ಕೊರೋನಾವನ್ನು ಗೆದ್ದ ದೇಶಗಳಿಗೆ ಸಹಾಯಕವಾಗಿದ್ದೇ ಈ ಒಂದು ವಿಟಮಿನ್

ಕೊರೋನಾ ಇಡೀ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಭಾರತ ಅಮೆರಿಕಗಳಲ್ಲಂತೂ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ವಿಪರೀತ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಅದರಂತೆ ಕೆಲವು ದೇಶಗಳಲ್ಲಿ ಕ್ರಮೇಣ ಇದರ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಕಾರಣಗಳು ಏನು ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚುವ ಕೆಲಸ ನಡೆಸಿದ್ದಾರೆ. ಅದರಲ್ಲಿ ಅವರಿಗೆ ತಿಳಿದುಬಂದ ಒಂದು ವಿಷಯ ಕೊರೊನಾ ಸೋಂಕು ನಿವಾರಣೆಗೆ ಕಾರಣವಾಗಿದ್ದು ಒಂದು ವಿಟಮಿನ್ ಎಂದು. ಹೌದು ಆ ವಿಟಮಿನ್ ಬೇರೆ ಯಾವುದೂ ಅಲ್ಲ ವಿಟಮಿನ್ ಡಿ. ಈ ವಿಟಮಿನ್ ಡಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಅಂತಹ ಒಂದು ಜೀವಸತ್ವ.

ಆದರೆ ಇದು ಉತ್ಪಾದನೆಯಾಗಲು ಸೂರ್ಯನ ಬೆಳಕು ತುಂಬಾ ಅವಶ್ಯಕ. ಆದರೆ ಈಗ ಈ ಸೋಂಕಿನ ಹೆದರಿಕೆಯ ಕಾರಣ ಬಹುತೇಕ ಮಂದಿ ಮನೆಯಲ್ಲಿರುವುದರಿಂದ ಸೂರ್ಯನ ಬೆಳಕಿಗೆ ಅಷ್ಟಾಗಿ ಮೈ ಕೊಡುವುದಿಲ್ಲ. ಆದರೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಕೂಡ ವಿಟಮಿನ್ ಡಿ ಯನ್ನು ಪಡೆಯಬಹುದಾಗಿದೆ. ಮೊಟ್ಟೆ, ಮಾಂಸ, ಹಸಿ ತರಕಾರಿ, ಬಟಾಣಿ ಕಾಳು ಜೊತೆ ಹಾಲಿನ ಉತ್ಪನ್ನಗಳ ಸೇವನೆಯಿಂದ ನಾವು ಇದನ್ನು ಪಡೆಯಬಹುದು. ಇತ್ತೀಚಿಗೆ ಐರ್ಲೆಂಡ್ ದೇಶದ ಮೆಡಿಕಲ್ ಜರ್ನಲ್ ನಲ್ಲಿ ಈ ವಿಷಯ ಪ್ರಕಟಿಸಲ್ಪಟ್ಟಿತು. ಅದರಲ್ಲೂ ಮುಖ್ಯವಾಗಿ ಚೀನಾ ಮತ್ತು ಭಾರತದಲ್ಲಿ ಇದು ಪ್ರವೇಶವಾದಾಗ ಚಳಿಗಾಲವಿತ್ತು. ಹಾಗಾಗಿ ಸರಿಯಾಗಿ ಸೂರ್ಯನ ಬೆಳಕು ದೊರಕದೆ ಈ ಸೋಂಕಿನ ಪ್ರಭಾವ ಹೆಚ್ಚಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

%d bloggers like this: