ಕೋವಿಡ್ ಹೆಮ್ಮಾರಿಯಿಂದ ಒಂದೇ ಒಂದು ಸಾವನ್ನೂ ಕಾಣದ ಭಾರತದ ಅದೃಷ್ಟಶಾಲಿ ರಾಜ್ಯಗಳು ಯಾವು ಗೊತ್ತೇ

ಕೋರೋನಾ ಮಹಾಮಾರಿಯಿಂದ ಇಡೀ ಜಗತ್ತು ತಲ್ಲಣಿಸಿ ಹೋಗಿದೆ. ಅದರಲ್ಲೂ ಭಾರತ ಮತ್ತು ಅಮೆರಿಕ ದೇಶಗಳಲ್ಲಿ ಸೋಂಕಿತರ ಜೊತೆಗೆ ಸಾವಿನ ಪ್ರಮಾಣ ಕೂಡಾ ಕೈತಪ್ಪಿ ಹೋಗಿದೆ. ಆದರೆ ವಿಚಿತ್ರ ಸಂಗತಿ ಏನೆಂದರೆ ಇಷ್ಟೆಲ್ಲ ಸಾವುಗಳು ಸಂಭವಿಸುತ್ತಿದ್ದರೂ ನಮ್ಮ ದೇಶದ ಕೆಲವೊಂದು ಅದೃಷ್ಟಶಾಲಿ ರಾಜ್ಯಗಳಲ್ಲಿ ಇಲ್ಲಿಯವರೆಗೂ ಕೂಡ ಒಂದೇ ಒಂದು ಸಾವು ಸಂಭವಿಸಿಲ್ಲ. ಮಹಾರಾಷ್ಟ್ರ ತಮಿಳುನಾಡು ಕರ್ನಾಟಕ ರಾಜ್ಯಗಳಲ್ಲಿ ಸೋಂಕಿತರ ಜೊತೆಗೆ ಸಾವಿನ ಪ್ರಮಾಣ ಕೂಡ ಮಿತಿಮೀರಿದೆ. ವಿಚಿತ್ರವೆಂಬಂತೆ ನಮ್ಮ ದೇಶದಲ್ಲಿರುವ ಈ ರಾಜ್ಯದಲ್ಲಿ ಕೋವಿಡ್ ನಿಂದ ಒಂದು ಸಾವು ಕೂಡ ಸಂಭವಿಸಿಲ್ಲ. ಆ ರಾಜ್ಯಗಳು ಯಾವುವು ಎಂದು ನೀವೇ ಓದಿ ತಿಳಿದುಕೊಳ್ಳಿ. ಮೊದಲನೇದಾಗಿ ಮಣಿಪುರ, ಇಲ್ಲಿ 1911 ಪ್ರಕರಣಗಳು ಇಲ್ಲಿಯವರೆಗೂ ವರದಿಯಾಗಿದೆ, 698 ಜನರು ಸಕ್ರಿಯರಾಗಿದ್ದಾರೆ.

ಆದರೆ ಒಂದೇ ಒಂದು ಸಾವು ಕೂಡ ದಾಖಲಾಗಿಲ್ಲ. ಎರಡನೆಯದಾಗಿ ಸಿಕ್ಕಿಂ, ಭಾರತದ ಅತಿ ಪುಟ್ಟ ರಾಜ್ಯವಾದ ಇಲ್ಲಿ ಹೊಟ್ಟೆಯ 283 ಪ್ರಕರಣಗಳು ದಾಖಲಾಗಿದ್ದು 1 ಸಾವು ಕೂಡ ಸಂಭವಿಸಿಲ್ಲ. ಮೂರನೆಯದಾಗಿ ಮಿಜೋರಾಂ ರಾಜ್ಯದಲ್ಲಿ 284 ಪ್ರಕರಣಗಳು ದಾಖಲಾಗಿದ್ದು ಯಾವ ವ್ಯಕ್ತಿಯೂ ಕೂಡ ಕೊರೋನಾದಿಂದ ಮೃತಪಟ್ಟಿಲ್ಲ. ನಾಲ್ಕನೆಯದಾಗಿ ನಾಗಾಲ್ಯಾಂಡ್. ಅತಿ ಹೆಚ್ಚು ಇಂಗ್ಲೀಷ್ ಮಾತುಗಾರನ್ನು ಹೊಂದಿರುವ ಈ ರಾಜ್ಯದಲ್ಲಿ ಇಲ್ಲಿಯವರೆಗೆ 988 ಪ್ರಕರಣಗಳು ದಾಖಲಾಗಿವೆ. 445 ಜನ ಗುಣಮುಖರಾಗಿದ್ದಾರೆ ಮತ್ತು 543 ಚಿಕಿತ್ಸಾ ಹಂತದಲ್ಲಿದ್ದಾರೆ. ಆದರೆ ಯಾರೊಬ್ಬರೂ ಕೂಡ ಸಾವನ್ನಪ್ಪಿಲ್ಲ. ಹೌದು ಈ ಮೇಲೆ ಹೇಳಿರುವ ರಾಜ್ಯಗಳು ಇನ್ನೂವರೆಗೂ ಕೋವಿಡ್ ನಿಂದ ಒಂದೇ ಒಂದು ಸಾವನ್ನು ಕೂಡ ಕಂಡಿಲ್ಲ. ವಿಶೇಷವೆಂದರೆ ಈ ಎಲ್ಲ ರಾಜ್ಯಗಳು ನಮ್ಮ ಭಾರತದ ಈಶಾನ್ಯ ಭಾಗದ ಸಪ್ತಸಹೋದರಿ ರಾಜ್ಯಗಳ ಭಾಗಗಳಾಗಿವೆ. ಇದೆ ರೀತಿ ಇಡೀ ಭಾರತ ಮತ್ತು ವಿಶ್ವ ಕೊರೋನಾ ಮುಕ್ತವಾಗಲಿ ಎಂದು ಆಶಿಸೋಣ.

%d bloggers like this: