ಕೊರೊನ ವೈರಸ್ ಗಾಳಿಯಲ್ಲಿ ಹರಡುವಿಕೆಯ ಬಗ್ಗೆ ಮತ್ತೆ ಭಾರಿ ಚರ್ಚೆ,ವಿಜ್ಞಾನಿಗಳು ಹೇಳಿದ್ದೇನು

ಕೊರೋನ ವೈರಸ್ ಹರಡುವ ಬಗ್ಗೆ ಹಲವಾರು ಭಾರಿ ಹಲವು ರೀತಿಯಲ್ಲಿ ಬಿಂಬಿಸಲಾಗಿತ್ತು. ಆದರೆ ಈಗ ಗಾಳಿಯಲ್ಲಿಯೂ ಸಹ ವೈರಸ್ ಒಂದಷ್ಟು ನಿಮಿಷಗಳ ಕಾಲ ಜೀವಂತವಾಗಿರುವ ಸಂಭವ ಇದಿಯಾ ಎಂಬ ಪ್ರಶ್ನೆ ಕೆಲವು ಸಂಶೋಧನ ವಿಜ್ಞಾನಿಗಳನ್ನು ಕಾಡತೊಡಗಿರುವುದು ಆಶ್ಚರ್ಯಕರ. ಹೌದು ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಅದರಲ್ಲೂ ಆಸ್ಪತ್ರೆಯ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸೇವಾಸಿಬ್ಬಂದಿಗಳು, ವೈದ್ಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಕ್ಷೇಮದ ಕುರಿತು ಈ ಕೊರೋನ ವೈರಸ್ ಗಾಳಿಯಲ್ಲಿಯೂ ಸಹ ಹರಡುವ ಸಾಧ್ಯತೆ ಇರಬಹುದೇ ಎಂದು ಸಂಶೋಧನೆ ಇದರ ಕುರಿತು ಅಧ್ಯಾಯನಕ್ಕೆ ಅಸ್ತು ಎಂದಿದೆ. ಒಂದು ವೇಳೆ ಈ ವೈರಸ್ ಗಾಳಿಯಲ್ಲಿ ಹರಡುವುದಾದರೆ ಗಾಳಿಯಲ್ಲಿ ಎಷ್ಟು ನಿಮಿಷಗಳ ವರೆಗೆ ಇದು ಜೀವಂತವಾಗಿರಬಹುದು ಎನ್ನುವುದಕ್ಕೆ ಸಿಎಸ್ಐಆರ್ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಬಯೋಲಜಿ ಈ ಅಧ್ಯಾಯನ ನಡೆಸುತ್ತಿದೆ.

ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳು ಇರುತ್ತದೆ ಅದರ ಜೊತೆಗೆ ಕೋವಿಡ್ ಕೇಂದ್ರಗಳು ಸಹ ಇದ್ದು ಇಲ್ಲಿ ಬೇರೆ ಬೇರೆ ಕಾರಣಗಳಿಗೆ ಒಳರೋಗಿಯಾಗಿ ಆಸ್ಪತ್ರೆಗಳಿಗೆ ಸೇರಿರುತ್ತಾರೆ ಕೋವಿಡ್ ಲಕ್ಷಣವಿಲ್ಲದ ವ್ಯಕ್ತಿಗಳಿಗೂ ಸಹ ಸೋಂಕಿತರ ವ್ಯಕ್ತಿಯಿಂದ ಅವರು ಉಸಿರಾಡುವ ಗಾಳಿಯಿಂದ ಅವರ ಬಳಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಹರಡುವ ಸಂಭಂವ ಇದ್ದರೆ ಅನಾವಶ್ಯಕವಾಗಿ ತೊಂದರೆಯಾಗುತ್ತದೆ ಎಂದು ಪ್ರತಿ ಎರಡು ಮೀಟರ್, ನಾಲ್ಕು ಮೀಟರ್, ಎಂಟು ಮೀಟರ್ ಹೀಗೆ ಭೌತಿಕ ಅಂತರವನ್ನು ನೋಡಿಕೊಂಡು ಇದರ ವ್ಯಾಪ್ತಿಯ ಆಧಾರದ ಮೇಲೆ ಗಾಳಿಯಲ್ಲಿ ವೈರಸ್ ಹರಡುವುದರ ಬಗ್ಗೆ ಕಳೆದ ಹತ್ತು ದಿನಗಳಿಂದ ಅಧ್ಯಾಯನ ನಡೆಸುತ್ತಿದೆ ಎಂದು ಸಿಸಿಎಂಬೀ ನಿರ್ದೇಶಕ ರಾಕೇಶ್ ಮಿಶ್ರಾ ಅವರು ಸ್ಪಷ್ಟತೆ ನೀಡಿದ್ದಾರೆ.

%d bloggers like this: