ದಕ್ಷಿಣ ಭಾರತದ ಸುಪ್ರಸಿದ್ಧ ನಟನಿಗೆ ನಿರ್ದೇಶಕ ಮಾಡ್ತಿದ್ದಾರೆ ಕನ್ನಡದ ಯುವ ನಿರ್ದೇಶಕ

ಕನ್ನಡ ಚಿತ್ರರಂಗದ ಪ್ರಯೋಗಾತ್ಮಕ ನಿರ್ದೇಶಕ ಅಂತ ಹೇಳೋದಾದ್ರೆ ಮೊದಲ ಪಂಕ್ತಿಯಲ್ಲಿ ಬರೋ ಹೆಸರೇ ಲೂಸಿಯಾ ಪವನ್ ಕುಮಾರ್. ಲೈಫೂ ಇಷ್ಟೇನೇ ಅನ್ಕೊಂಡು ಸಿನಿಮಾ ನಿರ್ದೇಶನಕ್ಕೆ ಇಳಿದ ಪವನ್ ಕುಮಾರ್ ಅವರಿಗೆ ಬಿಗ್ ಬ್ರೇಕ್ ನೀಡಿದ ಸಿನಿಮಾ ಅಂದರೆ ಅದು ಲೂಸಿಯಾ. ಈ ಚಿತ್ರವನ್ನು ಪವನ್ ಕುಮಾರ್ ಕ್ರೌಡ್ ಫಂಡಿಂಗ್ ಮೂಲಕ ನಿರ್ಮಿಸಿದ್ರು. ಇದೊಂದು ಸೈಕಾಲಾಜಿಕಲ್ ಸಿನಿಮಾ. ಕನ್ನಡದಲ್ಲಿ ಲೂಸಿಯಾ ಎಂಬಂತಹ ಸೈಕಾಲಾಜಿಕಲ್ ವಿಭಿನ್ನ ಸಿನಿಮಾ ಮಾಡಿ ಕೇವಲ ಕನ್ನಡದಲ್ಲಿ ಮಾತ್ರ ದೇಶಾದ್ಯಂತ ಸದ್ದು ಮಾಡಿದ್ರು ಪವನ್ ಕುಮಾರ್. ಇದೇ ಯಶಸ್ಸಿನ ನಂತರ ಯೂಟರ್ನ್ ಅಂತಹ ಸಾಮಾಜಿಕ ಸಂದೇಶವುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡಿ ತಾವು ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ ಅನ್ನೋದನ್ನ ಪ್ರೂವ್ ಮಾಡಿದ್ರು.

ಇದರ ಜೊತೆಗೆ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನ ಮಾಡುತ್ತಾ, ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರೀಯರಾಗಿ ಕಿರು ಚಿತ್ರಗಳನ್ನ ಕೂಡ ನಿರ್ದೇಶನ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ದ್ವಿತ್ವ ಎಂಬ ಚಿತ್ರ ಮಾಡಲು ಹೊರಟಿದ್ದ ಪವನ್ ಕುಮಾರ್ ಅವರಿಗೆ ಪುನೀತ್ ಅವರ ಅಕಾಲಿಕ ನಿಧನ ಆ ಪ್ರಾಜೆಕ್ಟ್ ಕನಸನ್ನ ಅಲ್ಲಿಗೇ ನಿಲ್ಲಿಸುವಂತಾಗಿದೆ. ಈ ದ್ವಿತ್ವ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿ ಪವನ್ ಕುಮಾರ್ ಮತ್ತು ಅಪ್ಪು ಕಾಂಬಿನೇಶನ್ ನಲ್ಲಿ ಒಂದು ದೊಡ್ಡ ಕಮಾಲ್ ನಡೆಯಲಿದೆ ಎಂದು ಅಭಿಮಾನಿಗಳು ಈ ದ್ವಿತ್ವದ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ರು. ಆದರೆ ಈ ಚಿತ್ರ ಈಗ ಅಭಿಮಾನಿಗಳ ಪಾಲಿಗ ಕನಸಾಗೇ ಉಳಿದೋಯ್ತು.

ಸದ್ಯಕ್ಕೆ ಯೋಗರಾಜ್ ಭಟ್ ಅವರ ಗಾಳಿಪಟ2 ಸಿನಿಮಾದಲ್ಲಿ ಗಣೇಶ್ ಅವರೊಟ್ಟಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಇದರ ನಡುವೆ ಪವನ್ ಕುಮಾರ್ ಅವರು ಮಾಲಿವುಡ್ ಸ್ಟಾರ್ ನಟ ಫಹಾದ್ ಫಾಸಿಲ್ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇತ್ತೀಚೆಗೆ ನಟ ಫಹಾದ್ ಫಾಸಿಲ್ ಅವರು ಕೇವಲ ಮಲೆಯಾಳಂ ಮಾತ್ರ ಅಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಕಮಲ್ ಹಾಸನ್ ಅವರ ವಿಕ್ರಂ ಚಿತ್ರದಲ್ಲಿ ಫಹಾದ್ ನಟನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಫಹಾದ್ ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಪವನ್ ಅವರ ಈ ಹೊಸ ಚಿತ್ರ ಕನ್ನಡ ಮತ್ತು ಮಲೆಯಾಳಂ ಎರಡೂ ಭಾಷೆಯಲ್ಲಿ ಕೂಡ ಬರಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

%d bloggers like this: