ದಕ್ಷಿಣ ಭಾರತದ ಈ ದೊಡ್ಡ ಚಿತ್ರದ ಡಿಜಿಟಲ್ ಹಕ್ಕುಗಳು 250 ಕೋಟಿಗೆ ಮಾರಾಟ

ಪ್ರಭಾಸ್ ಅವರ ಮುಂದಿನ ಬಹು ನೀರಿಕ್ಷಿತ ಸಿನಿಮಾ ರಾಧೆ ಶ್ಯಾಮ್. ಈ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದು, ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ನಲ್ಲಿ ಈ ಚಿತ್ರವು ಜಿ5 ವೇದಿಕೆಯಲ್ಲಿ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರವು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕ ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಮತ್ತು ಪ್ರಭಾಸ್ ಅವರ ಸ್ನೇಹಿತರು ಸೇರಿ ಹುಟ್ಟುಹಾಕಿರುವ ಸಂಸ್ಥೆ ಯುವಿ ಕ್ರಿಯೇಷನ್ಸ್. ರಾಧೇಶ್ಯಾಮ ಚಿತ್ರವು ಯುವಿ ಕ್ರಿಯೇಷನ್ ಸಂಸ್ಥೆಯ 12ನೇ ಸಿನಿಮಾ. ಯುವಿ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ಹೆಚ್ಚಾಗಿ ಕನ್ನಡದ ಹಾಗೂ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ.

ಹಸ್ತ ಸಾಮೂದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮ ಕಥೆ ಇದಾಗಿದ್ದು, ಅಭೂತಪೂರ್ವ ಪ್ರೇಮಕಥೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಡೈಲಾಗಗಳು ತುಂಬಾ ಫೇಮಸ್ ಆಗಿದೆ. ನಿನ್ನ ಪ್ರೀತಿ ನನಗೆ ಒಂದು ವರ. ಅದನ್ನು ಪಡೆಯಲು ಯುದ್ಧಮಾಡಬೇಕು. ನೀನು ರೋಮಿಯೋ ಅಲ್ಲದೇ ಇರಬಹುದು ಆದರೆ ನಾನು ಜೂಲಿಯಟ್. ನನ್ನ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತೀಯ ಎಂಬ ಡೈಲಾಗ್ ಗಳು ಪ್ರೇಮಯುದ್ಧದ ಕಥೆ ಹೇಳುವಂತಿವೆ. ಇನ್ನು ಈ ಚಿತ್ರದ ನಿರ್ದೇಶಕರಾದ ರಾಧಾಕೃಷ್ಣ ಕುಮಾರ್ ಅವರು ಸಮಯ ತೆಗೆದುಕೊಂಡು ಚಿತ್ರಕತೆಯನ್ನು ಬರೆದಿದ್ದಾರೆ. ಮೂರು ವರ್ಷ ಚಿತ್ರಕತೆ ಮಾಡಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಫೈಟ್ ಸೀನುಗಳು ಇರುವುದಿಲ್ಲ.

ಬದಲಾಗಿ ನಾಯಕ ಮತ್ತು ನಾಯಕಿಯ ನಡುವೆ ಯುದ್ಧ ಗಳು ಇರುತ್ತವೆ. ಅದು ಪ್ರೀತಿಗಾಗಿ ನಡೆಯುವ ಯುದ್ಧ. ಈ ಯುದ್ಧ ತೆರೆ ಮೇಲೆ ಅದ್ಭುತವಾದ ಲೋಕವನ್ನು ಕಟ್ಟಿಕೊಡುತ್ತದೆ. ಈ ಚಿತ್ರದಲ್ಲಿ ನಾವು ಹೊಸ ಪ್ರಭಾಸ್ ಅವರನ್ನು ತೋರಿಸಲು ಪ್ರಯತ್ನಿಸಿದ್ದೇವೆ. ಭಾರತದ ಎಲ್ಲ ಭಾಷೆಗಳಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೊಸದಾದ, ನೀವು ಕೇಳದಿರುವ ಮತ್ತು ನೋಡದಿರುವ ಪ್ರೇಮ ಕಥೆಯೊಂದು ಈ ಚಿತ್ರದಲ್ಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಈ ಚಿತ್ರದ ಟ್ರೈಲರ್ ಲಾಂಚ್ ಕೂಡ ವಿಶೇಷವಾಗಿತ್ತು. ಅಂದಹಾಗೆ ವಿಶೇಷವೆಂದರೆ ಈ ಚಿತ್ರದ ಟ್ರೈಲರ್ ಅನ್ನು ಪ್ರಭಾಸ್ ಅವರ ಅಭಿಮಾನಿಗಳು ತಮ್ಮ ಮೊಬೈಲುಗಳಲ್ಲಿ ಟಾರ್ಚ್ ಆನ್ ಮಾಡುವ ಮೂಲಕ ಟ್ರೈಲರ್ ಅನ್ನು ದೊಡ್ಡ ಪರದೆಯ ಮೇಲೆ ಮೂಡಿಸಿದರು.

ರಾಮೋಜಿ ಫಿಲಂ ಸಿಟಿ ಯ ವಿಶಾಲವಾದ ಮೈದಾನದಲ್ಲಿ ಈ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಅಷ್ಟು ವಿಶಾಲವಾದ ಮೈದಾನದಲ್ಲಿ ಶಿಳ್ಳೆ ಹಾಕುತ್ತಾ ಅಭಿಮಾನಿಗಳು ಕಟೌಟ್ ಗಳನ್ನು ಹತ್ತಿ ನಿಂತ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ. ಬಾಹುಬಲಿ ಚಿತ್ರದಿಂದ ಹೊಸ ಇತಿಹಾಸ ಸೃಷ್ಟಿಸಿದ ಪ್ರಭಾಸ್ ಅವರ ಈ ಚಿತ್ರ ಕೂಡ ಸಾಕಷ್ಟು ನೀರಿಕ್ಷೆ ಹುಟ್ಟಿಸಿದೆ. ಏಕೆಂದರೆ ಈ ಚಿತ್ರದ ಟ್ರೈಲರ್ ನೋಡಿದಾಗ ಎಲ್ಲರಿಗೂ ನೆನಪಾಗಿದ್ದು ಹಾಲಿವುಡ್ನ ಟೈಟಾನಿಕ್ ಸಿನಿಮಾ. ಚಿತ್ರದ ಮೇಕಿಂಗ್, ದೃಶ್ಯಗಳು, ಛಾಯಾಗ್ರಹಣ, ಔಟ್ ಲುಕ್ ಹೀಗೆ ಚಿತ್ರದ ಪ್ರತಿಯೊಂದು ಅಂಶವು ಟೈಟಾನಿಕ್ ಚಿತ್ರವನ್ನು ನೆನಪಿಸುವಂತೆ ಮಾಡಿದವು. ಆದರೆ ಕಥೆ ವಿಚಾರದಲ್ಲಿ ಅದೇ ಬೇರೆ ಇದೇ ಬೇರೆ ಎನ್ನುತ್ತದೆ ಚಿತ್ರತಂಡ. ಡಿಜಿಟಲ ಹಕ್ಕುಗಳು ಬರೋಬ್ಬರಿ ಎರಡನೂರಾ ಐವತ್ತು ಕೋಟಿಗೆ ಮಾರಾಟವಾಗಿ ದಾಖಲೆ ಬರೆದಿದೆ.

%d bloggers like this: