಾತ ನಟಿ ಶ್ವೇತಾ ಅಗರ್ವಾಲ್. ಹೌದು ನಟಿ ಶ್ವೇತಾ ಅಗರ್ವಾಲ್ ಅವರು ಹಿಂದಿ ಕಿರುತೆರೆಯ ಜನಪ್ರಿಯ ನಿರೂಪಕಿ ಮತ್ತು ನಟಿ ಕೂಡ ಹೌದು. ನಟಿ ಶ್ವೇತಾ ಅಗರ್ವಾಲ್ ಅವರು ತಂದೂರಿ ಲವ್, ಶಾಪಿತ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

ನಟಿ ಶ್ವೇತಾ ಅಗರ್ವಾಲ್ ಅವರು 2020 ರಲ್ಲಿ ಭಾರತೀಯ ಚಿತ್ರರಂಗದ ಸುಪ್ರಸಿದ್ದ ಗಾಯಕ ಉದಿತ್ ನಾರಾಯಣ್ ಅವರ ಪುತ್ರ ಗಾಯಕ ಕಮ್ ನಿರೂಪಕ, ನಟ ಆದಿತ್ಯಾ ನಾರಾಯಣ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆಯುತ್ತಾರೆ. ಇವರಿಬ್ಬರ ಸುಂದರ ಸಾಂಸಾರಿಕ ಜೀವನದ ಸಾಕ್ಷಿಯಾಗಿ ಇದೀಗ ಈ ದಂಪತಿಗಳು ಪೋಷಕರಾಗಿ ಬಡ್ತಿ ಪಡೆಯುವ ಹೊಸ್ತಿಲಲ್ಲಿದ್ದಾರೆ. ಹೌದು ನಟಿ ಶ್ವೇತಾ ಅಗರ್ವಾಲ್ ಅವರು ಇದೀಗ ತಾಯಿಯಾಗುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಅವರ ಪತಿ ಆದಿತ್ಯಾ ನಾರಾಯಣ್ ಅವರು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಪ್ರೀತಿಯ ಪತ್ನಿಯೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಫೋಟೋದ ಜೊತೆಗೆ ಆದಿತ್ಯಾ ನಾರಾಯಣ್ ಅವರು ನಾನು ಮತ್ತು ಶ್ವೇತಾ ಹೊಸ ದಿಕ್ಕಿನಲ್ಲಿದ್ದೇವೆ. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾನು ಕೂಡ ಮಗುವಿನ ರೀತಿಯೇ. ನಾನು ಯಾವ ಮಗುವಿಗೂ ಕಮ್ಮಿ ಇಲ್ಲ. ಹೀಗಾಗಿ ಶ್ವೇತಾಗೆ ಡಬಲ್ ರೆಸ್ಪಾನ್ಸಿಬಿಲಿಟಿ ಎಂದು ಬರೆದುಕೊಂಡಿದ್ದಾರೆ. ನಾನು ನನ್ನ ಸಂಗಾತಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನನ್ನ ವೃತ್ತಿಯಲ್ಲಿ ತುಂಬಾ ಕಷ್ಟ ಪಟ್ಟು ದುಡಿದಿದ್ದೇನೆ. ಅದರಂತೆ ನನ್ನ ಪತ್ನಿ ಶ್ವೇತಾಳನ್ನ ತುಂಬಾ ಕಾಳಜಿಯಿಂದ ಸಂತೋಷವಾಗಿ ನೋಡಿಕೊಳ್ಳಬೇಕು ಎಂದು ಭಾವುಕ ಮಾತುಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಜೀವನದ ಒಂದಷ್ಟು ಸ್ವಾರಸ್ಯಕರ ಸಂಗತಿಗಳನ್ನು ಕೂಡ ಆದಿತ್ಯಾ ನಾರಾಯಣ್ ಶೇರ್ ಮಾಡಿಕೊಂಡಿದ್ದಾರೆ.

%d bloggers like this: