ದಕ್ಷಿಣ ಭಾರತದ ಸ್ಟಾರ್ ನಟಿಯ ಚಿತ್ರದಲ್ಲಿ ಖ್ಯಾತ ಕ್ರಿಕೆಟರ್ ಶ್ರೀಶಾಂತ್

ದಕ್ಷಿಣ ಭಾರತದ ಆಪಲ್ ಬ್ಯೂಟಿ ಸಮಂತಾ ಜೊತೆ ಶ್ರೀಶಾಂತ್, ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಕ್ರಿಕೆಟಿಗ ಶ್ರೀಶಾಂತ್. ಕ್ರಿಕೆಟ್ ಭಾರತ ತಂಡದ ಆಟಗಾರ ಶ್ರೀಶಾಂತ್ ಅವರು 2013 ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ‌ಭಾಗವಹಿಸಿದ್ದರು ಎಂಬ ಆರೋಪದ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶ್ರೀಶಾಂತ್ ಅವರನ್ನ ಪಂದ್ಯದಿಂದ ತೆಗೆದಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕ್ರಿಕೆಟಿಗ ಶ್ರೀಶಾಂತ್ ಅವರನ್ನ ನಿರ್ದೋಷಿ ಎಂದು ಆರೋಪ ಮುಕ್ತ ಮಾಡಿ ಆದೇಶ ಹೊರಡಿಸಿತ್ತು‌. ಇದರ ಬೆನ್ನಲ್ಲೇ ಶ್ರೀಶಾಂತ್ ಅವರು ಜನವರಿಯಲ್ಲಿ ನಡೆದ ಸೈಯದ್ ಮುಫ್ತಾಕ್ ಅಲಿ ಟಿ.ಟ್ವೆಂಟಿ ಟೂರ್ನಿಯಲ್ಲಿ ಕೇರಳ ತಂಡದ ಪರವಾಗಿ ಆಡುವ ಮೂಲಕ ಶ್ರೀಶಾಂತ್ ಕ್ರಿಕೆಟ್ ಜಗತ್ತಿಗೆ ಕಮ್ ಬ್ಯಾಕ್ ಮಾಡಿದ್ದರು.

ಇದೀಗ ಕ್ರಿಕೆಟ್ ಲೋಕದ ಜೊತೆಗೆ ಸಿನಿಮಾ ಕ್ಷೇತ್ರಕ್ಕೂ ಕೂಡ ಹೆಜ್ಜಿ ಇಟ್ಟಿದ್ದಾರೆ. ಹೌದು ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಕಾದು ವಾಕುಲ ರೆಂಡು ಕಾಧಲ್ ಸಿನಿಮಾದಲ್ಲಿ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ನಟಿ ನಯನ ತಾರಾ, ಆಪಲ್ ಬ್ಯೂಟಿ ಸಮಂತಾ, ಮಕ್ಕಳ್ ಸೆಲ್ವನ್ ಖ್ಯಾತಿಯ ವಿಜಯ್ ಸೇತುಪತಿ,ಪ್ರಭು ಗಣೇಶನ್,ಭಾರ್ಗವ್ ಅಭಿನಯಿಸುತ್ತಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ಸೌತ್ ಸ್ಟಾರ್ಸ್ ಗಳ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಶ್ರೀಶಾಂತ್ ಅವರು ಫುಲ್ ಖುಷಿಯಲ್ಲಿದ್ದಾರಂತೆ.

ನನಗೆ ಒಂದು ಉತ್ತಮ ತಂಡದ ಮೂಲಕ ಸಿನಿರಂಗಕ್ಕೆ ಬರುತ್ತಿರುವುದು ಸಂತಸವಾಗಿದೆ. ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಈಗಲೇ ಎಲ್ಲಾವನ್ನು ಹೇಳಲು ಬಯಸುವುದಿಲ್ಲ ಎಂದು ತಮ್ಮ ಮೊದಲ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಕ್ರಿಕೆಟಿಗ ಶ್ರೀಶಾಂತ್. ಇನ್ನು ಈ ಕಾತು ವಾಕುಲ ರೆಂಡು ಕಾಧಲ್ ಚಿತ್ರವನ್ನು ರೌಡಿ ಪಿಕ್ಚರ್ಸ್ ಸೆವೆನ್ ಸ್ಕ್ರೀನ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಅನಿರುದ್ದ್ ರವಿಚಂದರ್ ರಾಗ ಸಂಯೋಜನೆ ಮತ್ತು ಶ್ರೀ ಕಾರ್ ಪ್ರಸಾದ್ ಅವರ ಛಾಯಾಗ್ರಹಣವಿದೆ.

%d bloggers like this: