ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟನ ಚಿತ್ರದಲ್ಲಿ ಕರ್ನಾಟಕ ಮೂಲದ ನಟಿ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸಿನ ಬೆನ್ನಟ್ಟಿ ಹೋಗುತ್ತಾನೆ. ಆದರೆ ಯಶಸ್ಸು ಒಂದು ರಾತ್ರಿಯಲ್ಲಿ ಸಿಗುವಂತದ್ದಲ್ಲ. ಅದಕ್ಕೆ ಶ್ರಮ ಬೇಕು, ಸಮಯ ಬೇಕು. ಜೀವನದಲ್ಲಿ ಯಶಸ್ಸು ನಮ್ಮದಾಗಬೇಕೆಂದರೆ ಅದಕ್ಕೆ ಯಾವುದೇ ಶಾರ್ಟ್ಕಟ್ ಇರುವುದಿಲ್ಲ. ರಾಜ ಮಾರ್ಗವೇ ಅದಕ್ಕಿರುವ ದಾರಿ. ಆದರೆ ಕೆಲವರಿಗೆ ಒಂದೇ ಪ್ರಯತ್ನದಲ್ಲೇ ಯಶಸ್ಸು ಸಿಗುತ್ತದೆ. ಈಗ ನಾವು ಮಾತನಾಡುತ್ತಿರುವುದು ನಟಿ ಕೃತಿ ಶೆಟ್ಟಿ ಅವರ ಬಗ್ಗೆ. ಹೌದು ಸಿನಿಮಾರಂಗಕ್ಕೆ ಕಾಲಿಟ್ಟು ಅತಿವೇಗವಾಗಿ ಯಶಸ್ಸು ಪಡೆದುಕೊಂಡ ಸ್ಟಾರ್ ನಟಿ ಎಂಬ ಹೆಗ್ಗಳಿಕೆ ಕೃತಿ ಶೆಟ್ಟಿ ಅವರಿಗಿದೆ. ನಟಿ ಕೃತಿ ಶೆಟ್ಟಿ ಅವರ ಮೊದಲ ಚಿತ್ರ ಉಪ್ಪೆನ ಇವರಿಗೆ ಭಾರಿ ಯಶಸ್ಸು ತಂದು ಕೊಟ್ಟಿದೆ. ತಮ್ಮ ಮೊದಲ ಚಿತ್ರದ ಯಶಸ್ಸಿನ ನಂತರ ಸಾಲು ಸಾಲು ಆಫರ್ ಗಳು ಈ ನಟಿಗೆ ಬರುತ್ತಿದೆ. ವಿಶೇಷವೆಂದರೆ ಇಲ್ಲಿಯವರೆಗೆ ನಟಿ ಕೃತಿ ಶೆಟ್ಟಿ ಮಾಡಿರುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಬಹುಶಹ ಇವರ ಎಲ್ಲಾ ಸಿನಿಮಾಗಳು ಕ್ಲಿಕ್ ಆಗಲು ಕಾರಣ, ಇವರು ಸಿನಿಮಾಗಳನ್ನು ಅಳೆದು-ತೂಗಿ ಆಯ್ಕೆಮಾಡಿಕೊಳ್ಳುವುದು ಕಾರಣವಿರಬಹುದು.

ನಟಿ ಕೃತಿ ಶೆಟ್ಟಿ ಅವರು ಸ್ಟಾರ್ ನಟರ ಜೊತೆ ನಟನೆ ಮಾಡುವುದಕ್ಕಿಂತ ಒಂದೊಳ್ಳೆ ಕಥೆಯಲ್ಲಿ ಅಭಿನಯಿಸಬೇಕು ಎಂಬ ಆಶಯ ಹೊಂದಿದವರಾಗಿದ್ದಾರೆ. ಇದೇ ಕಾರಣದಿಂದ ಇತ್ತೀಚೆಗೆ ಸ್ಟಾರ್ ನಟರ ಜೊತೆ ನಟಿಸಲು ಬಂದ ಆಫರನ್ನು ರಿಜೆಕ್ಟ್ ಮಾಡಿ ಸುದ್ದಿಯಾಗಿದ್ದರು. ಹೌದು ನಟ ಬಾಲಯ್ಯ ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ಕೃತಿ ಶೆಟ್ಟಿ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ ಬಾಲಯ್ಯ ಅವರು ಚಿತ್ರರಂಗದಲ್ಲಿ ಸೀನಿಯರ್ ಮಾತ್ರವಲ್ಲದೆ, ವಯಸ್ಸಿನಲ್ಲೂ ಕೃತಿ ಅವರಿಗಿಂತ ತುಂಬಾನೇ ದೊಡ್ಡವರು. ಇದರಿಂದ ಜೋಡಿ ಹೊಂದಾಣಿಕೆಯಾಗುವುದಿಲ್ಲ ಎನ್ನುವ ಕಾರಣಕ್ಕೆ, ವಯಸ್ಸಿನ ಅಂತರದ ಕಾರಣ ನೀಡಿ ಈ ಚಿತ್ರವನ್ನು ಕೃತಿ ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಸದ್ಯಕ್ಕೆ ಕೃತಿ ಚಿತ್ರರಂಗದಲ್ಲಿ ಹೆಚ್ಚು ವಯಸ್ಸಾಗಿರುವ ಹಿರಿಯ ನಟರಿಗೆ ನಾಯಕಿಯಾಗಿ ಅಭಿನಯಿಸುವುದಿಲ್ಲ ಎಂದು ಹೇಳಿ ಸುದ್ದಿಯಲ್ಲಿದ್ದರು. ಅತಿವೇಗವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ಸುಗಳಿಸಿದ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಅವರ ನಂತರ ಕೃತಿ ಶೆಟ್ಟಿ ನಿಲ್ಲುತ್ತಾರೆ. ಸದ್ಯಕ್ಕೆ ಕೃತಿಗೆ ದೊಡ್ಡ ದೊಡ್ಡ ಚಿತ್ರಗಳ ಆಫರ್ ಗಳು ಬರುತ್ತಿವೆ.

ಕೃತಿ ಅಭಿನಯದ ಶ್ಯಾಮ ಸಿಂಗಾ ರಾಯ್ ಮತ್ತು ಬಂಗಾರ ರಾಜು ಚಿತ್ರಗಳು ಹಿಟ್ ಆಗಿವೆ. ಇನ್ನೂ ಮೂರು ಚಿತ್ರಗಳು ಕೃತಿ ಅವರ ಕೈಯಲ್ಲಿವೆ. ಕೃತಿ ಅವರ ಸಾಲು ಸಾಲು ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಹೀಗಾಗಿ ಕೃತಿ ಅವರು ಲಕ್ಕಿ ಹುಡುಗಿ ಎಂದೇ ಹೆಸರಾಗಿದ್ದಾರೆ. ಇದೀಗ ಮತ್ತೆ ನಟಿ ಕೃತಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ತೆಲುಗು ಸ್ಟಾರ್ ನಟ ಪ್ರಭಾಸ್ ಅವರ ಜೊತೆ ನಟಿಸುವ ಅವಕಾಶ ಇವರಿಗೆ ದೊರೆತಿದೆಯಂತೆ. ಹೌದು ನಿರ್ದೇಶಕ ಮಾರುತಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ನಟ ಪ್ರಭಾಸ್ ಅವರಿಗೆ ಮೂವರು ನಾಯಕಿಯರು ಇರಲಿದ್ದಾರೆ. ಕೃತಿ ಶೆಟ್ಟಿ ಕೂಡ ಪ್ರಭಾಸ್ ಜೊತೆಗೆ ನಾಯಕಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನು ಈ ಚಿತ್ರದ ಮೂರು ನಾಯಕಿಯರ ಪೈಕಿ ನಟಿ ಮಾಳವಿಕಾ ಮೋಹನ್ ಮತ್ತು ಕನ್ನಡದ ಶ್ರೀಲಿಲಾ ಹೆಸರು ಕೇಳಿಬಂದಿದೆ. ಮತ್ತು ಮೂರನೇ ನಾಯಕಿಯಾಗಿ ಕೃತಿ ಶೆಟ್ಟಿ ಅವರ ಹೆಸರು ಕೇಳಿಬಂದಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

%d bloggers like this: