ತೆಲುಗುವಿನ ಟಾಪ್ ನಟಿಯರಲ್ಲಿ ಒಬ್ಬರಾದ ಕಾಜಲ್ ಅಗರವಾಲ್ ಅವರು ಮುಂಬೈ ಮೂಲದ ಉದ್ಯಮಿ ಗೌತಮ್ ಕಿಚ್ಚಲು ಅವರನ್ನು ಕಳೆದ ವರ್ಷ ಅಕ್ಟೋಬರ್ 30ರಂದು ಅದ್ದೂರಿಯಾಗಿ ವಿವಾಹವಾಗಿದ್ದರು. ಮದುವೆಯ ನಂತರ ಚಿತ್ರರಂಗದಿಂದ ಬ್ರೇಕ್ ತಗೆದುಕೊಂಡ ಈ ನಟಿ ಮದುವೆಯ ನಂತರದ ದಿನಗಳನ್ನು ಎಂಜಾಯ್ ಮಾಡುತ್ತಿದ್ದರು. ಡಿಸೆಂಬರ್ 2ನೇ ವಾರದಲ್ಲಿ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಿದ್ದ ಇವರು ಇನ್ಸ್ಟಾಗ್ರಾಮ್ ಸ್ಟೋರಿ ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳನ್ನು ನೋಡಿದ ಜನರು ಕಾಜಲ್ ಪ್ರಗ್ನೆಂಟ್ ಇರಬಹುದಾ ಎಂದು ಕೇಳುತ್ತಿದ್ದರು.

ಈ ವಿಷಯದ ಬಗ್ಗೆ ಕಳೆದ ತಿಂಗಳು ಹೊಸ ವರ್ಷದ ದಿನ ಕಾಜಲ್ ಅವರು ತಾವು ತಾಯಿಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ತಿಳಿಸಿ, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಕಾಜಲ್ ಅಗರ್ವಾಲ್ ತಮ್ಮ ಬೇಬಿ ಬಂಪ್ ಫೋಟೋವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದರು. ಸದ್ಯಕ್ಕೆ ನಟಿ ಕಾಜಲ್ ಅಗರ್ವಾಲ್ ಮತ್ತು ಅವರ ಪತಿ ಗೌತಮ್ ಈ ಮೊಮೆಂಟ್ ನ್ನು ಎಂಜಾಯ್ ಮಾಡುತ್ತಿದ್ದಾರೆ. ಬೇಬಿಮೂನ್ ಗಾಗಿ ವಿದೇಶಕ್ಕೆ ಈ ಎರಡು ಜೋಡಿಗಳು ಹಾರಿದ್ದಾರೆ. ಹೌದು ಕಾಜಲ್ ಮತ್ತು ಗೌತಮ್ ಅವರು ದುಬೈಗೆ ಟ್ರಿಪ್ ಹೋಗಿದ್ದಾರೆ.

ಮತ್ತು ತಮ್ಮ ರಜಾದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ದುಬೈನ ಐಷಾರಾಮಿ ರೆಸಾರ್ಟ್ ಒಂದರಲ್ಲಿ ತಂಗಿರುವ ಇವರು ಟ್ರಿಪ್ಪಿನ ಫೋಟೋಗಳನ್ನು ಬ್ಯಾಕ್ ಟು ಬ್ಯಾಕ್ ಶೇರ್ ಮಾಡುತ್ತಿದ್ದಾರೆ. ಹಳದಿ ಬಣ್ಣದ ಟಾಪ್ ಧರಿಸಿ ರೆಸಾರ್ಟ್ ಬಾಲ್ಕನಿಯಲ್ಲಿ ಫೋಟೋ ಕ್ಲಿಕ್ಕಿಸಿ ಕೊಂಡಿರುವ ನಟಿ ಕಾಜಲ್ ಅಗರ್ವಾಲ್, ಫೋಟೋದಲ್ಲಿ ಬೇಬಿ ಬಂಪ್ ಕಾಣಿಸಿಕೊಂಡಿದೆ. ಎಲ್ಲರೂ ಈ ಫೋಟೋ ತುಂಬಾ ಕ್ಯೂಟಾಗಿದೆ ಎಂದು ಕಮೆಂಟ್ ಮಾಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಕ್ಕತ್ತ್ ವೈರಲ್ ಆಗುತ್ತಿದೆ.