ಭಾರತ ದೇಶದಲ್ಲಿ ಸಂಚಾರ ದಟ್ಟಣಿಗೆ ಹೆಸರು ವಾಸಿಯಾದುದ್ದು ರಾಜಧಾನಿ ದೆಹಲಿ ಮತ್ತು ಇದಕ್ಕೆ ಸ್ಪರ್ಧೆಯೊಡ್ಡುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರು. ಈ ಬೆಂಗಳೂರಿನ ಸಿಲ್ಕ್ ಬೋರ್ಡ್ ಗೆ ಇನ್ನೊಂದ್ ಹೆಸರೇ ಟ್ರಾಫಿಕ್ ಜಾಮ್ ಅಷ್ಟರಮಟ್ಟಿಗೆ ಖ್ಯಾತಿ ಪಡೆದಿದೆ ಈ ಸಿಲ್ಕ್ ಬೋರ್ಡ್ ಸಿಗ್ನಲ್. ಅಬ್ಬಬ್ಬಾ ಅಂದ್ರೆ ಈ ರಸ್ತೆಯಲ್ಲಿ ಐನೂರಿಂದ ಒಂದು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿ ಬೈಕ್ ಸವಾರರು ಸಂಧಿಕಡೆ ಬೈಕ್ ನುಗ್ಗಿಸಿ, ಇತ್ತ ಕಡೆ ಕಾರಿಗೂ ಹೋಗಲು ಬಿಡದೇ ತಾನೂ ಹೋಗದೆ ಇರೋ ಎರಡಡಿ ಜಾಗದಲ್ಲಿ ಹೆಲ್ಮೆಟ್ ಮೇಲೆ ಕೆಳಗೆ ಮಾಡ್ಕೊಂಡ್, ಜೇಬಿಂದ ಮೊಬೈಲ್ ತಗ್ದ್ ನೋಡಿ ಕಾಲೋ ಮೆಸೇಜೋ ಮಾಡ್ಕೊಂಡ್ ಮುವತ್ ಸೆಕೆಂಡ್ಗೆ ಬಿಡೋ ಸಿಗ್ನಲ್ನಾ ಬಿಟ್ರೇ ಸಾಕು ನುಗ್ಗಿಸ್ಕೊಂಡ್ ಹೋಗ್ಬಿಡೋಣ ಅನ್ನೋ ಮನಸ್ಥಿತಿ ಇರೋ ನಮಗೆ ಈ ಟ್ರಾಫಿಕ್ ಅನ್ನೋದ್ ಜೀವನದ ಒಂದು ಭಾಗವಾಗಿ ಬಿಟ್ಟಿದೆ ಅಂದ್ಕೊಂಡ್ ಬಯ್ಯ್ಕೊಳ್ತೀವೀ. ಮೆಟ್ರೋ ಮಾಡೋ ರಸ್ತೆ ಅದರಲ್ಲೂ ಈ ಮೈಸೂರ್ ರಸ್ತೇಲಿ ಮಾತ್ರ ಇವಾಗ ಪ್ರಯಾಣ ಮಾಡ್ಬೇಕು ಅಂದ್ರೆ ಆಮೆಯ ವೇಗವ ಸರಿ ಅನ್ನುವಷ್ಟು ಟ್ರಾಫಿಕ್ ತೊಂದರೆ.

ಏಳ್ನೂರ್ ಮೀಟ್ರು ಟ್ರಾಫಿಕ್ ಆದರೆ ಇದು ನಮಗೆ ನಿತ್ಯ ಕರ್ಮ, ಗೋಳು ಎಂದು ಭಾವಿಸುತ್ತೇವೆ, ಆದರೆ ಬರೋಬ್ಬರಿ ಏಳುನೂರು ಕಿಲೋ ಮೀಟರ್ ದೂರದಷ್ಟು ಟ್ರಾಫಿಕ್ ಜಾಮ್ ಆದರೆ ನಾವು ನೀವು ಸಹಿಸುತ್ತೇವೆಯೇ ಖಂಡಿತಾ ಇಲ್ಲ. ಇದು ಆಶ್ಚರ್ಯವಾದರು ನಿಜ ಇದು ನಡೆದಿರುವುದು ಫ್ರಾನ್ಸ್ ದೇಶದ ನಗರವೊಂದರಲ್ಲಿ ಕೋವೀಡ್ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಮತ್ತೆ ಮುಂದಿನ ಹಂತದ ಲಾಕ್ಡೌನ್ ಅನ್ನು ಘೋಷಿಸಿದ ಕೂಡಲೇ ನಗರದಲ್ಲಿದ್ದ ಹಲವು ಕಾರುಗಳು ನಗರಗಳತ್ತ, ಅವರವರ ಪ್ರದೇಶಕ್ಕೆ ಹೋಗುವತ್ತ ಧಾವಿಸಿದ್ದಾರೆ. ಇದರ ಪರಿಣಾಮವಾಗಿ ಅಕ್ಟೋಬರ್ ಇಪ್ಪತ್ತೊಂಬತ್ತರಂದು ಇಳಿ ಸಂಜೆ ಹೊತ್ತಲ್ಲಿ ರಸ್ತೆ ತುಂಬಾ ವಾಹನಗಳು ಇಳಿದು ಕಿಲೋಮೀಟರ್ ಗಟ್ಟಲೇ ಸಂಚಾರಿ ದಟ್ಟಣೆಯಾಗಿ ಎಲ್ಲರಿಗೂ ದಿಗ್ಬ್ರಮೆ ಆಗಿದೆ, ಬರೋಬ್ಬರಿ ಏಳು ನೂರು ಕಿಲೋಮೀಟರ್ ದೂರದಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು.