ದಾಖಲೆ ಗಳಿಕೆ ಕಂಡ ದಕ್ಷಿಣ ಭಾರತದ ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ

ಕೋವಿಡ್ ನಿಂದ ಕಂಗೆಟ್ಟಿದ್ದ ಮಲೆಯಾಳಂ ಚಿತ್ರರಂಗಕ್ಕೆ ಮತ್ತೆ ಕಲರವ ತಂದ ಮೋಹನ್ ಲಾಲ್ ನಟನೆಯ ಮರಕ್ಕರ್ ಸಿನಿಮಾ, ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅಭಿನಯದ ಮರಕ್ಕರ್ ಸಿನಿಮಾ ಇದೇ ಡಿಸೆಂಬರ್ 2 ರಂದು ದೇಶಾದ್ಯಂತ ಬಿಡುಗಡೆಯಾಗಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನದಲ್ಲಿ ಐತಿಹಾಸಿಕ ಕಥೆಯುಳ್ಳ ಮರಕ್ಕರ್ ಸಿನಿಮಾ ಬರೋಬ್ಬರಿ 14.56 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಭಾನುವಾರ ರಜಾದಿನವಾಗಿರುವ ಕಾರಣ ಅಂದು ಒಂದೇ ದಿನ ಕೇರಳ ರಾಜ್ಯದಲ್ಲಿ ಸರಿ ಸುಮಾರು 4.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಹೊರ ಬಿದ್ದಿದೆ.

ಇದು ಮಾಲಿವುಡ್ ಸ್ಟಾರ್ ನಟ ಮೋಹನ್ ಲಾಲ್ ವೃತ್ತೀ ಜೀವನದ ಅತಿದೊಡ್ಡ ಸಿನಿಮಾವಾಗಿದೆಯಂತೆ. ಐತಿಹಾಸಿಕ ಚಿತ್ರವಾದ ಈ ಮರಕ್ಕರ್ ಸಿನಿಮಾಗೆ ನಿರ್ದೇಶಕ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದು, ತಾರಾಗಣದಲ್ಲಿ ಮೋಹನ್ ಲಾಲ್, ಸುಹಾಸಿನಿ, ಅರ್ಜುನ್ ಸರ್ಜಾ, ಸುಹಾಸಿನಿ, ಪ್ರಭು, ಕೀರ್ತಿ ಸುರೇಶ್ ಮತ್ತು ಬಾಲಿವುಡ್ ಸ್ಟಾರ್ ನಟರಾದ ಸುನೀಲ್ ಶೆಟ್ಟಿ ಅಭಿನಯಿಸಿದ್ದಾರೆ. ನಿರ್ಮಾಪಕ ಆಂಟೋನಿ ಅವರು ಮರಕ್ಕರ್ ಸಿನಿಮಾಗೆ ಬರೋಬ್ಬರಿ 85-100 ಕೋಟಿ ರೂನಲ್ಲಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಮರಕ್ಕರ್ ಸಿನಿಮಾಗೆ ಪ್ರಿಯದರ್ಶನ್ ನಿರ್ದೇಶನದ ಜೊತೆಗೆ ಚಿತ್ರಕಥೆಯನ್ನು ಕೂಡ ಮಾಡಿದ್ದು, ತಿರು ಅವರ ಛಾಯಾಗ್ರಹಣವಿದ್ದು, ಎಂ.ಎಸ್ ಅಯ್ಯಪ್ಪನ್ ಅವರ ಸಂಕಲನವಿದೆ. ಈ ಮರಕ್ಕರ್ ಸಿನಿಮಾಗೆ ಅಂಕಿತ್ ಸೂರಿ ಮತ್ತು ರಾಹುಲ್ ರಾಜ್ ಅವರ ರಾಗಸಂಯೋಜನೆವಿದೆ. ಒಟ್ಟಾರೆಯಾಗಿ ಮಲೆಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿರುವ ಈ ಮರಕ್ಕರ್ ಸಿನಿಮಾದ ಗಳಿಕೆಯಿಂದಾಗಿ ಮಾಲಿವುಡ್ ಗೆ ಮತ್ತೆ ಹೊಸ ಹುರುಪು ಬಂದಂತಾಗಿದೆ ಎನ್ನಬಹುದು.

%d bloggers like this: