ನಮ್ಮ ಕನ್ನಡಿಗ ಸದರಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಮತ್ತು ಸ್ಟೈಲಿಶ್ ಆಟಗಾರ ಬಲಗೈ ಓಪನರ್ ಮತ್ತು ವಿಕೆಟ್ ಕೀಪರ್ ಆಗಿರುವ ಕೆಎಲ್ ರಾಹುಲ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬಹಳ ಬೇಗನೆ ರಾಹುಲ್ ಅವರು ಈಗ ತಮ್ಮ ಜೀವನದ ಉತ್ತುಂಗಕ್ಕೆ ತಲುಪಿದ್ದಾರೆ. ಕ್ರಿಕೆಟನ್ನು ದೇವರಂತೆ ಪೂಜಿಸುವ ನಮ್ಮ ದೇಶದಲ್ಲಿ ರಾಷ್ಟೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದೆಂದರೆ ಅದು ಪೂರ್ವಜನ್ಮದ ಪುಣ್ಯ ಎಂದೇ ಭಾವಿಸಬಹುದು, ಲಕ್ಷಲಕ್ಷ ಪ್ರತಿಭೆಗಳು ಇರೋ ನಮ್ಮ ದೇಶದಲ್ಲಿ ಆಯ್ಕೆಯಾಗುವುದು ಎಂದರೆ ಸುಲಭದ ಮಾತಲ್ಲ.

ಅಂತಹದರಲ್ಲಿ ದಿಡೀರನೆ ಬಂದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ಉಪನಾಯಕನ ಸ್ಥಾನ ಪಡೆಯುವುದೆಂದರೆ ನಿಜಕ್ಕೂ ಅಚ್ಚರಿಯ ಮಾತೇ ಅನ್ನಬಹುದು. ಹೌದು ಇಲ್ಲಿಯವರೆಗೆ ಕೇವಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಕ್ ಕೆ ಎಲ್ ರಾಹುಲ್ ಅವರು ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ, ಅರೆರೆ ಕೆಎಲ್ ರಾಹುಲ್ ಯಾರನ್ನಾದರೂ ಮದುವೆಯಾದರೆ ಎಂದು ಊಹಿಸಬೇಡಿ.



ರಾಹುಲ್ ಆರಂಭಿಸಿದ ಹೊಸ ಇನ್ನಿಂಗ್ಸ್ ಭಾರತ ತಂಡದ ಉಪನಾಯಕನಾಗಿ. ಹೌದು ನಿನ್ನೆಯಿಂದ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ವಿರಾಟ್ ಸಾರಥ್ಯದಲ್ಲಿ ಉಪನಾಯಕನಾಗಿ ತಮ್ಮ ವೃತ್ತಿ ಜೀವನದ ಹೊಸ ಕಾರ್ಯವನ್ನು ಆರಂಭಿಸಿದ್ದಾರೆ. ಅವರು ಉಪನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಗೆದ್ದಿರುವುದು ಅವರಿಗೆ ಶುಭಾರಂಭವನ್ನು ನೀಡಿದೆ. ಮೊದಲ ಬಾರಿಗೆ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ರಾಹುಲ್ ಅವರಿಗೆ ಈ ಸರಣಿಯ ಗೆಲುವು ತುಂಬಾ ಮಹತ್ವಪೂರ್ಣವಾದುದು. ಐಪಿಎಲ್ ಪಂದ್ಯಾವಳಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕಾರಣ ರಾಹುಲ್ ಅವರಿಗೆ ಬಹುಬೇಗನೆಈ ಜವಾಬ್ದಾರಿಯುತ ಸ್ಥಾನವನ್ನು ನೀಡಿರಬಹುದು ಎನ್ನಲಾಗುತ್ತಿದೆ.