ಕನ್ನಡ ಚಿತ್ರರಂಗದ ಅಚ್ಚಳಿಯದ ಸೌಂದರ್ಯದ ರಾಣಿ ಅಂದರೆ ಒನ್ ಅಂಡ್ ಬ್ಯೂಟಿ ಕ್ವೀನ್ ನಟಿ ರಮ್ಯಾ. ರಮ್ಯಾ ಇತ್ತೀಚೆಗೆ ಸಾಕಷ್ಟು ಸಿನಿಮಾಗಳ ಪ್ರಚಾರ ಮತ್ತು ಒಂದಷ್ಟು ಸಿನಿಮಾಗಳ ಸುದ್ದಿಯಲ್ಲಿ ಕಾಣಸಿಗುತ್ತಿದ್ದಾರೆ. ರಮ್ಯಾ ಅವರು ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ನಂತರ ಸಿನಿಮಾರಂಗದ ನಂಟಿನಿಂದ ಕೊಂಚ ದಿನಗಳ ಕಾಲ ಅಂತರ ಕಾಯ್ದುಕೊಂಡಿದ್ದರು. ರಾಜಕೀಯವಾಗಿ ಸಕ್ರೀಯರಾದ ರಮ್ಯಾ ಅವರು ಇನ್ನು ಮುಂದೆ ರಮ್ಯಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಇದು ಈಗ ಸುಳ್ಳಾಗುವ ಸೂಚನೆ ಕಾಣುತ್ತಿದೆ ಎಂದು ಹೇಳಬಹುದು. ಇತ್ತೀಚೆಗೆ ಕೆಲವು ತಿಂಗಳಗಳಿಂದ ರಮ್ಯಾ ಅವರು ಕನ್ನಡದ ಹೊಸ ಹೊಸ ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡುತ್ತಾ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಚಿತ್ರಗಳ ಪೋಸ್ಟರ್ ಶೇರ್ ಮಾಡಿಕೊಳ್ಳುವ ಮೂಲಕ ಪ್ರಮೋಶನ್ ಮಾಡ್ತಾ ಇದ್ದಾರೆ.

ಇದು ರಮ್ಯಾ ಅವರು ಮತ್ತೇ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದೆ. ರಮ್ಯಾ ಅವರು ಸ್ವತಃ ಹೇಳಿಕೊಂಡಿರುವಂತೆ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ರೀ ಎಂಟ್ರಿ ಕೊಡೋದಾದ್ರೆ ತಮ್ಮ ಇಷ್ಟದ ನಟ ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಮೂಲಕವೇ ಎಂದು ತಿಳಿಸಿದ್ದರು. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ರಮ್ಯಾ ಅವರು ರಕ್ಷಿತ್ ಶೆಟ್ಟಿ ಜೊತೆ ರೀ ಎಂಟ್ರಿ ಆಗಲಿದೆ ಎಂದು ಸುದ್ದಿ ಹರಿದಾಡುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಿಲ್ಲ. ಇದೆಲ್ಲದರ ನಡುವೆ ರಮ್ಯ ಅವರು ತಮಗೆ ಸಾಹಸ ಸಿಂಹ ಡಾ.ವಿಷ್ಣು ವರ್ಧನ್ ಅವರ ಈ ಸಿನಿಮಾ ಅಂದ್ರೆ ಪಂಚ ಪ್ರಾಣವಂತೆ. ವಿಷ್ಣು ವರ್ಧನ್ ಅವರ ಅಭಿನಯದ ಬಂಧನ ಸಿನಿಮಾದ ನೂರೊಂದು ನೆನಪು ಎದೆಯಾಳದಿಂದ.

ನೀನು ನಕ್ಕರೆ ಹಾಲು ಸಕ್ಕರೆ, ಜಯಸಿಂಹ ಅಂತಹ ಸಿನಿಮಾದ ಹಾಡುಗಳು ಅಂದ್ರೆ ಅಚ್ಚುಮೆಚ್ಚು ಅಂತ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿದ್ದರು. ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹೌದು ನಟಿ ರಮ್ಯಾ ಅವರು ಡಾಲಿ ಧನಂಜಯ್ ಅವರ ನಟನೆಯ ಹೊಯ್ಸಳ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧನಂಜಯ್ ಅವರು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಿಢೀರ್ ಹೊಯ್ಸಳ ಚಿತ್ರದ ಶೂಟಿಂಗ್ ಸ್ಪಾಟ್ಗೆ ಎಂಟ್ರಿ ಕೊಟ್ಟ ರಮ್ಯಾ ಅವರನ್ನು ಕಂಡು ಚಿತ್ರತಂಡ ಫುಲ್ ಖುಷ್ ಆಗಿದೆ. ಈ ಹಿಂದೆ ಮದುವೆ ಕಾರ್ಯಕ್ರಮವೊಂದರಲ್ಲಿ ನಟ ಧನಂಜಯ್ ಮತ್ತು ರಮ್ಯಾ ಪರಸ್ಪರ ಭೇಟಿಯಾದಾಗ ಅಪ್ಪಿಕೊಳ್ಳುವ ಮೂಲಕ ಪರಸ್ಪರ ಕುಶಲೋಪರಿ ವಿಚಾರಿಸಿದ್ರು. ಇದೀಗ ಮೋಹಕ ತಾರೆ ರಮ್ಯಾ ಅವರು ಧನಂಜಯ್ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.