ಕೊರೊನ ಲಸಿಕೆ ಪಡೆದ ಭಾರತದ ಮೊದಲ ನಟಿ

ಮಾನವ ರಾಕ್ಷಸನಂತೆ ದಂಡೆತ್ತಿ ಬಂದ ಈ ಕೊರೋನ ವೈರಸ್ ಮನುಕುಲವನ್ನು ನಲುಗಿಸಿ, ಇನ್ನೇನೋ ಇಡೀ ಜಗತ್ತಿನ ಮಾನವ ಸಮೂಹವನ್ನು ನಾಶ ಮಾಡಿಬಿಡುತ್ತದೆ ಎನ್ನುವ ಪರಿಸ್ಥಿತಿ ಕಳೆದೊಂದು ವರ್ಷದಿಂದ ಆತಂಕದಲ್ಲಿ ಬದುಕುವಂತೆ ಮಾಡಿತ್ತು. ಇದೀಗ ಭಾರತೀಯ ಸಂಶೋಧನ ಕೇಂದ್ರ ಸಂಸ್ಥೆಯು ತನ್ನ ಅವಿರತ, ನಿರಂತರ ಶ್ರಮದಿಂದಾಗಿ ಕೋವಿಡ್19 ಲಸಿಕೆ ಸಿದ್ದವಾಗಿದೆ. ಭಾರತದಲ್ಲಿ ಕೊವ್ಯಾಕ್ಸಿನ್ ಸಿದ್ದವಾಗಿದ್ದರು ಕೂಡ ಇನ್ನು ವಿತರಣೆ ಮಾಡುವ ಯೋಜನೆ ಸಿದ್ದವಾಗಿಲ್ಲ. ಅದಕ್ಕೆ ಬೇರೆ ರೀತಿಯಾದ ಸಂಶೋಧನಾತ್ಮಕ ಕಾರಣಗಳಿವೆ. ಇನ್ನು ಇದರ ನಡುವೆ ಬಾಲಿವುಡ್ ಖ್ಯಾತ ನಟಿಗೆ ಈ ಕೋವಿಡ್ ಚಿಕಿತ್ಸೆ ನೀಡಿದ್ದು, ಈ ಕೋವಿಡ್ ಚಿಕಿತ್ಸೆಗೆ ಔಷಧಿ ಪಡೆದ ಭಾರತದ ಪ್ರಪ್ರಥಮ ವ್ಯಕ್ತಿ ಮತ್ತು ಇವರು ಬಾಲಿವುಡ್ ಸ್ಟಾರ್ ನಟಿ ಎಂಬುದು ವಿಶೇಷವಾಗಿದೆ.

ಹೌದು ಹಿಂದಿ ಚಿತ್ರರಂಗದ ಖ್ಯಾತ ನಟಿಯಾದ ಶಿಲ್ಪಾ ಶಿರೋಡ್ಕರ್ ಇತ್ತೀಚೆಗೆ ಕೊರೋನ ಸೋಂಕಿಗೆ ತುತ್ತಾಗಿದ್ದರು. ಇವರು ಸದ್ಯದ ಮಟ್ಟಿಗೆ ದುಬೈನಲ್ಲಿ ವಾಸ ಮಾಡುತ್ತಿದ್ದು, ದುಬೈನಲ್ಲಿ ಕೋವಿಡ್ 19 ಲಸಿಕೆ ಸಿದ್ದವಾಗಿದ್ದು ಈಗಾಗಲೇ ಸೋಂಕಿತರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ.ಇನ್ನು ನಟಿ ಶಿಲ್ಪಾ ಶಿರೋಡ್ಕರ್ ಅವರು ಸಹ ಕೊರೋನ ವೈರಸ್ ಗೆ ತುತ್ತಾಗಿದ್ದರಿಂದ ಕೊರೋನ ಲಸಿಕೆ ಪಡೆದು ಗುಣಮುಖರಾಗಿದ್ದಾರೆ.

ಈ ವಿಚಾರವನ್ನು ಸ್ವತಃ ಶಿಲ್ಪಾ ಅವರೇ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೋಟೋ ದೊಂದಿಗೆ ನಾನು ಈಗ ಕೋವಿಡ್ ಲಸಿಕೆ ಪಡೆದಿದ್ದೇನೆ, ಜೊತೆಗೆ ಸುರಕ್ಷಿತವಾಗಿದ್ದೇನೆ ಎಂದು ತಮ್ಮ ಪೋಟೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಇನ್ನು ದುಬೈ ದೇಶದಲ್ಲಿ ಈ ಕೋವಿಡ್ ಲಸಿಕೆಯನ್ನು ಡಿಸೆಂಬರ್ ತಿಂಗಳ ಕೊನೆಯ ವಾರದಿಂದ ತುರ್ತು ಚಿಕಿತ್ಸೆ ಎಂದು ಫೈಜರ್ ಲಸಿಕೆಗೆ ಅನುಮೋದನೆ ನೀಡಲಾಗಿದೆ. ದುಬೈ ದೇಶದಲ್ಲಿ ಈಗಾಗಲೇ ಈ ಫೈಜರ್ ಲಸಿಕೆಯು ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ದುಬೈ ದೇಶದ ಆರೋಗ್ಯ ಸಂಸ್ಥೆಯೊಂದು ತಿಳಿಸಿದೆ.

%d bloggers like this: