ಸಿನಿಮಾ ಒಂದಕ್ಕೆ 800 ಕೋಟಿ ರೂಪಾಯಿ ಸಂಭಾವನೆ ಪಡೆದ ನಟ

ಇತ್ತೀಚಿಗೆ ಉತ್ತಮ ಚಿತ್ರಕಥೆ ಇರುವಂತಹ ಚಿತ್ರಗಳಿಗೆ ನಿರ್ಮಾಪಕರು ಕೋಟಿ ಕೋಟಿ ರೂಪಾಯಿಗಳನ್ನು ನೀರಿನಂತೆ ಸುರಿಯುತ್ತಾರೆ. ಅದರಲ್ಲೂ ಖ್ಯಾತನಾಮರು ನಟಿಸುವ ಚಿತ್ರಗಳ ಬಜೆಟ್ ತುಸು ಹೆಚ್ಚಾಗಿಯೇ ಇರುತ್ತದೆ. ಅದಕ್ಕೆ ಕಾರಣ ಆ ನಾಯಕ ನಟರು ಪಡೆಯುವ ಸಂಭಾವನೆ. ಹೌದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಚಿತ್ರ ಒಂದಕ್ಕೆ ಹತ್ತು ಇಪ್ಪತ್ತು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಟ್ರೆಂಡ್ ಇತ್ತೀಚಿಗೆ ಶುರುವಾಗಿದೆ. ರಜನಿಕಾಂತ್, ಅಕ್ಷಯ್ ಕುಮಾರ್, ಮಹೇಶ್ ಬಾಬು, ಸಲ್ಮಾನ್ ಖಾನ್, ಶಾರುಖ್ ಖಾನ್ ಪ್ರಭಾಸ್ ಇವರು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅತಿ ಪ್ರಮುಖರಾಗಿದ್ದಾರೆ.

ಈ ಹಿಂದೆ ಅಕ್ಷಯ್ ಕುಮಾರ್ ಚಿತ್ರ ಒಂದಕ್ಕೆ 125 ಕೋಟಿ ಬೇಡಿಕೆ ಇಟ್ಟು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಆದರೆ ಇದೀಗ ಒಬ್ಬ ನಟ ಒಂದೇ ಚಿತ್ರಕ್ಕೆ ಬರೋಬ್ಬರಿ 800 ಕೋಟಿ ರೂಪಾಯಿಗಳ ಸಂಭಾವನೆ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು ಹಾಲಿವುಡ್ ಚಿತ್ರ ನಟ ಟಾಮ್ ಕ್ರೂಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹೌದು ಜೀವದ ಹಂಗನ್ನು ತೋರೆದು ಇವರು ಚಿತ್ರಗಳಲ್ಲಿ ಮಾಡುವ ಸಾಹಸ ದೃಶ್ಯಗಳು ನೋಡುಗರನ್ನು ತುದಿ ಗಾಲಿನಲ್ಲಿ ನಿಲ್ಲುವಂತೆ ಮಾಡುತ್ತವೆ.

ಮಿಷನ್ ಇಂಪಾಸಿಬಲ್, ಟಾಪ್ ಗನ್ ಅಂತಹ ಆಕ್ಷನ್ ಚಿತ್ರಗಳ ಹೀರೋ ಇದೆ ಟಾಮ್ ಕ್ರೂಸ್. ಇವರ ಇತ್ತೀಚೆಗೆ ಬಿಡುಗಡೆ ಆದ ಟಾಪ್ ಗನ್ ಮಾವೇರಿಕ್ ಎಂಬ ಚಿತ್ರಕ್ಕೆ ಇವರು ಪಡೆದ ಮೊತ್ತ ಇದೀಗ ಎಲ್ಲೆಡೆ ಸುದ್ದಿಯಲ್ಲಿದೆ. ಬರೋಬ್ಬರಿ 100 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ರೂಪಾಯಿಯಲ್ಲಿ 800 ಕೋಟಿ ಆಗುತ್ತದೆ. ಇವರನ್ನು ಹೊರತು ಪಡಿಸಿ ವಿಲ್ ಸ್ಮಿತ್ ಹಾಗೂ ಟೈಟಾನಿಕ್ ಖ್ಯಾತಿಯ ಲಿಯೊನಾರ್ಡ್ ಇವರೆಲ್ಲ 250 ಕೋಟಿ ಸಂಭಾವನೆಯನ್ನು ಸರ್ವೇ ಸಾಮಾನ್ಯವಾಗಿ ಚಿತ್ರ ಒಂದಕ್ಕೆ ಪಡೆಯುತ್ತಾರೆ.

%d bloggers like this: