ಕೊರೋನಾ ಆತಂಕದ ನಡುವೆಯೂ ಇಲ್ಲಿದೆ ಸಂತಸದ ಸುದ್ದಿ

ಕೊರೋನಾ ಹೆಮ್ಮಾಯಿಯಿಂದ ಇಡೀ ಜಗತ್ತು ಅಕ್ಷರಶಃ ನಡುಗಿಹೋಗಿತ್ತು. ಇಡೀ ವಿಶ್ವದ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿತ್ತು. ಆದರೆ ಈಗ ನಿಧಾನವಾಗಿ ಪರಿಸ್ಥಿತಿ ಸುಧಾರಿಸುತ್ತಿದೆ. ದೇಶದಲ್ಲಿ ಇಲ್ಲಿಯವರೆಗೆ ೮೦ ಲಕ್ಷ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ 71 ಲಕ್ಷ ಜನ ಚೇತರಿಕೆಯಾಗಿದ್ದರೆ.

ಅಂದರೆ ಪ್ರತಿಶತ 90 ರಷ್ಟು ಜನ ಗುಣಮುಖರಾಗಿದ್ದಾರೆ. ಪ್ರತಿನಿತ್ಯ 80 ಸಾವಿರದ ಮಟ್ಟಿಗೆ ಬರುತ್ತಿದ್ದ ಪ್ರಕರಣಗಳು ಈಗ 50 ಸಾವಿರಕ್ಕೆ ಇಳಿದುರುವುದೂ ಕೂಡ ಒಂದು ರೀತಿಯ ಆಶಾಭಾವನೆ ಮೂಡಿಸಿದೆ. ಇದರ ನಡುವೆಯೇ ಕೊರೋನಾ ಸೋಂಕಿನಿಂದ ಆಗುವ ಮರಣದ ಪ್ರಮಾಣವೂ ಕೂಡಾ ಪ್ರತಿಶತ 1.5 ಗೆ ಇಳಿದಿರುವುದು ಸಮಾಧಾನಕಾರವಾಗಿದೆ.

ಈಗ ದೇಶದಲ್ಲಿ 7 ಲಕ್ಷ ಸಕ್ರೀಯ ಪ್ರಕರಣಗಳಿದ್ದು ಅವರೆಲ್ಲರೂ ಚೇತರಿಕೆ ಆಗುವ ಹಂತದಲ್ಲಿದ್ದಾರೆ. ಒಟ್ಟಾರೆ ಹೇಳುವದಾದರೆ 8 9 ತಿಂಗಳುಗಳಿಂದ ಆವರಿಸಿದ್ದ ಕಾರ್ಮೋಡ ಇನ್ನೇನು ಕೆಲವೇ ದಿನಗಳಲ್ಲಿ ಸರಿಯುವ ಭರವಸೆ ಮೂಡಿದೆ, ಆದರೂ ಕೂಡ ಈ ಹೆಮ್ಮಾರಿ ಸಂಪೂರ್ಣವಾಗಿ ತೊಲಗುವವರೆಗೂ ನಾವೇಲ್ಲಾರೂ ಇದೆ ರೀತಿಯಲ್ಲೇ ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಸುವದನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗಿದೆ.

%d bloggers like this: