ದಕ್ಷಿಣ ಭಾರತದ ನಟ ನಟಿಯರು ಬಾಲಿವುಡ್ ಸಿನಿ ಇಂಡಸ್ಟ್ರಿಗೆ ಹಾರುವುದು ಸಾಮಾನ್ಯ. ಆದರೆ ಭಾರತದ ಸಿನಿರಂಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಬಾಲಿವುಡ್ ಸಿನಿಮಂದಿ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖಮಾಡುವುದು ಅತ್ಯಂತ ಕಡಿಮೆ. ಅದರಲ್ಲೂ ಬಾಲಿವುಡ್ ಹೀರೋಗಳು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟಿಸಿರುವುದು ತುಂಬಾ ಕಡಿಮೆ. ಆದರೆ ಈಗ ಸಮಯ ಬದಲಾಗುತ್ತಿದೆ. ಭಾರತದ ಸಿನಿರಂಗದಲ್ಲಿ ದಕ್ಷಿಣ ಭಾರತದ ನಟರ ಸಿನಿಮಾಗಲೇ ಬಾಲಿವುಡ್ ಗೆ ಹೋಲಿಸಿದರೆ ಅತಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್ ಸ್ಟಾರ್ ನಟರಿಗಿಂತ ಹೆಚ್ಚಾಗಿ ದಕ್ಷಿಣ ಭಾರತದ ಹೀರೋಗಳೇ ಪ್ಯಾನ್ ಇಂಡಿಯನ್ ಸ್ಟಾರ್ ಗಳಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಹಲವಾರು ಬಾಲಿವುಡ್ ನಟ ನಟಿಯರು ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ.

ಇತ್ತೀಚೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅಜಯ್ ದೇವ್ ಗನ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ ತೆಲುಗು ಸಿನಿಮಾಗೆ ಎಂಟ್ರಿ ನೀಡುತ್ತಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿರಲಿಲ್ಲ. ಆದರೆ ಈಗ ಸಲ್ಮಾನ್ ಖಾನ್ ಅಧಿಕೃತವಾಗಿ ತೆಲುಗು ಸ್ಟಾರ್ ನಟ ಚಿರಂಜೀವಿ ಸಿನಿಮಾಗೆ ಎಂಟ್ರಿ ಕೊಡುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಮೆಗಾಸ್ಟಾರ್ ಸದ್ಯಕ್ಕೆ ಗಾಡ್ ಫಾದರ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಸಲ್ಮಾನ್ ಖಾನ್ ಕೂಡ ಮೆಗಾಸ್ಟಾರ್ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾದಲ್ಲಿ ಬಣ್ಣಹಚ್ಚುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.



ಈ ಬಗ್ಗೆ ಮೊದಲ ಬಾರಿಗೆ ಅಧಿಕೃತವಾಗಿ ರಿಯಾಕ್ಟ್ ಮಾಡಿರುವ ಮೆಗಾಸ್ಟಾರ್ ಚಿರಂಜೀವಿ, ಗಾಡ್ ಫಾದರ್ ಚಿತ್ರಕ್ಕೆ ಸಲ್ಮಾನ್ ಖಾನ್ ಗೆ ಸ್ವಾಗತ ನಿಮ್ಮ ಆಗಮನ ಎಲ್ಲರಿಗೂ ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸಿದೆ. ನಿಮ್ಮ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ನಿಮ್ಮ ಆಗಮನದಿಂದ ಪ್ರೇಕ್ಷಕರಿಗೆ ಕಿಕ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಚಿರಂಜೀವಿ ಅವರು ಸಲ್ಮಾನ್ ಖಾನ್ ಅವರಿಗೆ ಹೂಗುಚ್ಚ ನೀಡುವ ಫೋಟೋವೊಂದನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಅಧಿಕೃತವಾಗಿದೆ. ಸಲ್ಮಾನ್ ಖಾನ್ ಟೈಗರ್ ಫ್ರಾಂಚೈಸಿಯ ಮೂರನೇ ಆವೃತ್ತಿ ಟೈಗರ್3 ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದರು.



ಕತ್ರಿನಾ ಕೈಫ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮುಂದಿನ ವರ್ಷ ಈ ಚಿತ್ರ ತೆರೆ ಕಾಣಲಿದೆ. ಈ ಸಿನಿಮಾ ಜೊತೆಗೆ ಸಲ್ಮಾನ್ ಖಾನ್ ಕಬಿ ಈದ್ ಕಬಿ ದಿವಾಲಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ಪಠಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಚಿರಂಜೀವಿ ಮತ್ತು ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಚಿತ್ರ ಮಲಯಾಳಂನ ಸೂಪರ್ ಹಿಟ್ ಪೊಲಿಟಿಕಲ್ ಥ್ರಿಲ್ಲರ್ ಲೂಸಿಫರ್ ಚಿತ್ರದ ರಿಮೇಕ್ ಆಗಿದೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿರುವ ಲೂಸಿಫರ್ ಚಿತ್ರದಲ್ಲಿ ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಕಾಣಿಸಿಕೊಂಡಿದ್ದರು. ಮಲಯಾಳಂನಲ್ಲಿ ಭರ್ಜರಿ ಯಶಸ್ಸು ಮಾಡಿದ ಈ ಚಿತ್ರ ಇದೀಗ ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ.



ತೆಲುಗುವಿನಲ್ಲಿ ಈ ಚಿತ್ರಕ್ಕೆ ಮೋಹನ್ ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ನಯನತಾರಾ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಕೇಳಿಬರುತ್ತಿದೆ. ಇನ್ನೂ ಮಲಯಾಳಂನಲ್ಲಿ ಪೃಥ್ವಿರಾಜ್ ನಿಭಾಯಿಸಿದ ಪಾತ್ರವನ್ನು ತೆಲುಗುವಿನಲ್ಲಿ ನಟ ಸಲ್ಮಾನ್ ಖಾನ್ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಗಾಡ್ ಫಾದರ್ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಗಾಡ್ ಫಾದರ್ ಚಿತ್ರದ ಪ್ರಮುಖ ಹಾಡಿಗೆ ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಅವರನ್ನು ಕರೆತರುವ ಯೋಜನೆ ಹಾಕಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.