ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ ಅವರು, ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ

ಚಂದನವನದ ಮುದ್ದು ಚೆಲುವೆ ನಟಿ ಅಮೂಲ್ಯ ಅವರು ತಾಯಿಯಾಗುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಏಳು ತಿಂಗಳ ತುಂಬು ಗರ್ಭಿಣಿ ಆಗಿರುವ ಅಮೂಲ್ಯ ಅವರಿಗೆ ಸಂಪ್ರದಾಯದ ವಾಡಿಕೆಯಂತೆ ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಕಾರ್ಯಕ್ರಮ ನೆರೆವೇರಿದೆ. ಕನ್ನಡ ಚಿತ್ರರಂಗದ ಜನಪ್ರಿಯ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಅಮೂಲ್ಯ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ನಟಿ ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡದ್ದು ಬಾಲ ನಟಿಯಾಗಿ. ಹೌದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಲಾಲಿಹಾಡು, ಕಿಚ್ಚ ಸುದೀಪ್ ಅವರ ಚಂದು ಚಿತ್ರದಲ್ಲಿ ಅಮೂಲ್ಯ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ತದ ನಂತರ ಅಮೂಲ್ಯ ಅವರು ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬಂದ ಚೆಲುವಿನಿ ಚಿತ್ತಾರ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದುಕೊಳ್ಳುತ್ತಾರೆ.

ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಜೋಡಿ ಬೆಳ್ಳಿ ತೆರೆ ಮೇಲೆ ಕ್ಯೂಟ್ ಪೇರ್ ಆಗಿ ಕಾಣಿಸಿಕೊಂಡು ಚಿತ್ರ ಪ್ರೇಕ್ಷಕರನ್ನ ಮೋಡಿ ಮಾಡುತ್ತದೆ. ಇದಾದ ಬಳಿಕ ಗಣೇಶ್ ಅವರೊಟ್ಟಿಗೆ ಅಮೂಲ್ಯ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಿನುಕುರುಳಿಯಾಗಿ ಸಖತ್ ಚುರುಕುತನದ ಮಾತಿನಿಂದ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದ ನಟಿ ಅಮೂಲ್ಯ ಅವರಿಗೆ ಅಪಾರ ಅಭಿಮಾನಿ ಬಳಗವೇ ಹುಟ್ಟಿಕೊಂಡಿತು. ರಾಕಿಂಗ್ ಸ್ಟಾರ್ ಯಶ್ ಅವರ ಗಜಕೇಸರಿ, ದುನಿಯಾ ವಿಜಯ್ ಅವರ ಜೊತೆ ಮಾಸ್ತಿಗುಡಿ, ಲವ್ಲೀ ಸ್ಟಾರ್ ಪ್ರೇಮ್ ಅವರ ಜೊತೆ ಮಳೆ, ಕೃಷ್ಣ ಅಜಯ್ ರಾವ್ ಅವರೊಂದಿಗೆ ನಟಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ 2017ರಲ್ಲಿ ಜಗದೀಶ್ ಎಂಬುವರೊಟ್ಟಿಗೆ ಸಪ್ತಪದಿ ತುಳಿಯುತ್ತಾರೆ.

ಸಹಜ ಎಂಬಂತೆ ಮದುವೆಯಾದ ಬಳಿಕ ಸಿನಿಮಾಲೋಕದಿಂದ ಅಂತರ ಕಾಯ್ದುಕೊಂಡ ನಟಿ ಅಮೂಲ್ಯ ಅವರು ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ನಟಿಸುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಮೂಲ್ಯ ಅವರು ತಾವು ತಾಯಿಯಾಗುತ್ತಿರುವ ಸಿಹಿ ಸುದ್ದಿ ವಿಚಾರವೊಂದನ್ನ ಹಂಚಿಕೊಂಡಿದ್ದರು. ಬಳಿಕ ಇವರ ಸ್ನೇಹಿತರು ಆಪ್ತಿಷ್ಟರು ಮನೆಗೆ ಬಂದು ಅಮೂಲ್ಯ ಅವರ ಕುಶಲೋಪರಿ ವಿಚಾರಿಸಿಕೊಂಡು ಹೋಗುತ್ತಿದ್ದರು. ಅದರ ಒಂದಷ್ಪು ಫೋಟೋಗಳುನ್ನ ಅಮೂಲ್ಯ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ನಟಿ ಅಮೂಲ್ಯ ಅವರಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಪತಿ ಜಗದೀಶ್ ಅವರು ತಮ್ಮ ಮುದ್ದಿನ ಮಡದಿ ಅವರನ್ನ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸೀಮಂತ ಶಾಸ್ತ್ರ ಕಾರ್ಯಕ್ರಮಕ್ಕೆ ಅಮೂಲ್ಯ ಮತ್ತು ಜಗದೀಶ್ ಅವರ ಕುಟುಂಬದವರು ಸಾಕ್ಷಿಯಾಗಿದ್ದರು.

%d bloggers like this: