ಕೊರೋನಾಗೆ ಮಂತ್ರಿಗಳು ನಾಯಕರು ಬಲಿಯಾಗುವರು ಎಂಬ ಆತಂಕಕಾರಿ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

ಕೊರೋನಾ ಹೆಮ್ಮಾರಿಯ ರುದ್ರನರ್ತನ ದಿನೇದಿನೇ ಹೆಚ್ಚುತ್ತಾ ಹೋಗುತ್ತಿದೆ. ನಮ್ಮ ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 60 ರಲ್ಲಿ ಸಾವುಗಳು ಸಂಭವಿಸುತ್ತಿವೆ. ಮುಂದಿನ ದಿನಮಾನಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚುತ್ತದೆ ಎಂದು ಬಹುತೇಕ ತಜ್ಞರು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಒಂದು ಆಶ್ಚರ್ಯಕರ ಭವಿಷ್ಯವನ್ನು ನುಡಿದಿದ್ದಾರೆ. ಹೌದು ಈ ಹಿಂದೆಯೂ ಕೂಡ ಕೋಡಿಮಠ ಶ್ರೀಗಳು ಮುಂದೆ ಆಗುವ ಗಂಡಾಂತರಗಳ ಭವಿಷ್ಯಗಳನ್ನು ಹೇಳುತ್ತಲೇ ಬಂದಿದ್ದಾರೆ.

ಅದೇ ರೀತಿ ಈಗ ಅವರು ಕೋರೋನಾ ಸಮಯದಲ್ಲಿ ಮುಂದೆ ಆಗಬಹುದಾದ ಅನಾಹುತ ಒಂದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅದೇನೆಂದರೆ ನಾಡಿನ ದೊರೆಗಳು, ಮಂತ್ರಿಗಳು ಹಾಗೂ ರಾಜಕೀಯ ನಾಯಕರು ಕೊರೋನಾಗೆ ಬಲಿಯಾಗಲಿದ್ದಾರೆ ಎಂಬ ಆತಂಕಕಾರಿ ಭವಿಷ್ಯ ಹೇಳಿದ್ದಾರೆ. ಮಾತನಾಡಿದ ಅವರು ‘ಕೊರೋನಾ ಎಂಬುದು ಕಾರ್ಮೋಡದ ಮಧ್ಯೆ ಮಿಂಚು ಬಂದಂತೆ, ಇದು ಮುಂದೆ ಒಳ್ಳೆಯ ವಿಚಾರಗಳನ್ನು ನಮಗೆ ಕಲಿಸಲಿದೆ. ಇಡೀ ಜಗತ್ತೇ ದೈವವನ್ನು ನಂಬಿರುವಾಗ ದೇವಾಲಯದ ಬಾಗಿಲುಗಳನ್ನು ಮುಚ್ಚಿ ಸಾರಾಯ ಅಂಗಡಿಯನ್ನು ತೆಗೆದಿದ್ದು ತಪ್ಪು’ ಎಂದು ಅವರು ಹೇಳಿದರು. ಸರಕಾರದ ನಿಯಮ ಪಾಲನೆಗಳೇ ಈ ಮಹಾಮಾರಿಯಿಂದ ಪಾರಾಗಲು ದಾರಿ ಎಂದು ಕೂಡ ಅವರು ತಿಳಿಸಿದರು.

%d bloggers like this: