ಕ್ರಿಕೆಟ್ ಆಧಾರಿತ ಸಿನೆಮಾದಲ್ಲಿ ಸ್ಟಾರ್ ಆಟಗಾರನ ಪತ್ನಿ

ಕ್ರಿಕೆಟ್ ಕ್ರೀಡಾಧಾರಿತ ಸಿನಿಮಾ ಮೂಲಕ ಬಾಲಿವುಡ್ ಗೆ ಪುನರ್ ಪ್ರವೇಶ ಮಾಡಿದ ಸುಪ್ರಸಿದ್ದ ನಟಿ, ಹೌದು ಬಣ್ಣದ ಲೋಕದಲ್ಲಿ ಯಾರು ಕೂಡ ಶಾಶ್ವತರಲ್ಲ. ಆಯಾ ಕಾಲಕ್ಕನುಗುಣವಾಗಿ ಒಬ್ಬೊಬ್ಬ ನಟ-ನಟಿಯರು ಸ್ಟಾರ್ ಪಟ್ಟ ಅಲಂಕರಿಸಿ ಮಿಂಚುತ್ತಾರೆ. ಅಂತೆಯೇ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿರುವ ಪೈಕಿ ನಟಿ ಅನುಷ್ಕಾ ಶರ್ಮಾ ಕೂಡ ಒಬ್ಬರು. 2017 ರಲ್ಲಿ ಕ್ರಿಕೆಟಿಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟ ಅನುಷ್ಕಾ ಶರ್ಮಾ ಸಿನಿಮಾ ಲೋಕದಿಂದ ಅಂತರ ಕಾಯ್ದುಕೊಂಡರು. ಬಳಿಕ ಹೆಂಡತಿಯಾಗಿ, ತಾಯಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದರು ಅನುಷ್ಕಾ.

2018 ರಲ್ಲಿ ರಿಲೀಸ್ ಆದ ಬಾಲಿವುಡ್ ಬಾದ್-ಶಾ ಶಾರುಖ್ ಖಾನ್ ಅವರ ಜೀ಼ರೋ ಸಿನಿಮಾನೇ ಅನುಷ್ಕಾ ಶರ್ಮಾ ಅವರ ಕೊನೆಯ ಚಿತ್ರವಾಗಿತ್ತು. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ಮತ್ತೆ ಬಾಲಿವುಡ್ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಅವರು ಹಿಂದಿ ಚಿತ್ರರಂಗದ ಬಹು ಬೇಡಿಕೆಯ ನಟಿ. ಬಾಲಿವುಡ್ ದಿಗ್ಗಜ ನಟರಾದ ಅಮೀರ್ ಖಾನ್, ಶಾರುಖ್ ಖಾನ್ ಅವರೊಟ್ಟಿಗೆ ನಟಿಸಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಅನುಷ್ಕಾ ಶರ್ಮಾ ನಟಿಸಿರುವ ಪಿ.ಕೆ, ಸುಲ್ತಾನ್, ಸಂಜು, ರಬ್ ನೇ ಬನಾ ದಿ, ಎನ್.ಎಚ್. 10, ಬ್ಯಾಂಡ್ ಬಾಜಾ ಬಾರಾತ್ ಎಂಬಂತಹ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು‌.

ತಮ್ಮ ಸಿನಿ ನಟನಾ ವೃತ್ತಿಯಲ್ಲಿ ಉತ್ತುಂಗದಲ್ಲಿದ್ದಾಗಲೇ ಮದುವೆಯಾಗಿ ಸಿನಿಲೋಕದಿಂದ ವಿರಾಮ ಪಡೆದುಕೊಂಡಿದ್ದರು ಅನುಷ್ಕಾ ಶರ್ಮಾ. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ವಿಶೇಷವಾಗಿ ಕ್ರೀಡಾಧಾರಿತ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು ಅನುಷ್ಕಾ ಶರ್ಮಾ ಭಾರತೀಯ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಜೀವನಾಧಾರಿತ ಚಿತ್ರ ಚಕ್ದಾ ಎಕ್ಸ್ ಪ್ರೆಸ್ ಎಂಬ ಚಿತ್ರದಲ್ಲಿ ಜೂಲನ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನಟಿ ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಿದ ಜೂಲನ್ ಗೋಸ್ವಾಮಿ ಅವರ ಪಾತ್ರ ಮಾಡಲು ನನಗೆ ಅವಕಾಶ ಸಿಕ್ಕಿರುವುದು ಹೆಮ್ಮೆ ಎನಿಸಿದೆ. ಚಿತ್ರತಂಡಕ್ಕೆ ನನ್ನ ಧನ್ಯವಾದಗಳು ಎಂದು ಚಕ್ದಾ ಎಕ್ಸ್ ಪ್ರೆಸ್ ಚಿತ್ರದ ಟೀಸರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ನಟಿ ಅನುಷ್ಕಾ ಶರ್ಮಾ ಅವರು ಈ ಚಿತ್ರವನ್ನು ಸೇರಿದಂತೆ ಒಟ್ಟು ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರಂತೆ. ಒಟ್ಟಾರೆಯಾಗಿ ಈ ಚಿತ್ರ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಿಕಿಲ್ಲ.

%d bloggers like this: