ಸಿನಿಮಾ ಜಗತ್ತನ್ನೇ ಹುಚ್ಚೆಬ್ಬಿಸಿರುವ ಕೆಜಿಎಫ್ ಒಂದೇ ದಿನದಲ್ಲಿ ಯೂಟ್ಯೂಬ್ ಅಲ್ಲಿ ಗಳಿಸಿದ ಹಣ ಎಷ್ಟು ಗೊತ್ತೇ

ಇಡೀ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಯಾದ ಕೇವಲ 49 ನಿಮಿಷಗಳಲ್ಲಿ ಬರೋಬ್ಬರಿ 5 ಮಿಲಿಯನ್ ನಷ್ಟು ವೀಕ್ಷಣೆ ಪಡೆದು ಇತಿಹಾಸ ಸೃಷ್ಟಿ ಮಾಡಿದೆ! ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಗೊಂಡು ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದೆ, ಕೆಜಿಎಫ್ ಸಿನಿಮಾದ ನರಕ ಸಾಮ್ರಾಜ್ರ್ಯದಂತಿರುವ ನರಾಚಿ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿದೆ. ಇನ್ನು ಯಶ್ ತನ್ನ ಎದುರಾಳಿಗಳನ್ನು ಒಂದೇ ಸಮ ನಿರಂತರವಾಗಿ ಶೂಟ್ ಮಾಡುತ್ತಾ ಎಂಟ್ರಿ ಕೊಡುತ್ತಾರೆ. ಇಲ್ಲಿ ಯಶ್ ಅವರ ಗೆಟಪ್ ಲುಕ್, ಸ್ಟೈಲ್, ಅಭಿಮಾನಿಗಳಿಗೆ ರಸದೌತಣದ ರೀತಿಯಲ್ಲಿ ರಂಜಿಸಿದೆ. ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಅವರ ಗೆಟಪ್ ಕೂಡ ಟೀಸರ್ ಅಲ್ಲಿ ರಿವೀಲ್ ಆಗಿದೆ.

ಯಶ್ ಹುಟ್ಟುಹಬ್ಬ ದಿನವಾದ ಜನವರಿ 8ಕ್ಕೆ ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆಯಾಗಬೇಕಿತ್ತು, ಆದರೆ ಚಿತ್ರದ ಟೀಸರ್ ಲೀಕ್ ಮಾಡಿ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಚಿತ್ರತಂಡ ನಿನ್ನೆ ತಡರಾತ್ರಿ 9.29 ನಿಮಿಷಕ್ಕೆ ಹೊಂಬಾಳೆ ಯುಟ್ಯುಬ್ ಚಾನೇಲ್ ನಲ್ಲಿ ಕೆಜಿಎಫ್ 2 ಟೀಸರ್ ರಿಲೀಸ್ ಮಾಡಿದೆ. ಬಿಡುಗಡೆಯಾದ ಕೇವಲ 49 ನಿಮಿಷಕ್ಕೆ ನಿರೀಕ್ಷೆ ಮೀರಿ 5 ಮಿಲಿಯನ್ ನಷ್ಟು ವೀಕ್ಷಣೆ ಕಂಡಿದೆ ಇದರಿಂದ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗಿದೆ.

ಇನ್ನು ಕೆಜಿಎಫ್ 2 ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆ ಸೇರಿ ಒಟ್ಟಾರೆ ಪಂಚಭಾಷೆಗಳಲ್ಲಿ ಚಿತ್ರ ತೆರೆಕಾಣುತ್ತದೆ. ಆದರೆ ರಿಲೀಸ್ ಟೀಸರ್ ಕನ್ನಡ ಭಾಷೆಯಲ್ಲಿ ಇರಲಿಲ್ಲ ಇಂಗ್ಲೀಷ್ ಹಿನ್ನೆಲೆ ಧ್ವನಿ ಹೊಂದಿರುವ ಟೀಸರ್ ಆಗಿತ್ತು. ಆದರೆ ಇಲ್ಲಿ ಅನಂತ್ ನಾಗ್ ಅವರ ಹಿನ್ನೆಲೆ ಧ್ವನಿಯ ಜೊತೆಗೆ ಅವರು ಈ ಸಿನಿಮಾದಲ್ಲಿ ಇಲ್ಲದಿದ್ದರಿಂದ ಕನ್ನಡ ಪ್ರೇಕ್ಷಕರಿಗೆ ಕೊಂಚ ಅಸಮಾಧಾನವು ಇದೆ.

ಈ ಚಿತ್ರದ ಟೀಸರ್ ಲೀಕ್ ಆಗಿದ್ದಕ್ಕೆ ಯಶ್ ಬೇಸರ ವ್ಯಕ್ತಪಡಿಸಿದ್ದಾರೆ, ಯಾವ ಪುಣ್ಯಾತ್ಮ ಮಹಾನುಭಾವರು ಈ ಕೆಲಸ ಮಾಡಿದ್ದಾರೋ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಕಿಡಿಗೇಡಿಗಳಿಗೆ ವ್ಯಂಗ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇನ್ನು ಚಿತ್ರ ಲೀಕ್ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕೇವಲ ಎರಡು ನಿಮಿಷದ ಟೀಸರ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲವೆ, ಇದೆಲ್ಲಾ ಸಿನಿಮಾ ಗಿಮಿಕ್ ಕೊರೋನ ಸಂಧರ್ಭದಲ್ಲಿ ಜನರನ್ನು ಸೆಳೆಯುವ ದೃಷ್ಟಿಯಿಂದ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

ಕೆಜಿಎಫ್ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಸಿನಿಮಾ ಜಗತ್ತಿನ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರದ ಟೀಸರ್ ಆಗಿದೆ, ಇನ್ನು 24 ಗಂಟೆಯಲ್ಲಿ ಕೆಜಿಎಫ್ ಟೀಸರ್ ಗಳಿಸಿದ್ದು ಬರೋಬ್ಬರಿ 78ಮಿಲಿಯನ್ ವೀಕ್ಷಣೆಗಳು, ಅಂದರೆ ಸುಮಾರು ಎಂಟು ಕೋಟಿ ಜನ ನಮ್ಮ ಕನ್ನಡದ ಹೆಮ್ಮೆಯ ಚಿತ್ರದ ಟೀಸರ್ ಅನ್ನು ವೀಕ್ಷಣೆ ಮಾಡಿದ್ದಾರೆ. ಯೌಟ್ಯೂಬ್ ಅಲ್ಲಿ ಕೆಲಸ ಮಾಡುವವರ ಪ್ರಕಾರ ಕೆಜಿಎಫ್ ಕೇವಲ ಒಂದು ದಿನದಲ್ಲಿ ಟೀಸರ್ ಇಂದ ಸುಮಾರು 40-45ಲಕ್ಷ ಹಣ ಗಳಿಸಿದೆ ಎಂದು ತಿಳಿದುಬಂದಿದೆ. ಇದು ಕೇವಲ ಒಂದು ದಿನದ ಗಳಿಕೆ ಆಗಿದ್ದು ಕೆಜಿಎಫ್ ಟೀಸರ್ ಮೂಲಕವೇ ಇನ್ನು ಹೆಚ್ಚು ಹಣ ಗಳಿಕೆ ಮಾಡಲಿದೆ. ಎಲ್ಲರಲ್ಲೂ ಕುತೂಹಲ ಮೂಡಿಸಿರುವ ಕೆಜಿಎಫ್ ಚಿತ್ರದ ಟ್ರೈಲರ್ ಬಂದ ಮೇಲಂತೂ ಇದರ ಆದಾಯ ಹೇಳತೀರದ್ದು.

%d bloggers like this: