ದಕ್ಷಿಣ ಭಾರತದ ಮತ್ತೊಂದು ಚಿತ್ರ ಮುಂದೂಡಿಕೆ, ಕೆಜಿಎಫ್ ಚಾಪ್ಟರ್2 ಚಿತ್ರಕ್ಕೆ ಹೊಡೆತ ಬೀಳುವ ಸಾಧ್ಯತೆ!

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಏರಿಕೆ ಆಗುತ್ತಲೇ ಇವೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಸೀಮಿತ ಅವಧಿಗೆ ಲಾಕ್ ಡೌನ್ ಕೂಡ ಮಾಡಲಾಗಿದೆ. ಅದರಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೋವಿಡ್ ಮತ್ತು ಓಮೈಕ್ರಾನ್ ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಮತ್ತೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಈ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಸಿನಿಮಾ ಕ್ಷೇತ್ರಕ್ಕೆ ಅಪಾರ ಹೊಡೆತ ನೀಡಿದೆ. ರಿಲೀಸ್ ಆಗಿ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದ ಬಹುತೇಕ ಸಿನಿಮಾಗಳಿಗೆ ಇದು ಭಾರಿ ಹೊಡೆತ ನೀಡಿದೆ. ಇದಲ್ಲದೆ ಇದೀಗ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದ್ದಂತಹ ಸಿನಿಮಾಗಳಿಗೂ ಕೂಡ ಈಗ ಸಂಕಷ್ಟ ಎದುರಾಗಿದೆ. ಈಗಾಗಲೇ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಎಲ್ಲಾ ಚಿತ್ರಗಳು ಕೂಡ ತಮ್ಮ ರಿಲೀಸ್ ಡೇಟ್ ಗಳನ್ನ ಮುಂದೂಡಿದ್ದಾವೆ.

ಅದರಂತೆ ಇದೀಗ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರ ಕೂಡ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಫೆಬ್ರವರಿ 4ರಂದು ಆಚಾರ್ಯ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ಈ ಆಚಾರ್ಯ ಸಿನಿಮಾ ನೋಡುವುದಕ್ಕಾಗಿ ಮೆಗಾ ಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳು ಭಾರಿ ಕಾತುರದಿಂದ ಕಾಯುತ್ತಿದ್ದರು. ಈ ಆಚಾರ್ಯ ಸಿನಿಮಾಗೆ ಮ್ಯಾಟಿನಿ ಎಂಟರ್ಟೈನ್ ಮೆಂಟ್ ಮತ್ತು ಕೊನಿದೆಲಾ ಪ್ರೊಡಕ್ಷನ್ ಅಡಿಯಲ್ಲಿ ನಿರಂಜನ್ ರೆಡ್ಡಿ ಅವರು ಬರೋಬ್ಬರಿ 140 ಕೋಟಿ ಬಂಡವಾಳ ಹೂಡಿ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಟಾಲಿವುಡ್ ಸುಪ್ರಸಿದ್ದ ನಿರ್ದೇಶಕ ಕೊರಾಟಲ ಶಿವ ಅವರು ಆಕ್ಷನ್ ಕಟ್ ಹೇಳಿರುವ ಈ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ತೇಜಾ, ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಆಚಾರ್ಯ ಸಿನಿಮಾ ಕೂಡ ಒಂದಾಗಿತ್ತು. ದೇಶದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡ ಹಿನ್ನೆಲೆ ಆಚಾರ್ಯ ಚಿತ್ರವನ್ನು ಫೆಬ್ರವರಿ 4ರಂದು ಬಿಡುಗಡೆ ಮಾಡುವ ಬದಲು ಏಪ್ರಿಲ್1 ರಂದು ರಿಲೀಸ್ ಮಾಡುವುದಾಗಿ ತಿಳಿಸಿದೆ. ಒಟ್ಟಾರೆಯಾಗಿ ಆಚಾರ್ಯ ಸಿನಿಮಾವನ್ನು ಫೆಬ್ರವರಿ 4ರಂದು ಕಣ್ತುಂಬಿಕೊಳ್ಳುತ್ತೇವೆ ಎಂದು ನಿರೀಕ್ಷೆಯಲ್ಲಿದ್ದ ಚಿರಂಜೀವಿ ಅವರ ಅಭಿಮಾನಿಗಳಿಗೆ ನಿರಾಸೆ ಆಗಿದೆ.

%d bloggers like this: