ನಿನ್ನೆ ಪಂದ್ಯದಲ್ಲಿ ಕ್ರಿಕೆಟ್ ಜಗತ್ತು ಊಹಿಸಿಕೊಳ್ಳದಂತಹ ದಾಖಲೆ ಮಾಡಿದ ಕೊಹ್ಲಿ ಕ್ರಿಕೆಟ್ ಜಗತ್ತಿಗೆ ಮತ್ತೆ ಕಿಂಗ್

ವಿರಾಟ್ ಕೊಹ್ಲಿ ಎಂಬ ಒಂದು ಹೆಸರು ಇಡೀ ವಿಶ್ವ ಕ್ರಿಕೆಟನ್ನೇ ಆಳುತ್ತಿದೆ, ಹೌದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ವ ಕ್ರಿಕೆಟಿನ ಅತ್ಯುತ್ತಮ ಬ್ಯಾಟ್ಸ್ಮನ್. ಅವರು ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೆ ತಮ್ಮ ಅದೇ ಪ್ರಭಾವನ್ನು ಉಳಿಸಿಕೊಂಡು ಬಂದಿದ್ದಾರೆ. ಕ್ರಿಕೆಟ್ ಬಗೆಗಿನ ಅವರ ಪ್ರೇಮ ಮತ್ತು ಶ್ರದ್ಧೆ ಇಡೀ ವಿಶ್ವಕ್ಕೇ ಗೊತ್ತು. ಶತಕಗಳ ಸರದಾರ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕ ಯಾರೂ ಮುರಿಯಲಾಗದ ಸಾಧನೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಒಂದು ಸಮಾರಂಭದಲ್ಲಿ ಸಚಿನ್ ಅವರು ವಿರಾಟ್ ಅಥವಾ ರೋಹಿತ್ ಇಬ್ಬರಲ್ಲಿ ಒಬ್ಬರು ತಮ್ಮ ಶತಕಗಳ ಶತಕದ ಸಾಧನೆಯನ್ನು ಮುರಿಯಬಲ್ಲರು ಎಂದು ಹೇಳಿದ್ದರು. ಅವರ ಮಾತು ಅಕ್ಷರಶಃ ನಿಜ, ವಿರಾಟ್ ಕೊಹ್ಲಿ ಈಗಾಗಲೇ ಆ ಸಾಧನೆಯ ಸನಿಹದಲ್ಲಿ ಇದ್ದಾರೆ.

ಅದರಲ್ಲೂ ಮುಖ್ಯವಾಗಿ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಗೆ ಸಮನಾದ ಆಟಗಾರ ಹಿಂದೂ ಇದ್ದಿಲ್ಲ ಹಾಗೂ ಸದ್ಯಕ್ಕೂ ಇಲ್ಲ. ಈಗ ಆಸ್ಟ್ರೇಲಿಯಾ ಜೊತೆ ನಡೆದ ಏಕದಿನ ಪಂದ್ಯಗಳ ಸರಣಿಯಲ್ಲಿ ವಿರಾಟ್ ಅವರು ಎರಡು ಅರ್ಧ ಶತಕಗಳನ್ನು ಸಿಡಿಸಿದ್ದಾರೆ ಆದರೆ ಶತಕದ ಸಾಧನೆ ಮೂಡಿಬರಲಿಲ್ಲ. ಇದರಿಂದ ವಿರಾಟ್ ಅವರು ಒಂದು ವಿಶೇಷ ಸಾಧನೆ ಮಾಡಿದ್ದಾರೆ. ಅಯ್ಯೋ ಶತಕ ಹೊಡೆಯದಿದ್ದರೆ ಸಾಧನೆಯೇ ಎಂದು ನೀವು ಕೇಳಬಹುದು. ವಿರಾಟ್ ಅವರು 2009 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಶತಕವನ್ನು ದಾಖಲಿಸಿದರು. ಅಂದಿನಿಂದ ಇಲ್ಲಿಯವರೆಗೂ ವಿರಾಟ್ ಅವರು 70 ಶತಕಗಳನ್ನು ಸಿಡಿಸಿದ್ದಾರೆ.

ಆದರೆ ಬರೋಬ್ಬರಿ ಹನ್ನೊಂದು ವರ್ಷಗಳಿಂದ ಯಾವೊಂದು ವರ್ಷವೂ ಅವರು ಶತಕ ಸಿಡಿಸಿದೇ ಇರಲಿಲ್ಲ. ಆದರೆ 2020 ಅವರ ಈ ವಿಶೇಷ ಸಾಧನೆಯನ್ನು ಹಾಳುಮಾಡಿದೆ. ವಿರಾಟ್ ಅವರಿಂದ ಯಾವುದೇ ಒಂದು ಶತಕ ದಾಖಲಾಗಿಲ್ಲ. ಇದಕ್ಕೆ ಅತಿಮುಖ್ಯ ಕಾರಣ ಕೋರೋಣ ಎನ್ನಬಹುದು. ಈ ಮಹಾಮಾರಿ ಕಾರಣಕ್ಕೆ ಕಳೆದ 10 ತಿಂಗಳಿಂದ ಯಾವುದೊಂದು ಅಂತರಾಷ್ಟ್ರೀಯ ಸರಣಿ ನಡೆದಿರಲಿಲ್ಲ. ಹೀಗಾಗಿ ತಾವಾಡಿದ ಕೆಲವು ಪಂದ್ಯಗಳ್ಲಲಿ ವಿರಾಟ್ ಉತ್ತಮ ಪ್ರದರ್ಶನ ತೋರಿದರೂ ಶತಕದ ಸಾಧನೆ ಆಗಲಿಲ್ಲ. ಹಾಗಾಗಿ 2020 ಅವರು ಶತಕ ಸಿಡಿಸದೆ ಇರುವ ಮೊದಲ ವರ್ಷವಾಯಿತು.

%d bloggers like this: