ಕಿಸ್ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ಯೂಟ್ ಅಂಡ್ ಬ್ಯೂಟಿಫುಲ್ ನಟಿ ಎಂದರೆ ಶ್ರೀಲೀಲಾ. ತಮ್ಮ ಮೊದಲ ಚಿತ್ರದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಶ್ರೀಲೀಲಾ ಅವರು ಗಳಿಸಿಕೊಂಡಿದ್ದಾರೆ. ಮೊದಲ ಚಿತ್ರದಿಂದಲೇ ಭರವಸೆಯ ನಟಿ ಎಂಬ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ನಟಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿ ಬಿಸಿಯಾಗಿದ್ದಾರೆ. ಕನ್ನಡದಲ್ಲಿ ಕಿಸ್, ಭರಾಟೆ ಮತ್ತು ರಿಲೀಸ್ ಗೆ ರೆಡಿಯಾಗಿರುವ ಬೈ ಟು ಲವ್ ಹಾಗೂ ತೆಲಗುದಲ್ಲಿ ಪೆಳ್ಳಿ ಸಂದಡಿಯಲ್ಲಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದನ್ನು ನೋಡಿದರೆ ಖುಷಿಯಾಗುತ್ತದೆ.

ಕನ್ನಡದ ಪ್ರತಿಭೆಗಳು ಎಲ್ಲೆಡೆ ಮಿಂಚುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ನಭಾ ನಟೇಶ್ ಅವರು ಟಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಶ್ರೀಲೀಲಾ ಅವರ ಸರದಿ. ಹೌದು ಇತ್ತೀಚಿಗೆ ದೊರೆತ ಮಾಹಿತಿ ಪ್ರಕಾರ ತೆಲುಗುವಿನ ಸೂಪರ್ ಸ್ಟಾರ್ ಜೊತೆ ನಟಿಸುವ ಅವಕಾಶ ಇವರಿಗೆ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹೊಸ ಚಿತ್ರಕ್ಕೆ ಪೂಜಾ ಹೆಗಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಸಿನಿಮಾಗೆ ಎರಡನೇ ಹೀರೋಯಿನ್ ಆಯ್ಕೆಯಲ್ಲಿ ಚಿತ್ರತಂಡ ಬಿಸಿ ಆಗಿತ್ತು.

ಈ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಮಹೇಶ್ ಬಾಬು ಅವರ ಜೊತೆ ಚರ್ಚೆ ನಡೆಸಿ ಕನ್ನಡದ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದ್ದು, ಇದಕ್ಕೆ ಮಹೇಶ್ ಬಾಬು ಅವರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಹರಿದಾಡುತ್ತಿದೆ. ಇನ್ನು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಅವರು 12 ವರ್ಷಗಳ ಬಳಿಕ ಮತ್ತೆ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅತಡು ಮತ್ತು ಕಲೇಜ ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಅದೇನೇ ಇರಲಿ ಶ್ರೀಲೀಲಾ ಅವರು ಮಹೇಶ್ ಬಾಬು ಅವರ ಜೊತೆ ನಟಿಸಲಿ ಎಂಬುದು ಶ್ರೀಲೀಲಾ ಅಭಿಮಾನಿಗಳ ಅತಿದೊಡ್ಡ ಆಸೆ.