ದಕ್ಷಿಣ ಭಾರತದ ಹಿಟ್ ಚಿತ್ರವನ್ನು ಹಿಂದಿಯಲ್ಲಿ ತರುತ್ತಿದ್ದಾರೆ ಹೃತಿಕ್ ರೋಶನ್ ಅವರು, ಯಾವ ಚಿತ್ರ ಗೊತ್ತಾ

ಬಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ಹೀರೋ ತಮ್ಮ ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ಅಚ್ಚರಿಯ ಕೊಡುಗೆ ನೀಡಿ ಭಾರಿ ಸುದ್ದಿಯಲ್ಲಿದ್ದಾರೆ. ಹೌದು ಹಿಂದಿ ಚಿತ್ರರಂಗದ ಸ್ಪುರದ್ರೂಪಿ ನಟ ಹೃತಿಕ್ ರೋಷನ್ ಅವರು ಇದೇ ಜನವರಿ 10ರಂದು ತಮ್ಮ 48ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ತಮ್ಮ ಕಣ್ಣೋಟದ ನಟನೆ, ಲುಕ್, ಸ್ಮೈಲ್, ಸ್ಟೈಲ್, ಡ್ಯಾನ್ಸ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟರಾಗಿದ್ದಾರೆ. ಅದರಲ್ಲಿಯೂ ತಮ್ಮ ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಂಗಳೆಯರ ಹೃದಯ ಗೆದ್ದಿರುವ ನಟ ಹೃತಿಕ್ ರೋಷನ್ ಅವರು ಭಾರತೀಯ ಚಿತ್ರರಂಗದ ಬಹು ಜನಪ್ರಿಯ ಬೇಡಿಕೆಯ ನಟ. ಇಂದಿಗೂ ಕೂಡ ಅದೇ ಚಾರ್ಮ್ ಉಳಿಸಿಕೊಂಡಿರುವ ಹೃತಿಕ್ ರೋಷನ್ ಇತ್ತೀಚೆಗೆ ತಮ್ಮ ಹೊಸ ಚಿತ್ರದ ನ್ಯೂ ಲುಕ್ ಪೋಸ್ಟರ್ ವೊಂದನ್ನ ರಿಲೀಸ್ ಮಾಡಿದ್ದಾರೆ.

ಹೌದು ಗಡ್ಡ ಬಿಟ್ಟು ಕಪ್ಪು ಬಣ್ಣದ ಗ್ಲಾಸ್ ಧರಿಸಿ ಖಡಕ್ ಲುಕ್ ಕೊಟ್ಟಿರುವ ಫೋಟೋವೊಂದನ್ನ ನಟ ಹೃತಿಕ್ ರೋಶನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ತಮಿಳಿನ ಸೂಪರ್ ಹಿಟ್ ಚಿತ್ರ ವಿಕ್ರಂ ವೇದ ಸಿನಿಮಾದ ಹಿಂದಿಯ ಅವತರಣಿಕೆಯದ್ದಾಗಿದೆ. ಹೌದು ತಮಿಳಿನಲ್ಲಿ ಆರ್.ಮಾಧವನ್ ಮತ್ತು ವಿಜಯ್ ಸೇತುಪತಿ ನಟಿಸಿದ ಪುಷ್ಕರ್ ಮತ್ತು ಗಾಯತ್ರಿ ಜೋಡಿಯಾಗಿ ನಿರ್ದೇಶನ ಮಾಡಿದ್ದ ವಿಕ್ರಂ ವೇದ ಸಿನಿಮಾ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ. ಮೂಲ ತಮಿಳು ವಿಕ್ರಂ ವೇದ ಸಿನಿಮಾ ನಿರ್ದೇಶನ ಮಾಡಿದ್ದ ಸ್ವತಃ ಪುಷ್ಕರ್ ಮತ್ತು ಗಾಯತ್ರಿ ಅವರೇ ಹಿಂದಿಗೂ ಡೈರೆಕ್ಟ್ ಮಾಡುತ್ತಿದ್ದಾರೆ.

ಟಿಸೀರಿಸ್ ಮತ್ತು ರಿಲಯನ್ಸ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಾಪಕ ಭೂಷಣ್ ಕುಮಾರ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ವಿಜಯ್ ಸೇತುಪತಿ ನಿರ್ವಹಿಸಿದ ವೇದ ಪಾತ್ರವನ್ನು ಮಾಡಲಿದ್ದಾರೆ ಎಂಬುದು ಪೋಸ್ಟರ್ ನೋಡಿದ ಮೇಲೆ ಖಚಿತವಾಗಿದೆ. ಮಾಧವನ್ ನಿರ್ವಹಿಸಿದ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಾಯಕಿಯಾಗಿ ಬಾಲಿವುಡ್ ಖ್ಯಾತ ನಟಿ ರಾಧಿಕಾ ಆಪ್ಟೆ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈಗಾಗಲೇ ಈ ಸಿನಿಮಾದ ಒಂದಷ್ಟು ಚಿತ್ರೀಕರಣ ನಡೆದಿದ್ದು ಇದೀಗ ಕೋವಿಡ್ ಲಾಕ್ಡೌನ್ ಸೇರಿದಂತೆ ಮಾರ್ಗಸೂಚಿಗಳನ್ನ ಅನುಸರಿಸಿ ಶೂಟಿಂಗ್ ಮಾಡಡೇಕಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷ ಸೆಪ್ಟೆಂಬರ್ ತಿಂಗಳೊಷ್ಟೊತ್ತಿಗೆ ಈ ಚಿತ್ರ ಥಿಯೇಟರ್ ಅಂಗಳಕ್ಕೆ ಬರಲಿದೆ ಎಂದು ತಿಳಿಸಿದೆ ಚಿತ್ರತಂಡ.

%d bloggers like this: