ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಹೆಸರಾಂತ ನಟಿ

ಹೊಸವರ್ಷ ಬಂದರೆ ಸಾಕು ಎಲ್ಲೆಡೆ ಮದುವೆ ಸುಗ್ಗಿ ಶುರುವಾಗುತ್ತದೆ. ಈ ವರ್ಷದ ಆರಂಭದ ತಿಂಗಳುಗಳಲ್ಲಿ ಹಲವಾರು ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಸಾಲಿಗೆ ಮತ್ತೊಬ್ಬ ಕನ್ನಡದ ಕಿರುತೆರೆಯ ನಟಿ ಸೇರ್ಪಡೆಗೊಂಡಿದ್ದಾರೆ. ಹೌದು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾದೆ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವ ತೇಜಸ್ವಿನಿ ಪ್ರಕಾಶ್ ಮದುವೆ ಸಂಭ್ರಮದಲ್ಲಿದ್ದಾರೆ. ಕೇವಲ ಕಿರುತೆರೆಯಲ್ಲಿ ಅಷ್ಟೇ ಅಲ್ಲದೆ ಹಲವಾರು ಸಿನಿಮಾಗಳಲ್ಲಿ ಸೈಡ್ ರೋಲ್ ಗಳಲ್ಲಿ ನಟಿ ತೇಜಸ್ವಿನಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕೂಡ ತೇಜಸ್ವಿನಿ ಭಾಗವಹಿಸಿದ್ದರು. ಸದ್ಯಕ್ಕೆ ಕಿರುತೆರೆಯತ್ತ ಮುಖ ಮಾಡಿರುವ ನಟಿ ತೇಜಸ್ವಿನಿ ಅವರು ತಮ್ಮ ಜೀವನದ ಹೊಸ ಅಧ್ಯಾಯವೊಂದನ್ನು ಶುರುಮಾಡುವ ಸಂಭ್ರಮದಲ್ಲಿದ್ದಾರೆ.

ಇತ್ತೀಚೆಗೆ ನಟಿ ತೇಜಸ್ವಿನಿಯವರು ಪನಿ ವರ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ಶಾಸ್ತ್ರೋಕ್ತವಾಗಿ ನೆರವೇರಿದ ಈ ಮದುವೆ ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ಮುಹೂರ್ತಕ್ಕೂ ಮೊದಲು ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ, ಚಪ್ಪರ ಪೂಜೆ ಸೇರಿದಂತೆ ಪ್ರತಿಯೊಂದು ಶಾಸ್ತ್ರದ ಫೋಟೋಗಳನ್ನು ತೇಜಸ್ವಿನಿಯವರು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ನಟ ನಟಿಯರು ತಮ್ಮ ಮದುವೆ ಸಮಾರಂಭಗಳಲ್ಲಿ ಯಾವ ರೀತಿಯ ಉಡುಪುಗಳನ್ನು ಧರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿ ಇದ್ದೇ ಇರುತ್ತದೆ.

ನಟಿ ತೇಜಸ್ವಿನಿ ಅವರು ತಮ್ಮ ಹಳದಿ ಶಾಸ್ತ್ರದಲ್ಲಿ ವೈಟ್ ಸೀರೆಯಲ್ಲಿ ಮಿಂಚಿದ್ದರು. ಇನ್ನು ಮಹೂರ್ತದಲ್ಲಿ ಮರೂನ್ ಬಣ್ಣದ ಗೋಲ್ಡನ್ ಬಾರ್ಡರ್ ಹೊಂದಿದ ರೇಷ್ಮೆ ಸೀರೆಯನ್ನು ಉಟ್ಟು ನಟಿ ತೇಜಸ್ವಿನಿ ಕಂಗೊಳಿಸುತ್ತಿದ್ದರು. ಇನ್ನು ರೇಷ್ಮೆ ಪಂಚೆ ಮತ್ತು ಶರ್ಟನ್ನು ಪನಿ ವರ್ಮಾ ಅವರು ಧರಿಸಿದ್ದರು. ಇವರ ವಿವಾಹ ಮಹೋತ್ಸವದಲ್ಲಿ ಸ್ಯಾಂಡಲ್ವುಡ್ ನಟ ಲವ್ಲಿ ಸ್ಟಾರ್ ಪ್ರೇಮ್ ದಂಪತಿ, ನಟಿ ಕಾರುಣ್ಯರಾಮ್, ಜಯರಾಮ್ ಕಾರ್ತಿಕ್, ಸಿಹಿಕಹಿ ಚಂದ್ರು, ವಾಣಿ ರಾವ್, ಮೇಕಪ್ ಆರ್ಟಿಸ್ಟ್ ಸಮೃದ್ಧಿ ಸೇರಿದಂತೆ ಹಲವಾರು ಸಿನಿಮಾ ಮಂದಿ ಭಾಗಿಯಾಗಿ ನಟಿ ತೇಜಸ್ವಿನಿ ಅವರಿಗೆ ಶುಭ ಹಾರೈಸಿದರು. ಸದ್ಯಕ್ಕೆ ನಟಿ ತೇಜಸ್ವಿನಿ ಹಾಗೂ ಪನಿ ವರ್ಮಾ ಅವರ ಮದುವೆ ಸಮಾರಂಭದ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

%d bloggers like this: