ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರ್ತಿದ್ದಾರೆ ಕನ್ನಡದ ಪ್ರಸಿದ್ಧ ನಟಿ

ಸದ್ಯದ ಮಟ್ಟಿಗೆ ಕಿರುತೆರೆ ಮನರಂಜನಾ ಲೋಕದಲ್ಲಿ ಹೊಚ್ಚ ಹೊಸ ವಿಭಿನ್ನ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ವಾಹಿನಿ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿ. ಒಂದರ ಮೇಲೊಂದರಂತೆ ಸಾಲು ಸಾಲು ಹೊಸ ಬಗೆಯ ಧಾರಾವಾಹಿ ಮತ್ತು ಸಿಂಗಿಂಗ್, ಕಾಮಿಡಿ ಮತ್ತು ಕೌಟುಂಬಿಕ ರಿಯಾಲಿಟಿ ಶೋಗಳ ಮೂಲಕ ಇನ್ನಿತರ ವಾಹಿನಿಗಳಿಗಿಂತ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದೆ ಕಲರ್ಸ್ ಕನ್ನಡ. ಬಿಗ್ ಬಾಸ್, ಫ್ಯಾಮಿಲಿ ಪವರ್, ಸಿಂಗಿಂಗ್ ಶೋ, ರಾಜಾ ರಾಣಿ ಅಂತಹ ಅನೇಕ ರಿಯಾಲಿಟಿ ಶೋಗಳು ಕಲರ್ಸ್ ಕನ್ನಡದಲ್ಲಿ ಯಶಸ್ವಿಯಾಗಿ ಮೂಡಿ ಬಂದಿವೆ ಮೂಡಿ ಬರುತ್ತಲೂ ಇವೆ.

ಇತ್ತೀಚೆಗೆ ತಾನೇ ನೂತನ ದಂಪತಿಗಳಿಗೆ ಹೇಳಿ ಮಾಡಿಸಿದ ಹಾಗೇ ಇದ್ದಂತಹ ರಾಜಾ ರಾಣಿ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಈ ಶೋನಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಬೊಂಬೆ ಖ್ಯಾತಿಯ ನೇಹಾಗೌಡ ಮತ್ತು ಚಂದನ್ ದಂಪತಿಗಳು ವಿಜೇತರಾಗಿದ್ದಾರೆ. ಈ ಶೋ ಮುಗಿದ ಕೂಡಲೇ ಇದೀಗ ಕಲರ್ಸ್ ಕನ್ನಡದಲ್ಲಿ ಮತ್ತೊಂದು ಸೀರಿಯಲ್ ಸಜ್ಜಾಗುತ್ತಿದೆ. ಈ ಶೋನ ಹೆಸರು ನನ್ನಮ್ಮ ಸೂಪರ್ ಸ್ಟಾರ್. ಈ ಹೊಸ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ತಾಯಿ ಮತ್ತು ಮಕ್ಕಳ ಭಾಂಧವ್ಯವನ್ನು ತಿಳಿಸುವಂತಹ ಗೇಮ್ ಶೋ ಆಗಿದೆಯಂತೆ. ಇಲ್ಲಿ ತಾಯಿಯು ತಮ್ಮ ಮಕ್ಕಳೊಂದಿಗೆ ತರಲೆ, ತಮಾಷೆ, ತುಂಟಾಟದಂತಹ ಆಟದಲ್ಲಿ ಭಾಗವಹಿಸಲಿದ್ದಾರಂತೆ.

ತಾಯಿ ಕೇವಲ ಮನೆ ಕೆಲಸ, ಮನೆ ಸಂಸಾರ, ಮಕ್ಕಳ ಲಾಲನೆ ಪಾಲನೆ ಇಷ್ಟೇ ಅಲ್ಲ ಅವಳಲ್ಲೂ ಕೂಡ ವಿಶಿಷ್ಟ ಪ್ರತಿಭೆ ಇರುತ್ತದೆ ಎಂಬುದನ್ನ ಸಾದರ ಪಡಿಸುವಂತಹ ಕಾರ್ಯಕ್ರಮವಾಗಿರಲಿದೆಯಂತೆ ಈ ನನ್ನಮ್ಮ ಸೂಪರ್ ಸ್ಟಾರ್ ಶೋ. ಈ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹನ್ನೆರಡು ಮಕ್ಕಳು ಮತ್ತು ಆ ಮಕ್ಕಳ ತಾಯಂದಿರು ಇರಲಿದ್ದಾರಂತೆ. ಒಂದೊಂದು ವಾರದಲ್ಲಿ ಈ ತಾಯಿ ಮಕ್ಕಳ ಜೋಡಿ ಒಂದೊಂದು ಬಗೆಯ ಪ್ರದರ್ಶನದಲ್ಲಿ ಪಾಲ್ಗೊಂಡು ವೀಕ್ಷಕರನ್ನ ರಂಜಿಸಲಿದ್ದಾರೆ. ಇವರ ಪ್ರತಿಭಾ ಪ್ರದರ್ಶನ ನೋಡಿ ಇವರಿಗೆ ಸೂಕ್ತ ಅಂಕ ನೀಡಲು ತೀರ್ಪುಗಾರರಾಗಿ ನಟ, ನಿರೂಪಕ ಸೃಜನ್ ಲೋಕೇಶ್, ಹಿರಿಯ ನಟಿ ತಾರಾ ಮತ್ತು ಅನು ಪ್ರಭಾಕರ್ ಪಾಲ್ಗೊಳ್ಳಲಿದ್ದು, ನಿರೂಪಕಿಯಾಗಿ ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಇರಲಿದ್ದಾರೆ.

%d bloggers like this: