ದಕ್ಷಿಣ ಭಾರತದ ಬಹು ನಿರೀಕ್ಷಿತ RRR ಚಿತ್ರದ ನಟರ ಸಂಭಾವನೆ ಎಷ್ಟು ಗೊತ್ತೇ

ಟಾಲಿವುಡ್ ನಲ್ಲಿ ಇದೀಗ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಆರ್.ಆರ್.ಆರ್. ಸಿನಿಮಾದ ಕಲಾವಿದರ ಸಂಭಾವನೆಯ ವಿಚಾರ ಭಾರಿ ಸದ್ದು ಮಾಡುತ್ತಿದೆ. ಹೌದು ಇಡೀ ಭಾರತೀಯ ಚಿತ್ರರಂಗವೇ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಆರ್.ಆರ್.ಆರ್.ಸಿನಿಮಾ ಇನ್ನು ಕೆಲವೇ ದಿನಗಳಲ್ಲೇ ಬೆಳ್ಳಿ ಪರದೆಯ ಮೇಲೆ ರಾರಾಜಿಸಲಿದೆ. ಟಾಲಿವುಡ್ ಸ್ಟಾರ್ ನಟರಾದ ಜ್ಯೂನಿಯರ್ ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜಾ ಜೋಡಿ ನಾಯಕತ್ವದ ಈ ಮಲ್ಟಿ ಸ್ಟಾರರ್ ಸಿನಿಮಾ ಈಗಾಗಲೇ ತನ್ನ ಟೀಸರ್, ಟ್ರೇಲರ್ ಮತ್ತು ಹಾಡುಗಳಿಂದ ಸಾಕಷ್ಟು ನಿರೀಕ್ಷೆ ಉಂಟು ಮಾಡಿದೆ. ಮುಂದಿನ ವರ್ಷ 2022 ಜನವರಿ 7 ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಈ ರೌದ್ರಂ ರಣಂ ರುಧಿರಂ ಚಿತ್ರದ ಪ್ರಮೋಶನ್ ಕಾರ್ಯ ಕೂಡ ದೇಶದ ವಿವಿಧ ಭಾಗಗಳಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಟಾಲಿವುಡ್ ಖ್ಯಾತ ನಿರ್ದೇಶಕ ಎಸ್. ಎಸ್.ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆರ್.ಆರ್.ಆರ್. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ಸ್ಸ್ ಆದಂತಹ ನಟ ಅಜಯ್ ದೇವಗನ್ , ನಟಿ ಆಲಿಯಾ ಭಟ್, ಶ್ರೀಯಾ ಶರಣ್, ರಾಹುಲ್ ರಾಮಕೃಷ್ಣ ಸೇರಿದಂತೆ ಹಾಲಿವುಡ್ ನಟರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿ.ವಿ.ವಿ.ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಡಿ.ವಿ.ವಿ ದಾನಯ್ಯ ಅವರು ನಿರ್ಮಾಣ ಮಾಡಿರುವ ಬರೋಬ್ಬರಿ ನಾಲ್ಕು ನೂರು ಕೋಟಿ ವೆಚ್ಚದ ಆರ್.ಆರ್.ಆರ್ ಸಿನಿಮಾದಲ್ಲಿ ನಟಿಸಾರುವ ಜ್ಯೂನಿಯರ್ ಎನ್.ಟಿ. ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ತಲಾ ನವವತ್ತೈದು ಕೋಟಿಯನ್ನ ಸಂಭಾವನೆಯಾಗಿ ನೀಡಿದ್ದಾರಂತೆ‌.

ಬಾಲಿವುಡ್ ನಟರಾದ ಅಜಯ್ ದೇವಗನ್ ಅವರಿಗೆ ಇಪ್ಪತ್ತೈದು ಕೋಟಿ ನೀಡಿದರೆ, ಸೀತಾ ಪಾತ್ರದಲ್ಲಿ ಅಭಿನಯಿಸಿರುವ ನಟಿ ಅಲಿಯಾ ಭಟ್ ಅವರಿಗೆ ಬರೋಬ್ಬರಿ ಒಂಭತ್ತು ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಇನ್ನು ಈ ಆರ್‌. ಆರ್.ಆರ್. ಸಿನಿಮಾದ ಸೂತ್ರಧಾರ ರಾಜಮೌಳಿ ಅವರಿಗೆ ಸಿನಿಮಾ ಗಳಿಸಿದ ಲಾಭಾಂಶದಲ್ಲಿ ಶೇಕಡಾ ಮೂವತ್ತರಷ್ಟು ಷೇರನ್ನು ಸಂಭಾವನೆಯಾಗಿ ಪಡೆಯಲಿದ್ದಾರಂತೆ. ಈಗಾಗಲೇ ಆರ್.ಆರ್.ಆರ್. ಸಿನಿಮಾ ಬರೋಬ್ಬರಿ ಎಂಟುನೂರು ಕೋಟಿ ರೂ. ಅಷ್ಟು ಗಳಿಕೆ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಮಲ್ಟಿ ಸ್ಟಾರ್ ಆರ್.ಆರ್.ಆರ್. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ರಾಗ ಸಂಯೋಜನೆ ಮಾಡಿದ್ದು, ರಾಜಮೌಳಿ ಅವರ ತಂದೆ ಕೆ.ವಿ.ವಿಜಯೆಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಒಟ್ಟಾರೆಯಾಗಿ ಇದೀಗ ಆರ್‌.ಆರ್.ಆರ್. ಇದೇ ಜನವರಿ 7ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿರುವ ಬಗ್ಗೆ ಸೌಂಡ್ ಮಾಡಿದರೆ ಮತ್ತೊಂದೆಡೆ ಇದೀಗ ಆರ್.ಆರ್.ಆರ್.ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ವಿಚಾರ ತಿಳಿದು ಟಾಲಿವುಡ್ ಮಂದಿ ನಿಬ್ಬೆರಗಾಗಿದ್ದಾರೆ.

%d bloggers like this: