ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದೆ

ಹಿಂದಿಯಲ್ಲಿ ಪ್ರಸಾರವಾಗುವ ಸುಪ್ರಸಿದ್ಧ ರಿಯಾಲಿಟಿ ಶೋ ಹುನರ್ಬಾಜ್ ನ್ನು ನಡೆಸಿಕೊಡುವ ನಟಿ ಭಾರತಿ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ಕಾಮಿಡಿ ಕಂಟೆಂಟ್ ಮೂಲಕ ಎಲ್ಲರ ಮನೆ ಮಾತಾಗಿರುವ ಈ ನಟಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಹಾಸ್ಯದ ಮೂಲಕ ಎಲ್ಲರ ಮುಖದಲ್ಲಿ ನಗು ಮೂಡಿಸುವ ಈ ನಟಿ ಮಹಿಳೆಯರಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿರುತ್ತಾರೆ. ವಿಶೇಷವೆಂದರೆ ಹುನರ್ಬಾಜ್ ಶೋವನ್ನು ಹೊಸ್ಟ್ ಮಾಡುತ್ತಿರುವ ಅವರ ಕೋ ಹೊಸ್ಟ್ ಹರ್ಷ ಲಿಂಬಾಚಿಯಾ ಅವರನ್ನು ಭಾರತಿ ಸಿಂಗ್ ವಿವಾಹವಾಗಿದ್ದಾರೆ. ಒಂದೇ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಕಾಮಿಡಿಯನ್ ಎಂದೇ ಖ್ಯಾತಿಯಾಗಿರುವ ಭಾರತೀ ಸಿಂಗ್ ಅವರ ಜೀವನದಲ್ಲಿ ಅವರಿಗೆ ಖುಷಿ ನೀಡಲು ಮತ್ತೊಂದು ಪುಟ್ಟ ವ್ಯಕ್ತಿಯ ಆಗಮನವಾಗುತ್ತಿದೆ.

ಹೌದು ಭಾರತಿ ಹಾಗೂ ಹರ್ಷ ಅವರು ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಒಂದನ್ನು ನೀಡಿದ್ದರು. ಏಪ್ರಿಲ್ ನಲ್ಲಿ ತಮ್ಮ ಮನೆಗೆ ಮಗುವನ್ನು ಸ್ವಾಗತಿಸಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲರೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಗಳಲ್ಲಿ ಸಖತ್ ಫೇಮಸ್ ಆಗಿರುವ ಈ ಜೋಡಿ ಇದೀಗ ಪ್ರಗ್ನೆನ್ಸಿ ಫೋಟೋಶೂಟ್ ಮೂಲಕವೂ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಸೆಟ್ನಲ್ಲಿ ಯಾವಾಗಲೂ ಜೊತೆಯಾಗಿಯೇ ಇರುವ ಈ ಜೋಡಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅದಲ್ಲದೆ ಭಾರತೀಯವರು ಪ್ರಗ್ನೆಂಟ್ ಆದಾಗಿನಿಂದ ಹರ್ಷ ಅವರು ಸೆಟ್ ಗಳಲ್ಲಿ ತಮ್ಮ ಹೆಂಡತಿಯ ಬಗ್ಗೆ ವಿಶೇಷ ಕಾಳಜಿ ವಹಿಸುವುದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ ಅವರು ಬೇಬಿ ಬಂಪ್ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ.

ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಈ ಜೋಡಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. ವಿಶೇಷವೆಂದರೆ ಭಾರತಿ ಅವರು ತಮ್ಮ ಪ್ರಗ್ನೆನ್ಸಿ ಎಂಟನೇ ತಿಂಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಜೀವನದ ವಿಶೇಷ ಕ್ಷಣಗಳನ್ನು ಕವರ್ ಮಾಡಲು ಭಾರತೀ ಅವರು ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋ ಶೂಟ್ ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ ರಾಫಲ್ಡ್ ಡ್ರೆಸ್ ಹಾಕಿಕೊಂಡಿರುವ ಭಾರತಿ ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ದಿ ಲೂನಿ ಲೆನ್ಸ್ ಅವರು ಭಾರತೀ ಸಿಂಗ್ ಅವರ ಫೋಟೋಶೂಟ್ ಅನ್ನು ಮಾಡಿದ್ದು, ಕೂದಲನ್ನು ಕರ್ಲಿ ಮಾಡಿ ಕಟ್ಟದೆಯೇ ಹಾಗೆ ಬಿಟ್ಟಿದ್ದಾರೆ. ಗುಲಾಬಿ ಹೂವುಗಳಿಂದ ಅಲಂಕೃತವಾಗಿರುವ ಡ್ರೆಸ್ ನಲ್ಲಿ ಅವರು ಬೇಬಿ ಬಂಪ್ ಜೊತೆ ವಿಭಿನ್ನವಾಗಿ ಪೋಸ್ ನೀಡಿದ್ದಾರೆ. ಇನ್ನೂ ಭಾರತಿ ಅವರ ಬೇಬಿ ಬಂಪ್ ಹಿಡಿದುಕೊಂಡು ಹರ್ಷ ಅವರು ಕ್ಯಾಮೆರಾಗೆ ಫೋಸ್ ನೀಡುತ್ತಿರುವ ಫೋಟೋವನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದಾರೆ.

%d bloggers like this: