ಕೊರೋನಾ ಕುರಿತು ಮತ್ತೊಂದು ಹೇಳಿಕೆ ಕೊಟ್ಟ ತಜ್ಞರ ತಂಡ

ಕೊರೋನಾ ಎಂಬ ಮಹಾಮಾರಿ ಚೀನಾದಿಂದ ಭಾರತಕ್ಕೆ ಜಗತ್ತಿಗೆ ವಕ್ಕರಿಸಿ ನಾಲ್ಕು ತಿಂಗಳುಗಳು ಕಳೆದಿವೆ. ದಿನಕಳೆದಂತೆ ಅದರ ಆರ್ಭಟ ಹೆಚ್ಚುತ್ತಿದೆ ಹೊರತು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಸಂಶೋಧನೆಯಲ್ಲಿ ನಿರತರಾಗಿರುವಂತಹ ತಜ್ಞರ ತಂಡ ಒಂದು ಬೆಚ್ಚಿಬೀಳಿಸುವ ಮಾಹಿತಿಯನ್ನು ಹೊರಹಾಕಿದೆ. ಅದೇನೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಕೋರೋನಾ ಸೋಂಕು ಅಂತ್ಯವಾಗುವುದು ಎಂದು ಆಸೆಗಣ್ಣಿನಲ್ಲಿ ಎದುರು ನೋಡುತ್ತಿರುವ ಪ್ರತಿಯೊಬ್ಬರಿಗೂ ಶಾಕ್ ಎನ್ನುವಂತೆ ಈ ಸೋಂಕು ಇನ್ನು ಮೂರು ತಿಂಗಳುಗಳ ಕಾಲ ಭಾರತದಲ್ಲಿ ತನ್ನ ರುದ್ರನರ್ತನವನ್ನು ಮುಂದುವರಿಸಲಿದೆ ಎಂದು ಹೇಳಿದೆ.

ಹೌದು ಸದ್ಯದ ಪರಿಸ್ಥಿತಿಯನ್ನು ಕೂಲಂಕುಶವಾಗಿ ಗಮನಿಸಿದರೆ ಪ್ರತಿನಿತ್ಯ 25000 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಇನ್ನು ಮುಂದಿನ ತಿಂಗಳುಗಳಲ್ಲಿ ಇದರ ಪ್ರಭಾವ ಇಮ್ಮಡಿಯಾಗುವ ಸಾಧ್ಯತೆ ಇದೆ ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ತಜ್ಞರ ತಂಡ ನೀಡಿದೆ. ಮುಂದುವರೆಸಿ ಅವರು ಅಕ್ಟೋಬರ್ ಮಧ್ಯಭಾಗದಲ್ಲಿ ಸೋಂಕು ಕೊಂಚಮಟ್ಟಿಗೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಕೂಡ ಹೇಳಿದ್ದಾರೆ. ಸರ್ಕಾರದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಮತ್ತು ಲಾಕ್ ಡೌನ್ ನಿಯಮಗಳನ್ನು ಚಾಚೂತಪ್ಪದೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಲ್ಲಿ , ಇದರಿಂದ ಆದಷ್ಟು ಬೇಗ ಪಾರಾಗಬಹುದು ಎಂದು ತಜ್ಞರು ವಿವರಿಸಿದ್ದಾರೆ.

%d bloggers like this: