ಇಡೀ ವಿಶ್ವದಾದ್ಯಂತ ಕೊರೋನಾ ಹೆಮ್ಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನಕಳೆದಂತೆ ಸಾವು ನೋವುಗಳ ಸಂಖ್ಯೆ ಮಿತಿ ಮೀರುತ್ತಿದೆ. ವಿಶ್ವದ ಪ್ರತಿಯೊಂದು ದೇಶದ ಪ್ರತಿಯೊಬ್ಬ ವ್ಯಕ್ತಿಯು ಈ ಮಹಾ ಹೆಮ್ಮಾರಿ ತಡೆಗಟ್ಟುವ ಲಸಿಕೆಗಾಗಿ ಆಸೆಗಣ್ಣಿನಿಂದ ಕಾಯುತ್ತಲಿದ್ದಾರೆ. ಅದೇ ರೀತಿ ಇಡೀ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಕೊರೋನಾ ವೈರಸ್ ಮಟ್ಟಹಾಕುವ ಲಸಿಕೆಯ ತಯಾರಿಕೆಯಲ್ಲಿ ವಿಜ್ಞಾನಿಗಳು ಹಗಲಿರುಳೆನ್ನದೆ ನಿರತರಾಗಿದ್ದಾರೆ.
ಈಗಾಗಲೇ ಹಲವು ದೇಶದ ವಿಜ್ಞಾನಿಗಳು ಸಿದ್ಧಪಡಿಸಿರುವ ಲಸಿಕೆಗಳು ಎರಡು ಹಂತಗಳಲ್ಲಿ ಯಶಸ್ಸು ಕಂಡು ಮೂರನೇ ಹಂತದ ಪ್ರಯೋಗಗಳಲ್ಲಿವೆ. ಆದರೆ ಈ ನಡುವೆಯೇ WHO ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಆತಂಕಕಾರಿ ಹೇಳಿಕೆಯೊಂದನ್ನು ನೀಡಿದೆ. ಅದೇನೆಂದರೆ ಸತತವಾಗಿ ಲಸಿಕೆಯನ್ನು ಸಿದ್ಧಪಡಿಸುವ ಪ್ರಯತ್ನಗಳು ನಡೆದಿದ್ದರೂ ಕೂಡ 2021ರ ಆರಂಭದಲ್ಲಿಯೇ ಅದನ್ನು ನಿರೀಕ್ಷಿಸಬಹುದು ಎಂದು ಸಂಸ್ಥೆ ಹೇಳಿದೆ. ಇಂದು ನಾಳೆ ಎಂದು ಕಾಯುತ್ತಿದ್ದ ಜನರಿಗೆ ಈ ಹೇಳಿಕೆಯಿಂದ ಶಾಕ್ ಆಗಿದೆ.