ಕೋವಿಡ್ ಹಿನ್ನೆಲೆ ಮತ್ತೊಂದು ಕನ್ನಡ ಚಿತ್ರ ಮುಂದೂಡಿಕೆ

ಕೋವಿಡ್ ಗೆ ನೈಟ್ ಕರ್ಫ್ಯೂ ಗೆ ಹಿಂದೆ ಸರಿದ ಗಜಾನನ ಗ್ಯಾಂಗ್, ದೇಶದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿದೆ. ಅದರಂತೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದರ ಜೊತೆಗೆ ರೂಪಾಂತರಿ ವೈರಸ್ ಓಮೈಕ್ರಾನ್ ವೈರಸ್ ಕೂಡ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕೋವಿಡ್ ಮತ್ತು ಓಮೈಕ್ರಾನ್ ವೈರಸ್ ಸೋಂಕಿನ ಪ್ರಮಾಣ ನಿಯಂತ್ರಣ ಮಾಡುವ ಸಲುವಾಗಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿತು. ಈ ವಾರಾಂತ್ಯದ ಕರ್ಫ್ಯೂ ಯಿಂದಾಗಿ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದಂತೂ ನಿಜ‌.

ನಿರಂತರವಾಗಿ ಎರಡು ಮೂರು ವಾರಗಳ ಕಾಲ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಯಿಂದಾಗಿ ತೊಂದರೆ ನಷ್ಟ ಅನುಭವಿಸಿದ ಸಾರ್ವಜನಿಕರಿಂದ ವಾರಾಂತ್ಯದ ಕರ್ಫ್ಯೂ ತೆಗೆಯಲು ಒತ್ತಾಯ ಆರಂಭವಾಯಿತು. ಅದರಂತೆ ಸರ್ಕಾರ ಕೂಡ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನೈಟ್ ಕರ್ಫ್ಯೂವನ್ನು ಮುಂದುವರಿಸಿಕೊಂಡು ವಾರಾಂತ್ಯದ ಕರ್ಫ್ಯೂವನ್ನು ಹಿಂಪಡೆಯಲಾಗಿದೆ. ಇದು ಇತರೆ ಕ್ಷೇತ್ರಗಳಿಗೆ ಕೊಂಚ ಮಟ್ಟಿಗೆ ಸಮಾಧಾನ ತಂದರು ಕೂಡ ಸಿನಿಮಾರಂಗಕ್ಕೆ ಇದು ಹೊಡೆತವೇ ಸರಿ ಎನ್ನಬಹುದು.

ಏಕೆಂದರೆ ಚಿತ್ರಮಂದಿರಗಳಲ್ಲಿ ಶೇಕಡಾ 50 ರಷ್ಟು ಆಸನಕ್ಕೆ ಮಾತ್ರ ಅವಕಾಶ ನೀಡಿರುವುದು. ಮತ್ತು ನೈಟ್ ಕರ್ಫ್ಯೂ ಈ ಎರಡು ನಿಯಮಗಳಿಂದಾಗಿ ಸಿನಿಮಾಗಳಿಗಂತೂ ಆರ್ಥಿಕ ಹೊಡೆತ ಬಿದ್ದೇ ಬೀಳುತ್ತದೆ. ಹಾಗಾಗಿಯೇ ಬಿಡುಗಡೆಗೆ ಸಿದ್ದವಾಗಿದ್ದಂತಹ ಅನೇಕ ಬಹು ಕೋಟಿ ವೆಚ್ಚದ ಬಿಗ್ ಸ್ಟಾರ್ಸ್ ಸಿನಿಮಾಗಳೇ ತಮ್ಮ ರೀಲಿಸ್ ದಿನಾಂಕವನ್ನು ಮುಂದೂಡುತ್ತಿವೆ. ಅದರಂತೆ ಇದೀಗ ಫೆಬ್ರವರಿ 4 ರಂದು ರಿಲೀಸ್ ಆಗಬೇಕಿದ್ದ ಗಜಾನನ ಗ್ಯಾಂಗ್ ಸಿನಿಮಾ ತಂಡ ಕೂಡ ತಮ್ಮ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ.

ಈ ಗಜಾನನ ಗ್ಯಾಂಗ್ ಸಿನಿಮಾವನ್ನು ಅಭಿಷೇಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟ ಮಹದೇವ್ ಮತ್ತು ನಟಿ ಅಧಿತಿ ಪ್ರಭುದೇವ ಅವರು ನಟಿಸಿದ್ದಾರೆ‌. ನಮ್ ಗಣಿ ಬಿ.ಕಾಮ್ ಪಾಸ್ ಎಂಬ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುವುದರ ಜೊತೆಗೆ ತಾವೇ ನಾಯಕ ನಟರಾಗಿ ನಟಿಸಿದ್ದ ನಟ, ನಿರ್ದೇಶಕ ಅಭಿಷೇಕ್ ಶೆಟ್ಟಿ ಈಗ ಗಜಾನನ ಗ್ಯಾಂಗ್ ಚಿತ್ರ ಮಾಡಿದ್ದಾರೆ. ಈ ಸಿನಿಮಾಗೆ ನಾಗೇಶ್ ಕುಮಾರ್ ಬಂಡವಾಳ ಹೂಡಿದ್ದು, ಪ್ರದ್ಯೋತನ್ ರಾಗ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆಯಾಗಿ ಕೋವಿಡ್ ಮೂರನೇ ಅಲೆ ಗಜಾನನ ಗ್ಯಾಂಗ್ ಗೆ ಭಾರಿ ಹೊಡೆತ ನೀಡಿದೆ.

%d bloggers like this: