ದೈವಬಲ ಪ್ರಾಪ್ತಿ ಆಗಿ ಮನೆಯ ಎಲ್ಲಾ ಸಮಸ್ಯೆಗಳು ಪರಿಹಾರ ಆಗಲು ಈ ಬೇರು ಸಾಕು

ಮನುಷ್ಯನಿಗೆ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿರುತ್ತವೆ. ಈ ಕೆಲವು ಸಮಸ್ಯೆಗಳಿಗೆ ಕಾರಣ ಇವರಿಗೆ ದೈವಬಲ ಪ್ರಾಪ್ತಿ ಕಡಿಮೆ ಯಿರುತ್ತದೆ, ಪದೇಪದೇ ಕಷ್ಟಗಳು ಯಾವುದಾದರೊಂದು ರೂಪದಲ್ಲಿ ಕಾಣಿಸಿ ಕೊಳ್ಳುತ್ತವೆ. ಆರ್ಥಿಕವಾಗಿ ಹೊಡೆತ ಬಿದ್ದು ಮನೆ ಮತ್ತು ಮನದ ನೆಮ್ಮದಿ ಹಾಳಾಗುತ್ತದೆ. ಕೆಲವೊಮ್ಮೆ ಶತ್ರುಗಳ ಕಾಟ ನಿಮ್ಮನ್ನು ದಿಕ್ಕೆಡಿಸುತ್ತದೆ ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬಜೆ ಬೇರು ಕಪ್ಪನ್ನು ಬಳಸುವುದರಿಂದ ಸರ್ವ ಸಮಸ್ಯೆಗಳು ಶೀಘ್ರವಾಗಿ ನಿವಾರಣೆಯಾಗುತ್ತವೆ.

ಈ ಬಜೆ ಬೇರು ಸಿಗುವುದು ಕೆಲವು ಪೂಜಾ ಸಾಮಗ್ರಿ ಮತ್ತು ಗಂಧಿಗೆ ಅಂಗಡಿಗಳಲ್ಲಿ ಈ ಬೇರು ಸಿಗುತ್ತದೆ. ಈ ಬಜೇಬೇರಿನ ಕಪ್ಪನ್ನು ಇದನ್ನು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ಮಾಡುವುದು ಪರಿಣಾಮಕಾರಿಯಾಗಿದೆ ಈ ಬೇರಿನಿಂದ ಕಪ್ಪನ್ನು ತಯಾರು ಮಾಡಬೇಕು ಹೇಗೆ ಎಂದು ತಿಳಿಯುವುದಾದರೆ.

ನಿಮ್ಮ ಇಷ್ಟದೇವರ ನೆನೆದು ಸಂಕಲ್ಪ ಮಾಡಿಕೊಂಡು ಪೂಜೆಯನ್ನು ಮಾಡಿದ ನಂತರ ಒಂದು ಮಣ್ಣಿನ ದೀಪವನ್ನು ಹಚ್ಚಿ ದೀಪದಲ್ಲಿರುವ ಎಣ್ಣೆಗೆ ಬಜೆ ಬೇರನ್ನು ಲೇಪನ ಮಾಡುತ್ತಾ ಬಜೆ ಬೇರಿನ ತುದಿಯನ್ನು ಸುಡುತ್ತಾ ಬರಬೇಕು ಬಜೆ ಬೇರಿನ ಅರ್ಧದಷ್ಟು ನಂತರ ಕಪ್ಪಾಗಿ ಪರಿವರ್ತನೆಗೊಳ್ಳುತ್ತದೆ.

ಈ ಬೇರನ್ನು ಒಂದೆಡೆ ಕುಳಿತು ಕೊಂಡು ನೆಲೆವನ್ನು ಸ್ವಚ್ಛಗೊಳಿಸಿ ಆ ನೆಲದ ಮೇಲೆ ತೇಯ್ದೂ ಕಪ್ಪನ್ನು ತೆಗೆಯಬೇಕುಇಷ್ಟದ ದೇವರನ್ನು ಸಂಕಲ್ಪ ಮಾಡಿಕೊಂಡು ತಯಾರಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿನ ನಕರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಈ ಬಜೆ ಬೇರನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ತಯಾರಿಸಬೇಕು.

ತಯಾರಿಸಿದ ಬಜೆ ಬೇರಿನ ಈ ಕಪ್ಪನ್ನು ಪ್ರತಿನಿತ್ಯ ಹಣೆಗೆ ಬೊಟ್ಟಿನ ರೂಪದಲ್ಲಿ ಇಡಬೇಕು ಇದರಿಂದ ನಿಮ್ಮ ಇಷ್ಟ ದೇವರ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ ಜೊತೆಗೆ ದೈವಬಲವು ಸಹ ಹೆಚ್ಚಾಗಿ, ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸರಾಗವಾಗಿ ನಿರ್ವಿಘ್ನವಾಗಿ ನಡೆಯುತ್ತವೆ. ಈ ಕಪ್ಪನ್ನು ಮನೆಯ ಸದಸ್ಯರೆಲ್ಲರೂ ಹಚ್ಚಿಕೊಳ್ಳಬೇಕು. ಆದರೆ ಈ ಬಜೆ ಬೇರಿನ ಕಪ್ಪನ್ನು ಮಹಿಳೆಯರು ಮುಟ್ಟಾಗಿರುವ ಸಂದರ್ಭದಲ್ಲಿ ಹಣೆಗೆ ಹಚ್ಚಿಕೊಳ್ಳಬಾರದು ಹಾಗೂ ಮನೆಯಲ್ಲಿ ಮಾಂಸಾಹಾರ ಮಾಡಿದ ದಿನ ಮತ್ತು ನೀವು ಮಾಂಸಹಾರ ಸೇವಿಸಿದ ದಿನ ಈ ಕಪ್ಪನ್ನು ಹಣೆಗೆ ಹಚ್ಚಬಾರದು.

ಈ ರೀತಿ ಮಾಡಿದರೆ ನಿಮಗೆ ಈ ಬಜೆ ಬೇರಿನ ಯಾವುದೇ ರೀತಿಯಲ್ಲಿ ಪ್ರಯೋಜನ ಬೀರುವುದಿಲ್ಲ ಪರಿಣಾಮಕಾರಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಬೇಕು ಎಂದಲ್ಲಿ ಈ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿ ಆಚರಿಸಬೇಕು. ನಿಮ್ಮ ಜೀವನದಲ್ಲಿ ಬದಲಾವಣೆಯಾಗಿ ಉತ್ಸಾಹ, ಉಲ್ಲಾಸ, ಸುಖಕರ ಜೀವನ ನಿಮ್ಮದಾಗುತ್ತದೆ ಎಂದು ಹಿರಿಯ ಜ್ಯೋತಿಷ್ಯಗಳು ಸಲಹೆ ನೀಡುತ್ತಾರೆ.

%d bloggers like this: