ಸಿನಿಮಾ ಹೆಸರಿಗೆ ತಕ್ಕಂತೆ ಸಖತ್ ಮನರಂಜನೆ ಚಿತ್ರ ತರುತ್ತಿದ್ದಾರೆ ನಟ ಅನೀಶ್

ನಮ್ಮ ಸ್ಯಾಂಡಲ್ ವುಡ್ ನ ಯುವ ಪ್ರತಿಭೆ ಮತ್ತು ಸ್ಯಾಂಡಲ್ವುಡ್ ನ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಎಂದೇ ಖ್ಯಾತಿಯಾಗಿರುವ ಅನಿಷ್ ತೇಜೇಶ್ವರ್ ಅವರು ತಮ್ಮ ಹುಟ್ಟುಹಬ್ಬವನ್ನು ಇದೇ ಜನವರಿ 12 ರಂದು ಆಚರಿಸಿಕೊಂಡಿದ್ದಾರೆ. ಜನವರಿ 12 1989 ರಲ್ಲಿ ಜನಿಸಿದ ಅನೀಶ್ ತೇಜೇಶ್ವರ್ ಅವರು ತಮ್ಮ 33ನೇ ವಸಂತಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗೆ ನಟ ನಟಿಯರು ತಮ್ಮ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳಿಗೆ ಉಡುಗೊರೆಯ ರೂಪದಲ್ಲಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡುತ್ತಿದ್ದಾರೆ. ತಮ್ಮ ನೆಚ್ಚಿನ ನಟರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಹುಟ್ಟುಹಬ್ಬದ ದಿನದಂದು ಅವರ ಮುಂದಿನ ಸಿನಿಮಾದ ಬಗ್ಗೆ ಮಾಹಿತಿಯನ್ನು ನೀರಿಕ್ಷಿಸುತ್ತಾರೆ.

ಅದೇ ರೀತಿ ಪೊಲೀಸ್ ಕ್ವಾಟ್ರಸ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಯುವ ನಟ ಅನೀಶ್ ತೇಜೇಶ್ವರ್ ತಮ್ಮ ಹುಟ್ಟುಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಒಂದನ್ನು ನೀಡಿದ್ದಾರೆ. ಹೌದು 2010 ರಲ್ಲಿ ಪೊಲೀಸ್ ಕ್ವಾಟ್ರಸ್ ಸಿನಿಮಾದ ಮೂಲಕ ತಮ್ಮ ಸಿನಿಪಯಣವನ್ನು ಆರಂಭಿಸಿದ ಇವರು ನಮ್ ಏರಿಯಾಲಿ ಒಂದಿನ, ಕಾಫಿ ವಿತ್ ಮೈ ವೈಫ್, ನನ್ನ ಲೈಫಲ್ಲಿ, ಎಂದೆಂದೂ ನಿನಗಾಗಿ, ನೀನೆ ಬರಿ ನೀನೆ, ಅಕಿರ, ವಾಸು ನಾನ್ ಪಕ್ಕಾ ಕಮರ್ಷಿಯಲ್, ರಾಮಾರ್ಜುನ ಹೀಗೆ ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅನಿಶ್ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ಮುಂದಿನ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ.

ಹಾಗೂ ಚಿತ್ರಕ್ಕೆ ಬೆಂಕಿ ಎಂದು ನಾಮಕರಣ ಮಾಡಿದ್ದಾರೆ. ಬೆಂಕಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಅನೀಶ್ ತೇಜೇಶ್ವರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟನ ಹೊಸ ಸಿನಿಮಾದ ಟೈಟಲ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅನೀಶ್ ತೇಜೇಶ್ವರ್ ಅವರು ಕೇವಲ ನಟರಷ್ಟೇ ಅಲ್ಲದೆ ನಿರ್ದೇಶಕ, ನಿರ್ಮಾಪಕ ಮತ್ತು ಸ್ಕ್ರಿಪ್ಟ್ ರೈಟರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಹೀಗೆ ಆಲ್-ರೌಂಡರ್ ಆಗಿರುವ ಅನಿಶ್ ಅವರ ಮಾಂಜಾ ಮತ್ತು ಎನ್ ಆರ್ ಐ ಸಿನಿಮಾಗಳು ಕಂಪ್ಲೀಟ್ ಆಗಿದ್ದು ರಿಲೀಸ್ ಗೆ ರೆಡಿಯಾಗಿವೆ.

%d bloggers like this: