ಕಾಗೆ ಹೋಗಿ ಗೂಬೆ ಬಂತು ಅನ್ನೋ ಹಾಗೇ ಕೊರೋನ, ರೂಪಾಂತರಿ ಕೊರೋನ ಹೋಗಿ ಇದೀಗ ಹಕ್ಕಿಜ್ವರ ಶುರುವಾಗಿದೆ. ಈ ವರ್ಷವೂ ಕೂಡ 2020 ರಂತೆ ರಕ್ಕಸ ರೋಗಗಳ ವರ್ಷವಾಗುತ್ತಾ ಅನ್ನೋ ಪ್ರಶ್ನೆ ಎಂಬ ಮೂಡು ವುದಕ್ಕೆ ಈ ಹಕ್ಕಿಜ್ವರ ಸಾಕ್ಷಿ ಯಾಗಿದೆ. ಈ ಹಕ್ಕಿಜ್ವರ ಸದ್ಯದ ಮಟ್ಟಿಗೆ ಹಿಮಾಚಲ ಪ್ರದೇಶ, ರಾಜಸ್ಥಾನ, ಕೇರಳ, ಗುಜರಾತ್, ಪಂಜಾಬ್ ಹಾಗೂ ಇತರೆ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಈ ಹಕ್ಕಿಜ್ವರ ಈಗಾಗಲೇ ದೇವರನಾಡು ಎಂದು ಕರೆಯುವ ಕೇರಳ ರಾಜ್ಯಕ್ಕೆ ವಕ್ಕರಿಸಿದ್ದು, ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆಯಾಗಿ ಇದೀಗ 12000 ಬಾತುಕೋಳಿಗಳು ಸಾವಿಗೀಡಾಗಿವೆ ಎಂದು ತಿಳಿದುಬಂದಿದೆ. ಆದರೆ ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಇದುವರೆಗೂ ಸುಮಾರು 36000 ಬಾತುಕೋಳಿಗಳು ಸತ್ತಿರುವುದು ಈ ಹಕ್ಕಿಜ್ವರ ರೋಗದ ಲಕ್ಷಣಗಳಿಂದ ಎಂದು ತಿಳಿದುಬಂದಿದೆ.

ಇನ್ನು ಇತ್ತ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಯ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿ ತುರ್ತು ಘಟಕಗಳು ಮತ್ತು ಸ್ಥಳೀಯರಿಗೆ ಅನುಕೂಲ ವಾಗುವಂತೆ ಸ್ಪಂದನಾ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಕೇರಳ ರಾಜ್ಯದ ಅರಣ್ಯ ಸಚಿವ ಕೆ ರಾಜು ಅವರು ತಿಳಿಸಿದ್ದಾರೆ.
ಇನ್ನು ಹಿಮಾಚಲ ಪ್ರದೇಶ ದಲ್ಲಿಯೂ ಕೂಡ ಈ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಸುಮಾರು 1775 ಕ್ಕೂ ಹೆಚ್ಚು ಸ್ಥಳೀಯ ಪಕ್ಷಿಗಳು ಮತ್ತು ವಲಸೆಯಾಗಿ ಬರುವ ಈ ಹಕ್ಕಿ, ಇತರೆ ಪಕ್ಷಿಗಳು ಹಕ್ಕಿಜ್ವರದ ಲಕ್ಷಣಗಳಿಂದ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಹರಿಯಾಣದಲ್ಲಿಯೂ ಕೂಡ ಸಾವಿರಾರು ಕೋಳಿಗಳು ಹಕ್ಕಿಜ್ವರಕ್ಕೆ ತುತ್ತಾಗಿವೆ. ಇನ್ನು ರಾಜಸ್ಥಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಗೆಗಳು ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ ಎಂದು ಹೇಳಲಾಗುತ್ತಿದೆ.

ಈ ರೀತಿಯ ದೇಶದ ವಿವಿಧ ರಾಜ್ಯಗಳಲ್ಲಿ ಕಾಣಿಸಿ ಕೊಂಡಿರುವ ಹಕ್ಕಿಜ್ವರವನ್ನು ನಿಯಂತ್ರಿಸಲು ಆದುವರೆಗೂ ಸಾವನ್ನಪ್ಪಿರುವ ಪಕ್ಷಿಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಲಾಗುತ್ತಿದೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಮನುಷ್ಯ ಸಂಕುಲವನ್ನು ನಾಶ ಪಡಿಸಲು ಕೊರೋನ ವೈರಸ್ ಎಂಬ ರಕ್ಕಸ ವೈರಸ್ ಬಂದರೆ ಈ ಪ್ರಾಣಿ ಪಕ್ಷಿ ಸಂಕುಲವನ್ನು ನಾಶ ಮಾಡಲು ಈ ಹಕ್ಕಿ ಜ್ವರ ಕಾಡಲಾರಂಭಿಸಿದೆ.