ದಕ್ಷಿಣ ಭಾರತದ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯ ಹೊಸ ಲುಕ್ ಅನಾವರಣ

ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಿರ್ದೇಶಕರಾದ ಮಣಿರತ್ನಂ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಅದ್ದೂರಿ ವೆಚ್ಚದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸೌತ್ ಸಿನಿ ಸ್ಟಾರ್ ನಟಿಯ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಈ ಸ್ಟಾರ್ ನಟಿಯ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದ್ರೇ ಈ ಬಿಗ್ ಬಜೆಟ್ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ನಟಿ ಯಾರು ಅನ್ನೋದನ್ನ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸುತ್ತೇವೆ. ಹೌದು ಇಂಡಿಯನ್ ಸಿನಿಮಾ ರಂಗದ ಸ್ಟಾರ್ ನಿರ್ದೇಶಕರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ನಿರ್ದೇಶಕ ಅಂದರೆ ಅದು ಮಣಿರತ್ನಂ. ನಿರ್ದೇಶಕ ಮಣಿರತ್ನಂ ಅವರ ಗರಡಿಯಲ್ಲಿ ಬೆಳೆದ ಅನೇಕ ನಟ ನಟಿಯರು ಚಿತ್ರರಂಗವನ್ನು ಆಳಿದ್ದಾರೆ. ಇಂತಹ ಪ್ರಸಿದ್ದ ನಿರ್ದೇಶಕನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಅನೇಕ ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ.

ಅಷ್ಟರ ಮಟ್ಟಿಗೆ ಮಣಿರತ್ನಂ ಅವರ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರುತ್ತದೆ. ಅದೇ ರೀತಿಯಾಗಿ ಮಣಿರತ್ನಂ ಅವರು ಸದ್ಯಕ್ಕೆ ತಮಿಳಿನ ಖ್ಯಾತ ಕಾದಂಬರಿಕಾರರಾದ ಕಲ್ಕಿ ಅವರ ಪೊನ್ನಿಯನ್ ಸೆಲ್ವನ್ ಕಾದಂಬರಿಯನ್ನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಬಹುದೊಡ್ಡ ತಾರಾಗಣ ಹೊಂದಿರುವ ಚಿತ್ರವಾಗಿದೆ. ಪ್ರಮುಖ ಪಾತ್ರಗಳಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರು ನಟಿಸುತ್ತಿದ್ದಾರೆ. ಹೌದು ಐಶ್ವರ್ಯ ರೈ ಬಚ್ಚನ್, ವಿಕ್ರಮ್, ಕಾರ್ತಿ ಸೇರಿದಂತೆ ಬಿಗ್ ಸ್ಟಾರ್ಸ್ ಈ ಚಿತ್ರದಲ್ಲಿ ಇದ್ದಾರೆ. ಇವರು ನಿರ್ವಹಿಸುವ ಪಾತ್ರಗಳ ಫೋಸ್ಟರ್ ಕೂಡ ಈಗಾಗಲೇ ರಿಲೀಸ್ ಆಗಿವೆ. ಅದರಂತೆ ಇದೀಗ ಮತ್ತೊಂದು ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ. ಹೌದು ತಮಿಳಿನ ಸ್ಟಾರ್ ನಟಿ ಆಗಿರುವ ತ್ರಿಷಾ ಅವರು ರಾಜಕುಮಾರಿ ಕುಂದವೈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತ್ರಿಷಾ ಅವರ ಈ ರಾಜಕುಮಾರಿಯ ಪೋಸ್ಟರ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಪೊನ್ನಿಯಿನ್ ಸೆಲ್ವನ್ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಎಲ್ಲವೂ ಅಂದುಕೊಂಡಂತಾದ್ರೆ ಇದೇ ಸೆಪ್ಟೆಂಬರ್ ತಿಂಗಳ 30ರಂದು ವರ್ಲ್ಡ್ ವೈಡ್ ಈ ಚಿತ್ರದ ಮೊದಲ ಭಾಗ ರಿಲೀಸ್ ಆಗಲಿದೆ. ಇನ್ನು ಸಿನಿಮಾ ಲೈಕಾ ಪ್ರೊಡಕ್ಷನ್ ಮತ್ತು ಮದ್ರಾಸ್ ಟಾಕೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನಿರ್ದೇಶನದ ಜವಬ್ದಾರಿ ಹೊತ್ತಿರುವ ಮಣಿರತ್ನಂ ಅವರು ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಐದು ಭಾಷೆಯಲ್ಲಿ ತಯಾರಾಗುತ್ತಿದ್ದು, ಎ.ಆರ್ ರೆಹಮಾನ್ ರಾಗ ಸಂಯೋಜನೆ ನೀಡುತ್ತಿದ್ದಾರೆ. ರವಿ ವರ್ಮನ್ ಅವರ ಕ್ಯಾಮರ್ ವರ್ಕ್, ಶ್ರೀಕರ್ ಪ್ರಸಾದ್ ಅವರ ಸಂಕಲನ ಈ ಪೊನ್ನಿಯಿನ್ ಸೆಲ್ವನ್ ಎಂಬ ಮಹಾ ದೃಶ್ಯಕಾವ್ಯಕ್ಕಿದೆ.

%d bloggers like this: