ಬರೋಬ್ಬರಿ ಆರು ತಿಂಗಳಿಂದ ಕಣ್ಣಿಗೆ ಕಾಣದ ಒಂದು ವೈರಸ್ ಇಡೀ ಜಗತ್ತನ್ನೇ ನಡುಗಿಸಿ ಬಿಟ್ಟಿದೆ. ದಿನೇ ದಿನೇ ತನ್ನ ರುದ್ರನರ್ತನವನ್ನು ಹೆಚ್ಚಿಸುತ್ತಲೇ ಸಾಗುತ್ತಿರುವ ಈ ಮಾರಕ ವೈರಸ್ ಯಾವಾಗ ಅಂತ್ಯವಾಗುವುದು, ಇದಕ್ಕೆ ಯಾವಾಗ ವ್ಯಾಕ್ಸಿನ್ ಬರುವುದು ಎಂದು ಬಹುತೇಕ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳ ಆರ್ಥಿಕತೆ ನೆಲಕಚ್ಚಿದೆ. ಅನೇಕ ಜನರು ನಿರುದ್ಯೋಗಿಗಳಾಗಿದ್ದಾರೆ ಇನ್ನು ಕೆಲವರು ಅರೆನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಕೇಂದ್ರ ಆರೋಗ್ಯ ಸಚಿವಾಲಯ ಜನತೆಗೆ ಸಿಹಿಸುದ್ದಿಯನ್ನು ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಇತ್ತೀಚಿಗೆ ಮಾತನಾಡಿ ಈ ವರ್ಷದ ಅಂತ್ಯಕ್ಕೆ ಭಾರತ ಸ್ವತಃ ತಯಾರಿಸುತ್ತಿರುವ ಕೋವಾಕ್ಸಿನ್ ಔಷಧ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದ್ದಾರೆ. sars cov 2 ಇದೇ ಡಿಸೆಂಬರ್ ವೇಳೆಗೆ ಲಭ್ಯವಾಗುವುದು ಮತ್ತು ಈಗಾಗಲೇ ಅದು ಟ್ರಯಲ್ ಹಂತದಲ್ಲಿ ಇದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.