ಕರ್ನಾಟಕದಲ್ಲಿ ಕಾಲೇಜು ತೆರೆದ ಮೂರೇ ದಿನಕ್ಕೆ ಕೊರೊನ ನರ್ತನ

ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ನವೆಂಬರ್ 17ರಿಂದ ಆರಂಭವಾಗಿರುವುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಆದರೆ ಈ ನಡುವೆ ಆತಂಕಕಾರಿ ಬೆಳವಣಿಗೆ ನಡೆದು ಹೋಗಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೇಳುವ ಪ್ರಕಾರ ಕಾಲೇಜುಗಳಿಗೆ ಹೋಗುವ ಮೊದಲು ಉಪನ್ಯಾಸಕರು ಮತ್ತು ಇತರೆ ಶಿಕ್ಷಣ ಇಲಾಖೆಯ, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಸುಮಾರು 11000 ಕ್ಕೂ ಹೆಚ್ಚು ಜನರನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ 57 ಮಂದಿಗೆ ಕೊರೋನ ಪಾಸಿಟೀವ್ ಎಂದು ವರದಿಯಲ್ಲಿ ತಿಳಿದು ಬಂದಿದೆ. ಈ ವಿಚಾರ ತಿಳಿದ ವಿಧ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮೊದಲೇ ಕೊರೋನ ಸಮಯವೆಂದು ಮಕ್ಕಳಾಗಲೀ, ಪೋಷಕರಾಗಲೀ ಹೆಚ್ಚು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಮಕ್ಕಳನ್ನು ಹೊರಗಡೆಗೆ ಕಳುಹಿಸುವುದಿಲ್ಲ. ಆದರೆ ಕಾಲೇಜಿಗೆ ಹೊರಡಬೇಕಾದ ಮಕ್ಕಳನ್ನು ತಡೆದು ಮನೆಯಲ್ಲಿಯೇ ಇರುವಂತೆ ತಾಕೀತು ಮಾಡುವ ಸಂಧರ್ಭ ಸೃಷ್ಟಿಮಾಡಿದೆ ಈ ಕೊರೋನವೈರಸ್ ಈಗಾಗಲೇ ಕಾಲೇಜುಗಳಲ್ಲಿ ಪಾಠ, ಪ್ರವಚನಗಳು ಶುರುವಾಗಿ ತರಗತಿಗಳನ್ನು ಆನ್ಲೈನ್ ಮುಖಾಂತರ ವ್ಯವಸ್ಥೆ ಮಾಡಿಲಾಗಿದೆ.

%d bloggers like this: