ಈ ಕೋರೋನಾ ಹೆಮ್ಮಾರಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಸೋಂಕಿತರ ಅತಿಯಾದ ಸಂಖ್ಯೆಯಿಂದ ದೇಶದ, ರಾಜ್ಯದ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿವೆ. ಕೆಲ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಸಾಯುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಎಷ್ಟೋ ವಾಸಿ. ಅಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಲ್ಲಿ ಸತು ತುಂಬಾ ಮುಖ್ಯ. ಹೌದು ಇದು ನಮ್ಮ ದೇಹಕ್ಕೆ ತುಂಬಾ ಅವಶ್ಯಕವಾದರೂ ಕೂಡ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಹಾಗಾಗಿ ಇದನ್ನು ಬಾಹ್ಯವಾಗಿ ಆಹಾರಗಳ ಮೂಲಕ ಪಡೆದುಕೊಳ್ಳಬೇಕು. ಒಂದು ರೀತಿ ನೋಡಿದರೆ ಕೊರೋನಾ ಸೋಂಕಿನ ಬಹುತೇಕ ಲಕ್ಷಣಗಳಿಗೆ ಸತು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಅಷ್ಟಕ್ಕೂ ಸತುವಿನಿಂದ ನಮ್ಮ ದೇಹಕ್ಕೆ ಏನು ಲಾಭ ಎಂದು ಮೊದಲು ಓದಿ. ಇದು ನಮ್ಮ ದೇಹದಲ್ಲಿರುವ ಎಲ್ಲ ಕಿಣ್ವಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ಹೋಗುವ ರೋಗಾಣುಗಳ ವಿರುದ್ಧ ಹೋರಾಟ ಮಾಡಿ ದೇಹ ರಕ್ಷಣೆ ಮಾಡುತ್ತದೆ.
ಹಾಗಾದರೆ ದೇಹಕ್ಕೆ ಇಷ್ಟೊಂದು ಪ್ರಯೋಜನಕಾರಿಯಾದ ಸತು ಯಾವ ಆಹಾರದಲ್ಲಿದೆ ಎಂಬುದನ್ನು ನೋಡೋಣ ಬನ್ನಿ. ಮಾಂಸ, ಅದರಲ್ಲೂ ಹಂದಿ ಮತ್ತು ಕುರಿ ಮಾಂಸಗಳಲ್ಲಿ ಸತುವಿನ ಪ್ರಮಾಣ ಅಧಿಕವಾಗಿರುತ್ತದೆ. ಅಂದಾಜು 100 ಗ್ರಾಂ ಮಾಂಸದಲ್ಲಿ 5 ಗ್ರಾಂ ಅಷ್ಟು ಸತು ಇರುತ್ತದೆ. ಎರಡನೇಯದಾಗಿ ಧಾನ್ಯಗಳು, ಕಡಲೆ ಮತ್ತು ಬೀನ್ಸ್ ಕಾಳುಗಳಲ್ಲಿ ಅತ್ಯಧಿಕ ಪ್ರಮಾಣದ ಸತು ಇರುತ್ತದೆ ಅದರಲ್ಲೂ ಮೊಳಕೆ ಬರಿಸಿದ ಕಾಳುಗಳಲ್ಲಿ ಇದರ ಪ್ರಮಾಣ ಹೆಚ್ಚು. ಮೂರನೆಯದಾಗಿ ನಟ್ಸ್, ಹೌದು ಕುಂಬಳಕಾಯಿ ಬೀಜ, ಗೋಡಂಬಿ ಮತ್ತು ಬಾದಾಮಿಗಳಲ್ಲಿ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸುತು ಕೂಡ ಇರುತ್ತದೆ. ನಾಲ್ಕನೆಯದಾಗಿ ಹಾಲಿನ ಉತ್ಪನ್ನಗಳು. ಹಾಲು ಮೊಸರು ಅದರಲ್ಲೂ ಮುಖ್ಯವಾಗಿ ಬೆಣ್ಣೆಯಲ್ಲಿ ಅಧಿಕ ಸತು ಇರುತ್ತದೆ. ಕೊನೆಯದಾಗಿ ಡಾರ್ಕ್ ಚಾಕ್ಲೇಟ್, ಸಂಪೂರ್ಣವಾಗಿ ರಾಸಾಯನಿಕ ರಹಿತವಾದ ಶುದ್ಧ ಡಾರ್ಕ್ ಚಾಕಲೇಟ್ ನಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲೋರಿ ಜೊತೆಗೆ 33% ಸತುವಿನ ಅಂಶ ಕೂಡ ಇರುತ್ತದೆ.