ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದ ದಂಪತಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಸಖತ್ ಹಿಟ್ ಶೋ. ಈ ರಿಯಾಲಿಟಿ ಶೋ ನಿಂದ ಎಷ್ಟೋ ಜನ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ರಂಗಭೂಮಿಯಲ್ಲಿ ಅಭಿನಯಿಸಿದ ಅನುಭವವಿಲ್ಲವಾದರೂ ಅನೇಕ ಜನ ಇಂದು ಕಾಮಿಡಿ ಕಿಲಾಡಿಗಳು ಶೋ ಮೂಲಕ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಗಳಿಸಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ ಇವರು ಇಂದು ಸೆಲೆಬ್ರಿಟಿ ಗಳಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಶ್ರೀ ಇವರಿಬ್ಬರು ಕಲಾವಿದರು ಕಾಮಿಡಿ ಕಿಲಾಡಿಗಳು ನಂತರ ಬಾಳಸಂಗಾತಿಗಳಾಗಿದರು. ಸ್ಪರ್ಧಿಗಳಾಗಿ ತಮ್ಮ ಜರ್ನಿ ಅನ್ನು ಆರಂಭಿಸಿ ಸ್ನೇಹಿತರಾಗಿ, ಅನಂತರ ಪೋಷಕರ ಒಪ್ಪಿಗೆಯನ್ನು ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಎರಡು ಜೋಡಿ ಕಾಲಿಟ್ಟಿದ್ದರು.

ಪಕ್ಕ ಉತ್ತರ ಕರ್ನಾಟಕದ ಹುಡುಗ ಗೋವಿಂದೇಗೌಡ, ಮತ್ತು ದಕ್ಷಿಣ ಕರ್ನಾಟಕದ ಹುಡುಗಿ ದಿವ್ಯಶ್ರೀ. 2019ರಲ್ಲಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಹಾಗೆಯೇ ಅದೇ ವರ್ಷ ಮಾರ್ಚ್ 14ರಂದು ಶೃಂಗೇರಿಯಲ್ಲಿ ಇವರು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಂತರ ಇವರಿಬ್ಬರೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್1 ಮತ್ತು ಭರಾಟೆ ಸಿನಿಮಾ ದಲ್ಲಿ ಗೋವಿಂದೇಗೌಡ ನಟಿಸಿದ್ದರೆ, ಪುಣ್ಯಾತ್ಗಿತ್ತಿಯರು ಸಿನಿಮಾದಲ್ಲಿ ದಿವ್ಯಶ್ರೀ ನಟಿಸಿದ್ದಾರೆ. ಇತ್ತೀಚೆಗೆ ಇವರಿಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಒಂದನ್ನು ನೀಡಿದ್ದಾರೆ.

ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರು ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬದುಕಿನ ಭರವಸೆಗೆ ಅರಸಿದೆ ಈ ಮನ, ಮನದಾಸೆಗೆ ಸ್ಪಂದನ ಕಂದನಾಗಮನ ಎಂದು ಸುಂದರವಾಗಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಇವರ ಫೋಟೋ ಗಳು ಕೂಡ ಎಲ್ಲೆಡೆ ವೈರಲ್ ಆಗುತ್ತಿವೆ. ನೇರಳೆ ಬಣ್ಣದ ಸೀರೆಯಲ್ಲಿ ದಿವ್ಯಶ್ರೀ ಮಿಂಚಿದರೆ, ಪಿಂಕ್ ಶರ್ಟ್ ವಿಥ್ ಬ್ಲಾಕ್ ಪ್ಯಾಂಟಿನಲ್ಲಿ ಗೋವಿಂದೇಗೌಡ ಮಿಂಚುತ್ತಿದ್ದಾರೆ. ಈ ಫೋಟೋಗಳ ವಿಶೇಷತೆಯೇನೆಂದರೆ ಇವರಿಬ್ಬರು ಸರಳವಾಗಿ ಫೋಟೋಶೂಟ್ ಮಾಡಿಸಿದ್ದು, ಇಬ್ಬರು ಅರಳಿಮರದ ಕೆಳಗೆ ಕುಳಿತುಕೊಂಡು ಪುನೀತ್ ರಾಜಕುಮಾರ್ ಫೋಟೋ ಇರುವ ಮ್ಯಾಗಜೀನನ್ನು ಓದುತ್ತಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.

%d bloggers like this: