ಕೋರೋನಾ ಸೋಂಕು ಯಾವಾಗ ಹೋಗುತ್ತದೆ? ಇಡೀ ಜಗತ್ತು ಮೊದಲಿನಂತೆ ಯಾವಾಗ ಆಗುತ್ತದೆ, ಎಲ್ಲ ಕಾರ್ಯಚಟುವಟಿಕೆಗಳು ಮೊದಲಿನಂತೆ ಯಾವಾಗ ನಡೆಯುತ್ತವೆ ಎಂಬೆಲ್ಲಾ ಪ್ರಶ್ನೆಗಳು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ದಿನನಿತ್ಯವೂ ಕಾಡುತ್ತಿವೆ. ಹೌದು ಕೋರೊನಾ ಸೋಂಕು ಜಗತ್ತಿಗೆ ವಕ್ಕರಿಸಿ 4 ತಿಂಗಳುಗಳು ಕಳೆಯುತ್ತಾ ಬಂದಿದೆ. ಕಣ್ಣಿಗೆ ಕಾಣದ ಸೂಕ್ಷ್ಮಜೀವಿಯ ಆರ್ಭಟದಿಂದ ಅಕ್ಷರಶಹ ಭಾರತವೂ ಸೇರಿದಂತೆ ಇಡೀ ಜಗತ್ತು ತಲ್ಲಣಿಸಿ ಹೋಗಿದೆ. ಯಾವಾಗ ಇದರಿಂದ ಹೊರಗೆ ಬಂದೆವು ಎಂದು ಪ್ರತಿಯೊಬ್ಬರೂ ಹಾತೊರೆಯುತ್ತಿದ್ದಾರೆ. ಇಂತಹ ಪ್ರಶ್ನೆಗೆ ತಜ್ಞರು ಒಂದು ಉತ್ತರ ನೀಡಿದ್ದಾರೆ. ಹೌದು ಕಳೆದ ನಾಲ್ಕು ತಿಂಗಳಿನಿಂದ ಆರ್ಭಟ ನಡೆಸುತ್ತಿರುವ ಇದು ಇನ್ನೂ ಎರಡು ತಿಂಗಳವರೆಗೆ ಹೀಗೆ ಇದ್ದು ನಂತರ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅನೇಕ ತಜ್ಞರು ಸೇರಿದಂತೆ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.
ಈಗಾಗಲೇ ಹಲವರು ಹೇಳುವಂತೆ ಮಾನವನ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಬೆಳವಣಿಗೆಯಾಗುತ್ತಿವೆ ಇನ್ನು ಕೆಲವು ದಿನಗಳಲ್ಲಿ ಬೇರೆ ರೋಗಗಳಂತೆ ಈ ಸೋಂಕಿನ ವಿರುದ್ಧ ಕೂಡಾ ಪರೀ ಪೂರ್ಣ ಪ್ರಮಾಣದಲ್ಲಿ ಹೋರಾಡಲು ನಮ್ಮ ದೇಹ ಅಣಿಯಾಗುತ್ತಿದೆ ಎಂಬುದು ಅವರ ಅಭಿಪ್ರಾಯ. ಹೌದು ಇತ್ತೀಚಿಗೆ ಒಂದು ವರದಿ ಹೇಳುವಂತೆ ಈಗಾಗಲೇ ಭಾರತದ ಮೂರು ಕೋಟಿಗೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿ ಹೋಗಿದೆಯಂತೆ. ಈ ಎಲ್ಲಾ ಹೇಳಿಕೆಗಳು ಮತ್ತು ವಿಜ್ಞಾನಿಗಳ ಅಂದಾಜುಗಳನ್ನು ಗಮನಿಸಿದರೆ ಒಂದು ರೀತಿಯ ಆಶಾಭಾವನೆ ನಮ್ಮೆಲ್ಲರಲ್ಲೂ ಮೂಡುತ್ತದೆ. ಅವರ ಅಂದಾಜಿನಂತೆ ಆದಷ್ಟು ಬೇಗ ಕಪ್ಪುಛಾಯೆ ಕರಗಿ ಮತ್ತೆ ಮೊದಲಿನಂತೆ ಆಗಲಿ ಎಂದು ಪ್ರಾರ್ಥಿಸೋಣ.