ಕ್ರೇಜಿಸ್ಟಾರ್ ತಮ್ಮ ಪತ್ನಿಯನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಲ್ಲ, ಕಾರಣ ಗೊತ್ತೇ

ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಇಡೀ ದಕ್ಷಿಣ ಭಾರತದ ಚಿತ್ರರಂಗ ಒಬ್ಬ ಸ್ಟಾರ್ ನಟ ಮತ್ತು ನಿರ್ದೇಶಕ. ಕನ್ನಡದಲ್ಲಿ ಕೋಟಿ ಕೋಟಿ ರೂಪಾಯಿಗಳಷ್ಟು ಬಂಡವಾಳ ಹಾಕಿ ಸಿನಿಮಾ ಮಾಡಲು ಬುನಾದಿ ಹಾಕಿದವರು ಇವರೇ. ಜೊತೆಗೆ ವಿವಿಧ ಭಾಷೆಯ ಎಲ್ಲಾ ಸ್ಟಾರ್ ನಟಿಯರನ್ನು ಕನ್ನಡಕ್ಕೆ ಕರೆತಂದು ಪರಿಚಯಿಸಿದ್ದು ಕೂಡ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್. ಪ್ರೀತಿ ಮಾಡುವುದು ಹೇಗೆ ಎಂಬುದನ್ನು ರವಿಚಂದ್ರನ್ ಅವರು ತಮ್ಮ ಪ್ರತಿಯೊಂದು ಚಿತ್ರದಲ್ಲೂ ತೋರಿಸುತ್ತಾರೆ. ಆದರೆ ಅವರ ನೈಜ ಜೀವನದ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಅಂತಹ ಒಂದು ಮಾಹಿತಿ ಈಗ ಅವರ ಮಾತುಗಳಲ್ಲೇ ತಿಳಿದು ಬಂದಿದೆ. ಅದೇನೆಂದರೆ ರವಿಚಂದ್ರನ್ ತಮ್ಮ ಅರ್ಧಾಂಗಿ ಸುಮತಿ ಅವರನ್ನು ಹೆಚ್ಚಾಗಿ ಯಾವುದೇ ಕಾರ್ಯಕ್ರಮಗಳಿಗೆ ಮತ್ತು ಟಿವಿ ಚಾನೆಲ್ ಆಯೋಜಿಸಿರುವ ಶೋಗಳಿಗೆ ಕರೆದುಕೊಂಡು ಹೋಗುವುದಿಲ್ಲ.

ಹೌದು ರವಿಚಂದ್ರನ್ ಮತ್ತು ಸುಮತಿ ದಂಪತಿಗಳು 1986 ರಲ್ಲಿ ಫೆಬ್ರುವರಿ 14ರಂದು ಪ್ರೇಮಿಗಳ ದಿನಾಚರಣೆಯಂದೇ ವಿವಾಹವಾದರು. ಅಂದಿನಿಂದ ಇಂದಿನವರೆಗೂ ಸುಂದರವಾದ ಬದುಕನ್ನು ಈ ದಂಪತಿಗಳು ನಡೆಸಿಕೊಂಡು ಬಂದಿದ್ದಾರೆ. ರವಿಚಂದ್ರನ್ ಅವರು ಯಾವಾಗಲೂ ಸಿನಿಮಾ ಶೂಟಿಂಗ್ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರ ಮನೆಗಿಂತ ಹೆಚ್ಚಾಗಿ ಹೊರಗಡೆ ಕಾಲಕಳೆಯುತ್ತಾರೆ. ಆದರೆ ತಮ್ಮ ಹೆಂಡತಿಯನ್ನು ಅವರು ಹೆಚ್ಚಾಗಿ ಕರೆದುಕೊಂಡು ಬರುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ರವಿಚಂದ್ರನ್ ಅವರು ಈ ರೀತಿ ಉತ್ತರಿಸಿದರು. ‘ಹೊರಗಡೆ ಬಂದ ಸಂದರ್ಭದಲ್ಲಿ ಅಲ್ಲಿ ನೆರೆದಿರುವ ಅಭಿಮಾನಿಗಳು ಸುತ್ತುವರಿಯುತ್ತಾರೆ ಅಲ್ಲಿ ಸಾಕಷ್ಟು ಗದ್ದಲ ಶುರುವಾಗುತ್ತದೆ, ಈ ರೀತಿಯ ಸದ್ದುಗದ್ದಲಗಳು ತಮ್ಮ ಪತ್ನಿಗೆ ಇಷ್ಟವಾಗುವುದಿಲ್ಲ ಮತ್ತು ಆ ಸಂದರ್ಭದಲ್ಲಿ ತಾವು ತಮ್ಮ ಪತ್ನಿಯ ಕಡೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ’ ಎಂಬ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

%d bloggers like this: