ದಕ್ಷಿಣ ಭಾರತದಲ್ಲಿ ಯಾವ ನಟನೂ ಮಾಡದ ಅದ್ಭುತ ಕೆಲಸಕ್ಕೆ ಕೈ ಹಾಕಿದ ಕಿಚ್ಚ ಸುದೀಪ್ ಅವರು

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಪೋಸ್ಟರ್ ಮತ್ತು ಗ್ಲಿಂಪಸ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕನ್ನಡದಲ್ಲಿ ಕೆಜಿಎಫ್ ಚಿತ್ರದಂತಹ ಮತ್ತೊಂದು ಹೈಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಅದು ಫ್ಯಾಂಟಸಿ ಕಥಾ ಹಂದರ ಹೊಂದಿರುವ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಕ್ರಾಂತ್ ರೋಣ ಸಿನಿಮಾ. ಹೌದು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ವಿಕ್ರಾಂತ್ ರೋಣ ಸಿನಿಮಾ ಚಿತ್ರಮಂದಿರಗಳಲ್ಲಿ ರಾರಾಜಿಸಬೇಕಾಗಿತ್ತು. ಆದರೆ ಕೋವಿಡ್ ಲಾಕ್ ಡೌನ್ ಕಾರಣ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗುತ್ತಿತ್ತು. ಸದ್ಯಕ್ಕೆ ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಚಿತ್ರ ತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ಭರ್ಜರಿ ಯಾಗಿ ತೊಡಗಿಸಿಕೊಂಡಿದೆ.

ಬರೋಬ್ಬರಿ ನೂರು ಕೋಟಿ ಬಜೆಟ್ ಸಿನಿಮಾ ಎಂದೇ ಹೇಳಲಾಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಈಗಾಗಲೇ ದೇಶಾದ್ಯಂತ ಭರ್ಜರಿ ಪ್ರಚಾರ ನಡೆದಿದೆ. ಇದೀಗ ವಿಕ್ರಾಂತ್ ರೋಣ ಸಿನಿಮಾ ಕಳೆದ ಫೆಬ್ರವರಿ 24ರಂದು ರಿಲೀಸ್ ಆಗಲಿದೆ ಎಂದು ತಿಳಿಸಿತ್ತು. ಆದರೆ ಈ ದಿನಾಂಕ ಕೂಡ ಕಾರಣಾಂತರಗಳಿಂದ ಮುಂದೂಡಲಿದ್ದು ಚಿತ್ರದ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಜಾಕ್ ಮಂಜು ಅವರು ಅದ್ದೂರಿ ನಿರ್ಮಾಣದಲ್ಲಿ ತಯಾರಾಗಿರುವ ಈ ವಿಕ್ರಾಂತ ರೋಣ ಸಿನಿಮಾ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.ಇದೀಗ ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ಹೊಸದೊಂದು ಅಪ್ ಡೇಟ್ ನೀಡಿದ್ದಾರೆ.

ಅದೇನಪ್ಪಾ ಅಂದರೆ ವಿಕ್ರಾಂತ್ ರೋಣ ಸಿನಿಮಾ ಇಂಗ್ಲೀಷ್ ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಇದರ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಇಂಗ್ಲೀಷ್ ಅವತರಣಿಕೆಯ ಡಬ್ಬಿಂಗ್ ಮಾಡಿ ಮುಗಿಸಿದ್ದಾರಂತೆ. ಕನ್ನಡದ ಸ್ಟಾರ್ ನಟ ಇದೇ ಮೊದಲ ಬಾರಿಗೆ ಇಂಗ್ಲೀಷ್ ಭಾಷೆಗೆ ತಾನೇ ಸ್ವತಃ ಧ್ವನಿ ನೀಡಿದ್ದಾರೆ ಎಂದು ಅನೂಪ್ ಬಂಡಾರಿ ತಿಳಿಸಿದ್ದಾರೆ. ಫ್ಯಾಂಟಸಿ ವಿಕ್ರಾಂತ್ ರೋಣ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ವಿಕ್ರಾಂತ್ ರೋಣ ಚಿತ್ರದ ಗ್ಲಿಂಪಸ್ ನಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಖತ್ ಸೌಂಡ್ ಮಾಡಿದೆ. ಇದರಲ್ಲಿ ಕಿಚ್ಚನ ಎಂಟ್ರಿಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ವಿಕ್ರಾಂತ್ ರೋಣ ಸಿನಿಮಾವನ್ನು ಕಣ್ತುಂಬಿ ಕೊಳ್ಳಲು ಇಡೀ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿದೆ.

%d bloggers like this: