ದಕ್ಷಿಣ ಭಾರತದ ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಚಿತ್ರಕ್ಕೆ ಕೈ ಜೋಡಿಸಿದ ಶಿವಣ್ಣ

ಒಂದೇ ಸಿನಿಮಾದಲ್ಲಿ ದಕ್ಷಿಣ ಭಾರತದ ದಿಗ್ಗಜ ನಟರು ಮತ್ತು ನಿರ್ದೇಶಕರು ಜೊತೆಯಾಗುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಹೊಸದೊಂದು ಟ್ರೆಂಡ್ ಶುರು ಆಗಿದೆ ಎನ್ನಬಹುದು. ಒಬ್ಬ ಸ್ಟಾರ್ ನಟನ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ ಅಂದರೆ ಸಾಕು ಅದೇ ವಾರದಲ್ಲಿ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ರಿಲೀಸ್ ಆಗಿ ಸ್ಟಾರ್ ವಾರ್ ಅಂತ ಶುರು ಆಗುತ್ತಿತ್ತು. ಇದರಿಂದಾಗಿ ಆಯಾಯ ನಟರ ಅಭಿಮಾನಿಗಳಿಗೆ ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಾಲೆಳೆದುಕೊಂಡು ತಮ್ಮ ನೆಚ್ಚಿನ ನಟರ ಬಗ್ಗೆ ಪ್ರಶಂಸೆ ಮೆಚ್ಚುಗೆಯ ಪೋಸ್ಟ್ ಮಾಡುತ್ತಿದ್ದರು‌. ಇದೀಗ ಭಾರತೀಯ ಚಿತ್ರರಂಗ ಅದರಲ್ಲಿಯೂ ಸೌತ್ ಸಿನಿಮಾ ರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಛಾಗುತ್ತಿವೆ.

ಮೊದಲೆಲ್ಲಾ ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಮತ್ತೊಬ್ಬ ಸ್ಟಾರ್ ನಟ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ನಡುವೆ ಇರುವ ಭಾಂದವ್ಯ ಗೆಳೆತನವನ್ನು ಪ್ರದರ್ಶನ ಮಾಡುತ್ತಿದ್ದರು. ಅದರಂತೆ ಇದೀಗ ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ಕೂಡ ನಟಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಇದೀಗ ಈ ಮಲ್ಟಿ ಸ್ಟಾರ್ ಸಿನಿಮಾ ಅಲ್ಲದಿದ್ದರೂ ಕೂಡ ಈ ಬಿಗ್ ಬಜೆಟ್ ಸಿನಿಮಾದಲ್ಲಿ ದಕ್ಷಿಣ ಭಾರತದ ಲೆಜೆಂಡ್ ಆಕ್ಟರ್ ಗಳು ಈ ಚಿತ್ರದ ಭಾಗವಾಗುತ್ತಿದ್ದಾರೆ. ಹೌದು ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಮತ್ತು ಕರವಾಳಿ ಬೆಡಗಿ ಪೂಜಾ ಹೆಗ್ಡೆ ಅಭಿನಯದ ರಾಧೇಶ್ಯಾಮ್ ಸಿನಿಮಾದ ಹಾಡು ಅಪಾರ ಜನ ಮೆಚ್ಚುಗೆ ಪಡೆದುಕೊಂಡಿದೆ. ಈ ಹಾಡು ಅಪಾರ ವೀಕ್ಷಣೆ ಪಡೆದು ಸಿನಿ ಪ್ರೇಕ್ಷಕರಿಗೆ ಈ ರಾಧೆ ಶ್ಯಾಮ್ ಸಿನಿಮಾ ಕುತೂಹಲ ಕೂಡ ಉಂಟುಮಾಡಿದ್ದು, ಈ ಚಿತ್ರ ನೋಡಲು ಪ್ರಭಾಸ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯ ರೊಮ್ಯಾಂಟಿಕ್ ಲವ್ ಸ್ಟೋರಿಯ ಈ ರಾಧೆ ಶ್ಯಾಮ್ ಸಿನಿಮಾಗೆ ರಾಧಕೃಷ್ಣ ಕುಮಾರ್ ಅವರು ಆಕ್ಷನ್ ಕಟ್ ಹೇಳಿದ್ದು, ನಿರ್ಮಾಪಕರಾದ ಭೂಷಣ್ ಕುಮಾರ್ ಬರೋಬ್ಬರಿ 350 ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ರಾಧೇಶ್ಯಾಮ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ನಿರತವಾಗಿದೆ. ಅದರಂತೆ ಇತ್ತೀಚೆಗೆ ಡಬ್ಬಿಂಗ್ ಕೆಲಸಗಳನ್ನು ಪೂರ್ಣಗೊಳಿಸುತ್ತಿದೆ. ಮೊದಲೇ ಹೇಳಿದಂತೆ ಈ ಬಿಗ್ ಬಜೆಟ್ ರಾಧೆ ಶ್ಯಾಮ್ ಚಿತ್ರ ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹಾಗಾಗಿ ಹಿಂದಿ ಅವತರಣೆಕೆಯ ರಾಧೆ ಶ್ಯಾಮ್ ಚಿತ್ರದ ನಿರೂಪಣೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಧ್ವನಿಯಾಗಿದ್ದಾರೆ.

ಅದರಂತೆ ಕನ್ನಡದ ಅವತರಣಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಿರೂಪಣೆ ಮಾಡಿದ್ದು, ಮಲೆಯಾಳಂ ಅವತರಣಿಕೆಯಲ್ಲಿ ನಟ, ನಿರ್ದೇಶಕರಾದ ಪೃಥ್ವಿರಾಜ್ ನಿರೂಪಣೆ ಮಾಡಿದ್ದಾರೆ. ಅದೇ ರೀತಿಯಾಗಿ ತೆಲುಗಿನಲ್ಲಿ ಖ್ಯಾತ ನಿರ್ದೇಶಕ ಜಕ್ಕಣ್ಣ ಖ್ಯಾತಿಯ ಎಸ್ಎಸ್ ರಾಜಧಾನಿ ಅವರು ರಾಧೇಶ್ಯಾಮ್ ಸಿನಿಮಾದ ನಿರೂಪಣೆ ಮಾಡಿದ್ದಾರೆ. ಈ ಮೂಲಕ ಈ ರಾಧೇಶ್ಯಾಮ್ ಸಿನಿಮಾದಲ್ಲಿ ದಕ್ಷಿಣ ಭಾರತದ ಸುಪ್ರಸಿದ್ದ ನಟರು ಒಟ್ಟಾಗಿರುವುದು ವಿಶೇಷವಾಗಿದೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಈ ರಾಧೇಶ್ಯಾಮ್ ಸಿನಿಮಾ ಜನವರಿ ತಿಂಗಳಿನಲ್ಲೇ ರಿಲೀಸ್ ಆಗಬೇಕಾಗಿತ್ತು. ಆದರೆ ಕೋವಿಡ್ ಹಿನ್ನೆಲೆ ಮುಂದೂಡಲಾಗಿತ್ತು. ಇದೀಗ ಇದೇ ಮಾರ್ಚ್ ತಿಂಗಳ 11ರಂದು ಈ ರಾಧೇಶ್ಯಾಮ್ ಸಿನಿಮಾ ದೇಶಾದ್ಯಂತ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.

%d bloggers like this: