ಕನ್ನಡ ಚಿತ್ರರಂಗದ ಲವ್ ಬರ್ಡ್ಸ್ ಆಗಿರುವ ಡಾರ್ಲಿಂಗ್ ಕೃಷ್ಟ ಮತ್ತು ಮಿಲನಾ ನಾಗರಾಜ್ ಅವರು ಮದುವೆ ಆಗುತ್ತಿರುವ ವಿಷಯ ಈಗಾಗಲೇ ತಿಳಿದಿದೆ. ಮದುವೆಗೆ ಸಿದ್ದಗೊಳಿಸಿಕೊಳ್ಳುತ್ತಿರುವ ಈ ಜೋಡಿ ಇದೀಗ, ಸ್ಯಾಂಡಲ್ ವುಡ್ ನ ಎಲ್ಲಾ ತಮ್ಮ ಆಪ್ತರನ್ನು ಸ್ಟಾರ್ ನಟ ನಟಿಯರನ್ನು, ಚಿತ್ರರಂಗದ ಗಣ್ಯರನ್ನು ತಮ್ಮ ಮದುವೆಗೆ ಆಹ್ವಾನಿಸಲು ಆಮಂತ್ರಣ ಪತ್ರಿಕೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಮದುವೆಗೆ ಕೇವಲ ಸ್ಯಾಂಡಲ್ ವುಡ್ ಕಲಾವಿದರನ್ನಲ್ಲದೆ ಟಾಲಿವುಡ್ ಸ್ಟಾರ್ ನಟರನ್ನು ಕೂಡ ಆಹ್ವಾನಿಸುತ್ತಿದ್ದಾರೆ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. 2020ರ ವರ್ಷದ ಜನವರಿಯಲ್ಲಿ ಬಿಡುಗಡೆಗೊಂಡ ಲವ್ ಮಾಕ್ಟೇಲ್ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಸ್ವತಃ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕೂಡ ಅಭಿನಯಿಸಿದ್ದರು. ಚಿತ್ರದ ನಾಯಕಿಯಾಗಿ ಮಿಲನಾ ನಾಗರಾಜ್ ಅವರು ಅಭಿನಯಿಸುವುದರ ಜೊತೆಗೆ ತಾವೇ ಕೃಷ್ಣ ಜೊತೆಗೂಡಿ ಮಿಲನಾ ನಾಗರಾಜ್ ಅವರು ಚಿತ್ರದ ನಿರ್ಮಾಣದ ಜವಬ್ದಾರಿಯನ್ನು ಕೂಡ ತಾವೇ ಹೊತ್ತುಕೊಂಡಿದ್ದರು.

ನವಿರಾದ ಪ್ರೇಮಕಥೆಯನ್ನು ಒಳಗೊಂಡಿದ್ದ ಲವ್ ಮಾಕ್ಟೇಲ್ ಚಿತ್ರ ತುಂಬಾ ಭಾವನಾತ್ಮಕವಾಗಿ ಮೂಡಿಬಂದಿತ್ತು. ಬಿಡುಗಡೆಗೊಂಡ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದರು ಸಹ, ಕೊರೋನ ಲಾಕ್ ಡೌನ್ ಪರಿಣಾಮ ಚಿತ್ರಕ್ಕೆ ಭಾರಿ ಹೊಡೆತಬಿತ್ತು. ಜೊತೆಗೆ ಥೆಯೇಟರ್ ಸಮಸ್ಯೆಯೂ ಎದರಾಯಿತು ಆದರೂ ಸಹ ಒಳ್ಳೆಯ ಚಿತ್ರಕ್ಕೆ ಜನರು ಬೆಂಬಲ ನೀಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಂಡ ಲವ್ ಮಾಕ್ಟೇಲ್ ಚಿತ್ರ ಭಾರಿ ಜನಮನ್ನಣೆ ಪಡೆಯಿತು.

ಇದೀಗ ಈ ಲವ್ ಮಾಕ್ಟೇಲ್ ಚಿತ್ರ ತೆಲುಗಿನಲ್ಲಿಯೂ ಸಹ ರಿಮೇಕ್ ಆಗುತ್ತಿದ್ದು, ಕನ್ನಡದ ನಿರ್ದೇಶಕ ನಾಗಶೇಖರ್ ಈ ಲವ್ ಮಾಕ್ಟೇಲ್ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಕೂಡ ಇದೆ ಎಂದು ತಿಳಿಸಿದ್ದಾರೆ. ತೆಲುಗು ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿಯ ಪಾತ್ರವನ್ನು ನಟ ಸತ್ಯದೇವ್ ನಿರ್ವಹಿಸುತ್ತಿದ್ದಾರೆ. ಇನ್ನು ಕನ್ನಡ ಲವ್ ಮಾಕ್ಟೇಲ್ ಚಿತ್ರದಲ್ಲಿ ಮಿಲನಾ ನಾಗರಾಜ್ ನಿರ್ವಹಿಸಿದ ನಿಧಿಮಾ ಪಾತ್ರವನ್ನು ತೆಲುಗಿನಲ್ಲಿ ಮಿಲ್ಕ್ ಬ್ಯುಟಿ ಅಂತಲೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ ಅವರು ನಿಧಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ತೆಲುಗಿನ ಲವ್ ಮಾಕ್ಟೇಲ್ ಚಿತ್ರದ ಚಿತ್ರಿಕರಣ ಭರದಿಂದ ಸಾಗುತ್ತಿದೆ. ಇದೇ ಸಂಧರ್ಭದಲ್ಲಿ ಶೂಟಿಂಗ್ ಸ್ಟಾಟ್ ಗೆ ಭೇಟಿ ಕೊಟ್ಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ನಟಿ ತಮನ್ನಾ ಭಾಟಿಯಾ ಅವರಿಗೆ ಆಮಂತ್ರಣ ಪತ್ರಿಕೆ ಕೊಟ್ಟು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ, ಜೊತೆಗೆ ನಟ ಸತ್ಯದೇವ್ ಸೇರಿದಂತೆ ಒಂದಷ್ಟು ಟಾಲಿವುಡ್ ನಟ ನಟಿಯರಿಗೆ ಆಮಂತ್ರಣ ಪತ್ರಿಕೆ ನೀಡಿ ತಮ್ಮ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಇನ್ನು ನಟಿ ತಮನ್ನಾ ಭಾಟಿಯಾ ಅವರಿಗೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಆಮಂತ್ರಣ ಪತ್ರಿಕೆ ನೀಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.