ಅಸ್ತಮಾ ಇರುವವರು ತಪ್ಪದೇ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಅದರಲ್ಲೂ ಮಳೆಗಾಲದ ವಾತಾವರಣವಿದ್ದಾಗ ತುಸು ಎಚ್ಚರಿಕೆಯಿಂದಲೇ ಆರೋಗ್ಯದ ಕಡೆ ಗಮನವಹಿಸಬೇಕು, ಏಕೆಂದರೆ ಮಳೆಗಾಲದ ಸಮಯದಲ್ಲಿ ಸರ್ವೇಸಾಮಾನ್ಯವಾಗಿ ಶೀತ, ಕೆಮ್ಮು, ನೆಗಡಿ, ತಲೆನೋವಿನ ಭಾದೆ, ಹೀಗೆ ಒಂದಷ್ಟು ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆ ಬೇರೆ ಸಮಯದಲ್ಲಿ ಕಾಡಿದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ ಜಗತ್ತಿನಾದ್ಯಂತ ಕೊರೋನ ವೈರಸ್ ಆಕ್ರಮಿಸಿಕೊಂಡಿರುವಾಗ ಇಂತಹ ಲಕ್ಷಣಗಳು ಕಂಡು ಬಂದರೆ ಈ ವ್ಯಕ್ತಿಗೆ ಕೊರೋನ ಬಂದಿರಬಹುದು ಎಂದು ಅನುಮಾನದಿಂದಲೇ ನೋಡುವುದು ಹೆಚ್ಚು ಸಮಸ್ಯೆ ಹೀಗಿರುವಾಗ ಇಂತಹ ಸಾಮಾನ್ಯ ಜ್ವರಗಳಿಗೂ ಜನ ಭಯಭೀತರಾಗುವುದು ಸಾಮಾನ್ಯವಾಗಿದೆ, ಆರೋಗ್ಯವಂತ ವ್ಯಕ್ತಿಗಳಿಗೆ ಈ ಪರದೇಶಿ ಕೊರೋನ ವೈರಸ್ ಹರಡುವಿಕೆಯ ಪ್ರಮಾಣ ಅಷ್ಟಕಷ್ಟೆ ಆದರೆ ಈಗಾಗಲೇ ವಯೋವೃದ್ದರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು, ಮಕ್ಕಳು, ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಈ ಕೊರೋನ ಬಹುಬೇಗನೆ ಅಂಟಿಕೊಳ್ಳುತ್ತದೆ. ಉಸಿರಾಟದ ಸಮಸ್ಯೆಯ ಅಸ್ತಮಾ ಹೊಂದಿರುವ ವ್ಯಕ್ತಿಗಳು ಹೆಚ್ಚು ಗಂಭೀರವಾಗಿ ಸುರಕ್ಷಾ ಕ್ರಮಗಳನ್ನು ಪಾಲೀಸಲೇಬೇಕು. ಹೊರಗಡೆ ಹೋಗುವ ಮುಂಚೆ ವೈದ್ಯರ ಸಲಹೆಯನುಸಾರ ಮಾಸ್ಕ, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಒಳ್ಳೇಯದು.
ಇದೆಲ್ಲಾಕ್ಕಿಂತ ಹೆಚ್ಚಾಗಿ ಧೂಮಪಾನ, ವಾಹನಗಳ ಹೊಗೆಯುಕ್ತ ಗಾಳಿ ಪ್ರದೇಶಕ್ಕೆ ಹೋಗದೇ ಇರುವುದು ಉತ್ತಮ. ಇನ್ನು ಮನೆಗಳಲ್ಲಿ ಧೂಳು, ದುಂಬು ಇಲ್ಲದ ರೀತಿಯಲ್ಲಿ ಪ್ರತಿನಿತ್ಯ ಎಲ್ಲಾ ರೀತಿಯ ಸಾಮಾಗ್ರಿಗಳನ್ನು
ಸ್ವಚ್ಛಗೊಳಿಸಬೇಕಾಗುತ್ತದೆ. ಆಹಾರದ ವಿಚಾರವಾಗಿ ಹೆಚ್ಚು ಜಂಕ್ ಫುಡ್ ತಿನ್ನದೆ, ಮಸಾಲೆಯುಕ್ತ ಪಧಾರ್ಥ ಸೇವಿಸದೇ ಮಿತವಾದ ಆರೋಗ್ಯಕರ ಆಹಾರ, ಹಣ್ಣು ಹಂಪಲುಗಳು ಹೆಚ್ಚು ನೀರು ಕುಡಿಯುವ ಅಭ್ಯಾಸ ಕ್ರಮ ರೂಢಿಸಿಕೊಂಡರೆ ಆರೋಗ್ಯಕರವಾಗಿರಬಹುದು. ಅಸ್ತಮಾ ಸಮಸ್ಯೆವುಳ್ಳವರು ಮಲಗುವ ಸಮಯದಲ್ಲಿ ತಮ್ಮ ಕಾಲುಗಳನ್ನ ಎತ್ತರವಾಗಿ ದಿಂಬಿನ ಮೇಲೆ ಇಟ್ಟು, ತಲೆಯ ಭಾಗವು ಕೊಂಚ ಇಳಿಮುಖವಾದಂತೆ ಮಲಗುವುದು ಉತ್ತಮ. ಮಹಿಳೆಯರು ಸ್ನಾನವಾದ ನಂತರ ಸಾಮಾನ್ಯವಾಗಿ ತಲೆಯಲ್ಲಿರುವ ನೀರು ಹಾರುವವರೆಗೆ ಕಾಯದೆ ಟವೆಲ್ ಕಟ್ಟಿ ಹಾಗೇಯೇ ಬಿಡುತ್ತಾರೆ. ಆದರೆ ಇದು ನೀರಿನ ತೇವಾಂಶ ಇಳಿದು ತಲೆನೋವಿಗೆ ಕಾರಣವಾಗಬಹುದು, ಆದಷ್ಟು ಉಗುರುಬೆಚ್ಚಗಿನ ಸ್ನಾನ ಒಳ್ಳೆಯದು, ಅಸ್ತಮಾ ಹೊಂದಿರುವ ವ್ಯಕ್ತಿಗಳು ಆದಷ್ಟು ಪ್ರಶಾಂತವಾಗಿರುವ ಶುದ್ದ ಗಾಳಿ ಹೊಂದಿರುವ ವಾತಾವರಣದಲ್ಲಿ ಕಾಲಕಳೆಯುವ ಅಭ್ಯಾಸ ರೂಢಿಸಿಕೊಂಡರೆ ಉತ್ತಮವಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.