ದಕ್ಷಿಣ ಭಾರತದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಚಿತ್ರಕ್ಕೆ ಧ್ವನಿ ಕೊಟ್ಟ ಬಾಲಿವುಡ್ ಸ್ಟಾರ್ ನಟ

ಪ್ರಭಾಸ್ ಅವರ ಮುಂದಿನ ಬಹು ನೀರಿಕ್ಷಿತ ಸಿನಿಮಾ ರಾಧೆ ಶ್ಯಾಮ್. ಈ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದು, ಭಾರತದ ಎಲ್ಲ ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಹೊಸದಾದ, ನೀವು ಕೇಳದಿರುವ ಮತ್ತು ನೋಡದಿರುವ ಪ್ರೇಮ ಕಥೆಯೊಂದು ಈ ಚಿತ್ರದಲ್ಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಹಸ್ತ ಸಾಮೂದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮ ಕಥೆ ಇದಾಗಿದ್ದು, ಅಭೂತಪೂರ್ವ ಪ್ರೇಮಕಥೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಡೈಲಾಗಗಳು ತುಂಬಾ ಫೇಮಸ್ ಆಗಿದೆ. ನಿನ್ನ ಪ್ರೀತಿ ನನಗೆ ಒಂದು ವರ ಅದನ್ನು ಪಡೆಯಲು ಯುದ್ಧಮಾಡಬೇಕು.

ನೀನು ರೋಮಿಯೋ ಅಲ್ಲದೇ ಇರಬಹುದು ಆದರೆ ನಾನು ಜೂಲಿಯಟ್. ನನ್ನ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತೀಯ ಎಂಬ ಡೈಲಾಗ್ ಗಳು ಪ್ರೇಮಯುದ್ಧದ ಕಥೆ ಹೇಳುವಂತಿವೆ. ಇನ್ನು ಈ ಚಿತ್ರದ ನಿರ್ದೇಶಕರಾದ ರಾಧಾಕೃಷ್ಣ ಕುಮಾರ್ ಅವರು 18 ವರ್ಷ ಸಮಯ ತೆಗೆದುಕೊಂಡು ಚಿತ್ರಕತೆಯನ್ನು ಬರೆದಿದ್ದಾರೆ. ಮೂರು ವರ್ಷ ಚಿತ್ರಕತೆ ಮಾಡಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಫೈಟ್ ಸೀನುಗಳು ಇರುವುದಿಲ್ಲ. ಬದಲಾಗಿ ನಾಯಕ ಮತ್ತು ನಾಯಕಿಯ ನಡುವೆ ಯುದ್ಧ ಗಳು ಇರುತ್ತವೆ. ಅದು ಪ್ರೀತಿಗಾಗಿ ನಡೆಯುವ ಯುದ್ಧ. ಈ ಯುದ್ಧ ತೆರೆ ಮೇಲೆ ಅದ್ಭುತವಾದ ಲೋಕವನ್ನು ಕಟ್ಟಿಕೊಡುತ್ತದೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಈ ಚಿತ್ರದ ಟ್ರೈಲರ್ ಲಾಂಚ್ ಕೂಡ ವಿಶೇಷವಾಗಿತ್ತು.

ಬರೋಬ್ಬರಿ 350 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಲವ್ ಸ್ಟೋರಿ ಸಿನಿಮಾ, ಈಗಾಗಲೇ ತನ್ನ ಟೀಸರ್ ಟ್ರೈಲರ್ ಹಾಗೂ ಸಾಂಗ್ಸ್ ಗಳಿಂದ ಚಿತ್ರಪ್ರೇಮಿಗಳನ್ನು ಇಂಪ್ರೆಸ್ ಮಾಡಿದೆ. ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳಂತೆ ಈ ಸಿನಿಮಾಕ್ಕೂ ರಿಲೀಸ್ ಡೇಟ್ ವಿಚಾರದಲ್ಲಿ ಮೂರು ಸಲ ಬದಲಾವಣೆಯಾಗಿದೆ. ಸದ್ಯಕ್ಕೆ ದೊರೆತಿರುವ ಮಾಹಿತಿಯ ಪ್ರಕಾರ ಮಾರ್ಚ್ 11 ರಂದು ರಾಧಾಕೃಷ್ಣ ಕುಮಾರ್ ನಿರ್ದೇಶನದ ರಾಧೇಶ್ಯಾಮ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಲಿದೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಈ ಚಿತ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕಡೆಯಿಂದ ಎನರ್ಜಿ ಸಿಕ್ಕಿದೆ. ಹೌದು ಇಂಡಿಯನ್ ಸಿನಿಮಾ ರಂಗದ ವೆರಿ ಫೇಮಸ್ ಕಂಚಿನ ಕಂಠದ ಅಮಿತಾಬ್ ಬಚ್ಚನ್ ಅವರಿಂದ ರಾದೆ ಶ್ಯಾಮ್ ಚಿತ್ರದ ಸ್ಟೋರಿ ನರೇಶನ್ ಮಾಡಿಸಲಾಗಿದೆ.

ಬಚ್ಚನ್ ಅವರ ಕಂಠ ಚಿತ್ರಕ್ಕೆ ಸಿಕ್ಕಿರುವುದು ಸಿನಿಮಾ ತಂಡಕ್ಕೆ ಬಿಗ್ ಪ್ಲಸ್ ಪಾಯಿಂಟ್. ಐದು ಭಾಷೆಗಳಲ್ಲಿ ರಾಧೇಶ್ಯಾಮ ಬರುತ್ತಿದ್ದು, ಐದು ಭಾಷೆಗಳಲ್ಲೂ ಅಮಿತಾ ಬಚ್ಚನ್ ಅವರ ಧ್ವನಿ ಕೇಳಲು ಸಿಗುತ್ತಾ ಎಂಬುದನ್ನು ಕಾದುನೋಡಬೇಕು. ಅಲ್ಲದೆ ಸಾಲುಸಾಲು ಕೋಟಿ ಬಜೆಟ್ನ ಸಿನಿಮಾಗಳಲ್ಲಿ ಪ್ರಭಾಸ್ ಅವರು ನಟಿಸುತ್ತಿದ್ದು, ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಜೊತೆಗೂ ನಟಿಸುತ್ತಿದ್ದಾರೆ. ಪ್ರಭಾಸ್ ಹಾಗೂ ದೀಪಿಕಾ ಅವರು ನಟಿಸುತ್ತಿರುವ ಈ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಶೂಟಿಂಗ್ ಸೆಟ್ ನಲ್ಲಿ ಬಚ್ಚನ್ ಅವರ ಸ್ನೇಹ, ಪ್ರೀತಿಯನ್ನು ಗಳಿಸಿರುವ ಪ್ರಭಾಸ್ ರಾಧೇಶ್ಯಾಮ್ ಚಿತ್ರದ ಸ್ಟೋರಿ ನರೇಶನ್ ಗೆ ಬಚ್ಚನ್ ಅವರ ಧ್ವನಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

%d bloggers like this: